ಚಿತ್ರದುರ್ಗ: ನಗರದ ಎಪಿಎಂಸಿ ಮಾರಕಟ್ಟೆಯ ಹೂವಿನ ಯಾರ್ಡ್ನಲ್ಲಿ ಹಲವು ವರ್ಷಗಳಿಂದಲೂ ಹೂವಿನ ಅಳತೆಯಲ್ಲಿ ರೈತರಿಗೆ ಮೋಸವಾಗುತ್ತಿದೆ. ಅನ್ಯಾಯ ಸರಿಪಡಿಸಬೇಕು ಎಂದು ಒತ್ತಾಯಿಸಿ ರೈತಸಂಘದ ನೇತೃತ್ವದಲ್ಲಿ ಹೂವು ಬೆಳೆಗಾರರು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿದರು.

ನಗರದ ಪ್ರವಾಸಿ ಮಂದಿರದಲ್ಲಿ ಸೇರಿದ ರೈತ ಮುಖಂಡರು, ಹೂವಿನ ಬೆಳೆಗಾರರು ಜಿಲ್ಲಾಧಿಕಾರಿ ಕಚೇರಿವರೆಗೂ ಮೆರವಣಿಗೆ ನಡೆಸಿದರು. ವರ್ತಕರು, ಮಧ್ಯವರ್ತಿಗಳಿಂದ ಆಗುತ್ತಿರುವ ಅನ್ಯಾಯವನ್ನು ಜಿಲ್ಲಾಧಿಕಾರಿಗಳು ಸರಿಪಡಿಸಬೇಕು ಎಂದು ಘೋಷಣೆ ಕೂಗಿದರು.

ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಎಪಿಎಂಸಿ ಮಾರುಕಟ್ಟೆ ಕಾರ್ಯದರ್ಶಿ, ತೂಕ ಮತ್ತು ಅಳತೆ ಇಲಾಖೆ ಅಧಿಕಾರಿಗಳ ನೇತೃತ್ವದಲ್ಲಿ ಹೂವು ಅಳತೆಯನ್ನು ನಿಗದಿ ಮಾಡಲಾಗಿದೆ. 6 ಅಡಿಗೆ ಒಂದು ಮಾರು ಎನ್ನುವ ಲೆಕ್ಕದಲ್ಲಿ ಹೂವು ಖರೀದಿ ಮಾಡುವಂತೆ ಅಂಗಡಿ ಮಾಲೀಕರಿಗೆ, ವರ್ತಕರಿಗೆ ಸೂಚನೆ ನೀಡಲಾಗಿದೆ. ಆದರೆ ವರ್ತಕರು ಒಂದು ಮಾರು ಹೂವಿಗೆ 15–16 ಅಡಿ ಅಳತೆ ಮಾಡುವ ಮೂಲಕ ರೈತರಿಗೆ ಅನ್ಯಾಯ ಮಾಡುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.

1–2 ಅಡಿ ಹೆಚ್ಚಿಗೆ ತೆಗೆದುಕೊಂಡರೆ ರೈತರು ಯಾವುದೇ ಆಕ್ಷೇಪ ಮಾಡುವುದಿಲ್ಲ. ಆದರೆ ನಿಗದಿಗಿಂತ 10 ಅಡಿಗೂ ಹೆಚ್ಚಿಗೆ ಪಡೆಯುತ್ತಿರುವ ಕಾರಣ ರೈತರಿಗೆ ನಷ್ಟ ಉಂಟಾಗುತ್ತಿದೆ. ಈ ಕುರಿತು ಪ್ರಶ್ನೆ ಮಾಡಿದರೆ ಬೆಳೆಗಾರರ ಮಾತಿಗೆ ಬೆಲೆ ಇಲ್ಲದಂತಾಗಿದೆ. ಹಲವು ವರ್ಷಗಳಿಂದಲೂ ಈ ಅನ್ಯಾಯ ಮುಂದುವರಿಯುತ್ತಿದೆ. ಅಳತೆಯಲ್ಲಿ ಮೋಸವಾಗುತ್ತಿರುವ ಕಾರಣ ಬಹುತೇಕ ರೈತರು ಹೂವು ಬೆಳೆಯುವುದನ್ನೇ ಸ್ಥಗಿತಗೊಳಿಸುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.

ಜಿಲ್ಲೆಯ ಹಿರಿಯೂರು, ಚಿತ್ರದುರ್ಗ, ಚಳ್ಳಕೆರೆ, ಮೊಳಕಾಲ್ಮುರು ತಾಲ್ಲೂಕುಗಳಲ್ಲಿ ರೈತರು ಹೂವು ಬೆಳೆಯುತ್ತಾರೆ. ಹಲವು ರೈತರಿಗೆ ಹೂವಿನ ಬೆಳೆಯೇ ಬದುಕಿನ ಆಧಾರವಾಗಿದೆ. ಆದರೆ ಮಾರುಕಟ್ಟೆಯಲ್ಲಿ ಆಗುತ್ತಿರುವ ಅನ್ಯಾಯದಿಂದ ಬೆಳೆಗಾರರಿಗೆ ಸಂಕಷ್ಟ ಎದುರಾಗಿದೆ. ಹೂವಿನ ಅಳತೆ ಮುಗಿದ ನಂತರ ಉಳಿಕೆಯಾಗುವ ಸಲ್ವ ಮಟ್ಟದ ಹೂವನ್ನು ಅಳತೆಗೆ ಸೇರಿಸಿಕೊಳ್ಳದೇ ಉಚಿತವಾಗಿ ತೆಗೆದುಕೊಳ್ಳುತ್ತಿದ್ದಾರೆ. ಇದರಿಂದಲೂ ರೈತರಿಗೆ ಅನ್ಯಾಯವಾಗುತ್ತಿದೆ ಎಂದು ಆರೋಪಿಸಿದರು.

ಮಾರುಕಟ್ಟೆಯಲ್ಲಿ ಮಾರಾಟ ಮಾಡುವ ಹೂವಿಗೆ ನಿಗದಿ ಮಾಡಿರುವ ಕಮೀಷನ್ ಹೆಚ್ಚಾಗಿದ್ದು ಅದನ್ನು ಕಡಿಮೆ ಮಾಡಬೇಕು. ಅಧಿಕಾರಿಗಳು ನಿಗದಿ ಮಾಡಿರುವ ಹೂವಿನ ಪ್ರಮಾಣದಲ್ಲಿ ಹೆಚ್ಚಿಗೆ ತೆಗೆದುಕೊಳ್ಳಬಾರದು. ಮಾರುಕಟ್ಟೆಯಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದ್ದು ಅದನ್ನು ನಿಯಂತ್ರಣ ಮಾಡಬೇಕು. ಹೂವಿನ ವರ್ತಕರಿಗೆ ಮಾರುಕಟ್ಟೆಯಲ್ಲಿ ಮೂಲ ಸೌಲಭ್ಯ ಒದಗಿಸಬೇಕು ಎಂದು ಒತ್ತಾಯಿಸಿದರು.

ಪ್ರತಿಭಟನಾಕಾರರು ಜಿಲ್ಲಾಧಿಕಾರಿ ಕಚೇರಿ ಸಿಬ್ಬಂದಿಗೆ ಮನವಿ ಪತ್ರ ಸಲ್ಲಿಸಿದರು. ಮನವಿ ಸ್ವೀಕರಿಸಿದ ಸಿಬ್ಬಂದಿ ‘ಹೂವಿನ ಬೆಳೆಗಾರರ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಜಿಲ್ಲಾಧಿಕಾರಿ ಮಾರ್ಚ್ 11ರಂದು ಸಭೆ ಕರೆದಿದ್ದಾರೆ’ ಎಂದು ತಿಳಿಸಿದರು.

ಪ್ರತಿಭಟನೆಯಲ್ಲಿ ರೈತಸಂಘ ಜಿಲ್ಲಾ ಘಟಕದ ಅಧ್ಯಕ್ಷ ಹಂಪಯ್ಯನಮಾಳಿಗೆ ಧನಂಜಯ, ಮುಖಂಡರಾದ ಎನ್.ಎಸ್.ರಂಗೇಗೌಡ, ಡಿ.ಎಸ್.ಹಳ್ಳಿ ಮಲ್ಲಿಕಾರ್ಜುನ, ಸುರೇಶ್ ಬಾಬು, ಕಾಂತರಾಜು, ರಾಜಣ್ಣ, ಬಚ್ಚಬೋರನಹಟ್ಟಿ ತಿಪ್ಪೇಸ್ವಾಮಿ, ಗೋನೂರು ಮುಕ್ಕಣ್ಣ, ಪಾಪಣ್ಣ, ಡಿ.ಬಿ.ಮಹಾಂತಣ್ಣ, ಶಾಂತಪ್ಪ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.