ಹೊಸದುರ್ಗ: ‘ಕಾಲಕ್ಕೆ ತಕ್ಕಂತೆ ಕೃಷಿಯಲ್ಲೂ ಬದಲಾವಣೆ ತಂದರೆ ಅದಕ್ಕಿಂತ ಅಧಿಕ ಲಾಭ ಪಡೆಯುವ ಮತ್ತೊಂದು ಕ್ಷೇತ್ರ ಇಲ್ಲ’ ಎಂಬುದಕ್ಕೆ ತಾಲ್ಲೂಕಿನ ಕಸಬಾ ಹೋಬಳಿಯ ಹಳೇಕುಂದೂರು ಗ್ರಾಮದ ಗುರುಪ್ರಸಾದ್ ಕೆ.ಎಂ. ನಿದರ್ಶನವಾಗಿದ್ದಾರೆ.

ಕಲಾ ಪದವೀಧರರಾಗಿರುವ ಇವರು ಕೃಷಿ ತರಬೇತಿ ಕೇಂದ್ರದಲ್ಲಿ ಸಮಗ್ರ ಕೃಷಿ ಪದ್ಧತಿ ಬಗ್ಗೆ ತರಬೇತಿ ಪಡೆದಿದ್ದಾರೆ. 5 ಎಕರೆ ಭೂಮಿಯಲ್ಲಿ ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಂಡು ವರ್ಷಕ್ಕೆ ₹ 6ರಿಂದ ₹ 7 ಲಕ್ಷ ಆದಾಯ ಗಳಿಸುತ್ತಿದ್ದಾರೆ.

ಜಮೀನಿನಲ್ಲಿ ಮಾವು, ತೆಂಗು, ಅವರೆ, ಈರುಳ್ಳಿ, ಸಿರಿಧಾನ್ಯ ಬೆಳೆಗಳನ್ನು ಕಾಣಬಹುದು. ಸಾವಯವ ಗೊಬ್ಬರ ಘಟಕವಿದ್ದು, ಎರೆಹುಳುಗಳ ಸಹಾಯದಿಂದ ಗೊಬ್ಬರ ತಯಾರಿಸುತ್ತಿದ್ದಾರೆ. ಜಾನುವಾರುಗಳಿಗೆ ಮೇವು ಬೆಳೆಯಲಾಗುತ್ತಿದೆ. ಹಸುವಿನ ಗಂಜಲ ಬಳಸಿ, ಜೀವಾಮೃತ ತಯಾರಿಸಲಾಗುತ್ತಿದೆ. ರಾಸಾಯನಿಕ ಗೊಬ್ಬರಗಳ ಬಳಕೆ ಕಡಿಮೆ ಮಾಡಿ ಸಾವಯವ ಗೊಬ್ಬರಕ್ಕೆ ಆದ್ಯತೆ ನೀಡಲಾಗಿದೆ.

ಇವರು ಮಿಶ್ರ ಕೃಷಿಯಲ್ಲಿ ತೊಡಗಿದ್ದಾರೆ. ಸುಸಜ್ಜಿತ ಶೆಡ್ ನಿರ್ಮಿಸಿ, 3 ಹಸು, 25 ಕುರಿ, 30 ನಾಟಿಕೋಳಿ ಹಾಗೂ 5 ಮೊಲಗಳ ಸಾಕಣೆ ಮಾಡುತ್ತಿದ್ದಾರೆ. ಜೇನು ಕೃಷಿಗೂ ಆದ್ಯತೆ ನೀಡಿದ್ದಾರೆ. ಯಾವುದೇ ಕಲಬೆರಕೆಯಿಲ್ಲದ ಜೇನುತುಪ್ಪವನ್ನು ನೇರವಾಗಿ ಗ್ರಾಹಕರಿಗೆ ಮಾರಾಟ ಮಾಡುತ್ತಿದ್ದಾರೆ.

8 ವರ್ಷಗಳ ಹಿಂದೆ 2 ಮೇಕೆಗಳಿಂದ ಆರಂಭವಾದ ಮೇಕೆ ಸಾಕಾಣಿಕೆ 400ರವರೆಗೆ ತಲುಪಿತ್ತು. ಶೆಡ್ನಲ್ಲಿ ಈಗ 100 ಮೇಕೆಗಳಿವೆ. ಕುರಿ, ಮೇಕೆ ಸಾಕಾಣಿಕೆ ಕೇಂದ್ರದಲ್ಲಿ ಸ್ವಚ್ಛತೆ, ಉತ್ತಮ, ಗಾಳಿ ಬೆಳಕು ಬೇಕು. ಆರೋಗ್ಯದಲ್ಲಿ ಏರುಪೇರಾಗದಂತೆ ಗಮನಹರಿಸಬೇಕು. ಕುರಿ ಮತ್ತು ಮೇಕೆಗಳನ್ನು ಖರೀದಿಸಲು ಗ್ರಾಹಕರು ಶೆಡ್ ಬಳಿಯೇ ಹಿರಿಯೂರು, ಹೊಸದುರ್ಗದಿಂದ ಬರುತ್ತಾರೆ. ಕೆಲವೊಮ್ಮೆ ಮಾರುಕಟ್ಟೆಗೆ ಹೋಗಿ ಮಾರಲಾಗುವುದು’ ಎಂದು ಅವರು ಹೇಳಿದರು.

‘ಕೃಷಿಯಲ್ಲಿ ಆಧುನಿಕತೆಗೆ ತಕ್ಕಂತೆ ತಂತ್ರಜ್ಞಾನ ಅಳವಡಿಸಿಕೊಂಡರೆ ಯಶಸ್ಸು ಪಡೆಯಬಹುದು. ಯಾವುದೇ ಕೆಲಸವಾದರೂ ಶ್ರಮಪಟ್ಟು ಮನಸಾರೆ ಮಾಡಬೇಕು. ಖಂಡಿತ ಅದರ ಲಾಭ ಸಿಕ್ಕೇಸಿಗುತ್ತದೆ. ಮಾಡುವ ಮನಸ್ಸು, ದೃಢತೆ ಹಾಗೂ ನಿಶ್ಚಲತೆ ಇದ್ದಾಗ ಮಾತ್ರ ಯಶಸ್ಸು ಸಾಧ್ಯ’ ಎಂದು ತಿಳಿಸಿದರು.

‘ತಂದೆಯ ಮಾರ್ಗದರ್ಶನದಂತೆ ಕೃಷಿಯತ್ತ ಒಲವು ಬೆಳೆಸಿಕೊಂಡೆ. ಮುಂದಿನ ದಿನಗಳಲ್ಲಿ ಮೇಕೆ ಹಾಲಿನ ಉತ್ಪಾದನೆ, ಮಾರಾಟ ಹಾಗೂ ರೇಷ್ಮೆ ಬೆಳೆ ಸೇರಿದಂತೆ ಇನ್ನಷ್ಟು ತೋಟಗಾರಿಕೆ ಬೆಳೆಗಳನ್ನು ಬೆಳೆಯುವ ಆಲೋಚನೆ ಇದೆ. ಎರೆಹುಳು ಗೊಬ್ಬರ ತಯಾರಿಕೆ, ಮಾರಾಟಕ್ಕೆ ಒತ್ತು ನೀಡಲಾಗುವುದು. ಒಂದೇ ಬೆಳೆಯನ್ನು ಬೆಳೆಯುವ ಬದಲು ಸಮಗ್ರ ಕೃಷಿ ಪದ್ಧತಿ ಅಳವಡಿಸಿಕೊಳ್ಳಬೇಕು’ ಎಂದು ಅವರು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.