ಧರ್ಮಪುರ: ಸಮೀಪದ ಹರಿಯಬ್ಬೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ರೋಗಿಗಳಿಗೆ ಆರೋಗ್ಯ ಸೇವೆ ಮರೀಚಿಕೆಯಾಗಿದೆ. ಮೂರು ತಿಂಗಳಿಂದ ಆಸ್ಪತ್ರೆಯಲ್ಲಿ ವೈದ್ಯರು ಹಾಗೂ ಶುಶ್ರೂಷಕರು ಇಲ್ಲದೆ ರೋಗಿಗಳು ಪರದಾಡುವಂತಾಗಿದೆ.

ಹಿರಿಯೂರು– ಹರಿಯಬ್ಬೆ ಮುಖ್ಯ ರಸ್ತೆಯ ಪಕ್ಕದಲ್ಲಿರುವ ವಿಶಾಲವಾದ ಜಾಗದಲ್ಲಿ ಸುಸಜ್ಜಿತವಾದ ಕಟ್ಟಡದೊಂದಿಗೆ ಆರೋಗ್ಯ ಸೇವೆ ಒದಗಿಸಲು ಸಜ್ಜಾಗಿರುವ ಆಸ್ಪತ್ರೆ ವೈದ್ಯರಿಲ್ಲದೆ ಬಿಕೋ ಎನ್ನುತ್ತಿದೆ. ಹರಿಯಬ್ಬೆ ಪಾಳ್ಯ, ಮುಂಗುಸುವಳ್ಳಿ, ಸೂಗೂರು, ಸಾಲುಣಿಸೆ, ಟಿ. ಗೊಲ್ಲಾಹಳ್ಳಿ, ವೇಣುಕಲ್ಲುಗುಡ್ಡ, ಚಿಲ್ಲಹಳ್ಳಿ, ಚಂದ್ರಗಿರಿ, ಹೊಸಹಳ್ಳಿ, ಗೂಳ್ಯ ಭಾಗದ ರೋಗಿಗಳು ಚಿಕಿತ್ಸೆಗಾಗಿ ಇಲ್ಲಿಗೆ ಬರಬೇಕು. ಆದರೆ, ಆಸ್ಪತ್ರೆಯಲ್ಲಿ ವೈದ್ಯರೇ ಇಲ್ಲದಿರುವುದರಿಂದ ಸಾರ್ವಜನಿಕರು ಪರಿತಪಿಸುವಂತಾಗಿದೆ.

‘ಮೂರು ತಿಂಗಳಿನಿಂದ ಹರಿಯಬ್ಬೆ ಆಸ್ಪತ್ರೆಯಲ್ಲಿ ವೈದ್ಯರಿಲ್ಲ. ಆರೋಗ್ಯ ಶುಶ್ರೂಷಕರು ಇಲ್ಲದಿರುವುದರಿಂದ ನಮಗೆ ತುಂಬಾ ತೊಂದರೆಯಾಗಿದೆ. ಇದರಿಂದ ಹಳ್ಳಿಗಳಿಂದ ಬಂದ ನಾವು ಚಿಕಿತ್ಸೆ ಸಿಗದೇ ಪರದಾಡುವಂತಾಗಿದೆ. ಇಲ್ಲಿಂದ ಇನ್ನೂ ದೂರದ ಆಸ್ಪತ್ರೆಗೆ ಹೋಗಲೂ ನಮ್ಮಿಂದಾಗದು. ಇಲ್ಲೇ ತುರ್ತಾಗಿ ವೈದ್ಯರು ಮತ್ತು ಶುಶ್ರೂಷಕರನ್ನು ನೇಮಿಸಲಿ’ ಎಂದು ಸೂಗೂರು ಗ್ರಾಮದ ಸಣ್ಣತಿಮ್ಮಕ್ಕ ಒತ್ತಾಯಿಸಿದ್ದಾರೆ.

ಗೂಡಂಗಡಿಗಳ ಕಾರುಬಾರು: ನಾಲ್ಕೈದು ವರ್ಷಗಳಿಂದ ಆಸ್ಪತ್ರೆಯ ಮುಂದೆ ವಿವಿಧ ರೀತಿಯ ಗೂಡಂಗಡಿಗಳು ತಲೆ ಎತ್ತಿದ್ದು, ಆಸ್ಪತ್ರೆ ಇದ್ದರೂ ಸಾರ್ವಜನಿಕರಿಗೆ ಕಾಣದಂತಹ ಸ್ಥಿತಿ ನಿರ್ಮಾಣವಾಗಿದೆ. ಆಸ್ಪತ್ರೆ ತಡೆಗೋಡೆಗೆ ಹೊಂದಿಕೊಂಡಂತೆ ಪ್ರಾರಂಭವಾದ ಗೂಡಂಗಡಿಗಳೇ ಈಗ ದೊಡ್ಡ ಅಂಗಡಿಗಳಾಗಿ, ಹೋಟೆಲ್, ಚಪ್ಪಲಿ ಅಂಗಡಿ, ಪರ್ನೀಚರ್ ಅಂಗಡಿಗಳಾಗಿ ಮಾರ್ಪಟ್ಟಿದ್ದು, ಆಸ್ಪತ್ರೆಯೇ ಕಾಣದಂತಾಗಿದೆ. ಜೊತೆಗೆ ಸ್ವಚ್ಛತೆಯೂ ಮರೀಚಿಕೆಯಾಗಿದೆ ಎಂದು ನಿವಾಸಿ ಟಿ. ಪರಮೇಶ್ವರ ದೂರಿದ್ದಾರೆ.

ಅಂಗಡಿಗಳ ತ್ಯಾಜ್ಯ ಆಸ್ಪತ್ರೆಯ ಮೈದಾನದಲ್ಲಿ ಎಲ್ಲೆದಂರಲ್ಲಿ ಕಾಣಸಿಗುತ್ತದೆ. ಸಿಬ್ಬಂದಿ ಎಷ್ಟೇ ಸ್ವಚ್ಛ ಮಾಡಿದರೂ ಪ್ರಯೋಜವಾಗುತ್ತಿಲ್ಲ. ಫರ್ನಿಚರ್ ಅಂಗಡಿಗಳಿಂದ ಹೊರಬರುವ ದೂಳು ಆಸ್ಪತ್ರೆಗೆ ಬರುವ ರೋಗಿಗಳ ಮೇಲೆ ದುಷ್ಪರಿಣಾಮ ಬೀರುತ್ತಿದೆ. ಇದರ ಬಗ್ಗೆ ಪಿಡಿಒ, ತಾಲ್ಲೂಕು ಪಂಚಾಯಿತಿ ಇಒ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಕೇವಲ ನೋಟಿಸ್ ನೀಡಿ ಸುಮ್ಮನಾಗಿದ್ದಾರೆ. ಜಿಲ್ಲಾಧಿಕಾರಿಗಳು ಮತ್ತು ಡಿಎಚ್ಒ ಸ್ಥಳಕ್ಕೆ ಆಗಮಿಸಿ ಗೂಡಂಗಡಿಗಳ ತೆರವಿಗೆ ಕ್ರಮ ಕೈಗೊಳ್ಳಲಿ ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260517-44-1818908378

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.