ಚಿತ್ರದುರ್ಗ: ಕಳೆದ ಒಂದೆರಡು ದಿನ ಮಳೆ ಸುರಿದಿದ್ದರೂ ಕೋಟೆನಾಡಿನಲ್ಲಿ ತಾಪಮಾನ ತಗ್ಗುವ ಲಕ್ಷಣ ಗೋಚರಿಸುತ್ತಿಲ್ಲ. ಇಷ್ಟು ವರ್ಷ ಬೇಸಿಗೆಯಲ್ಲಿ ಕೇವಲ ಬಿಸಿಲಿನ ಅನುಭವ ಪಡೆದಿದ್ದ ಜನ ಈ ಬಾರಿ ಸೂರ್ಯಾಘಾತಕ್ಕೆ ತಲ್ಲಣಿಸಿದ್ದಾರೆ.

ವಾತಾವರಣದಲ್ಲಿ ಉಷ್ಣಾಂಶ ದಾಖಲೆ ಬರೆಯುತ್ತಿದ್ದು, ದಿನದ 24 ಗಂಟೆ ಬಿಸಿಗಾಳಿ ಇನ್ನಿಲ್ಲದಂತೆ ಬೀಸುತ್ತಿದೆ. ಬೆಳಿಗ್ಗೆ 8 ಗಂಟೆಗೇ ನಿಗಿನಿಗಿಯಾಗುವ ಸೂರ್ಯನ ಪ್ರಖರತೆ ಸಂಜೆ 6 ಗಂಟೆಯಾದರೂ ಇಳಿಮುಖವಾಗುತ್ತಿಲ್ಲ.

ಜಿಲ್ಲೆಯಲ್ಲಿ ಏಪ್ರಿಲ್ ಅಂತ್ಯಕ್ಕೆ ದಿನದಲ್ಲಿ ಸರಾಸರಿ 38–40 ಡಿಗ್ರಿ ಉಷ್ಣಾಂಶ ದಾಖಲಾಗುತ್ತಿದೆ. ನಿತ್ಯ ಬೆಳಿಗ್ಗೆ 9 ಗಂಟೆಗೇ ಬಿಸಿಲು ಹೆಚ್ಚಾಗುತ್ತಿದೆ. ಮಧ್ಯಾಹ್ನ 12 ಗಂಟೆ ದಾಟುತ್ತಿದ್ದಂತೆ ಮನೆಯಿಂದ ಹೊರಬರಲು ಹಿಂದೇಟು ಹಾಕುವ ಸ್ಥಿತಿ ಎದುರಾಗಿದೆ.

ಐದಾರು ವರ್ಷಗಳ ಹಿಂದೆ ನಗರದ ಮುಖ್ಯರಸ್ತೆ ಸೇರಿ ಒಳಭಾಗದ ರಸ್ತೆಗಳಲ್ಲಿ ಮರಗಳ ಸಂಖ್ಯೆ ಅಧಿಕವಾಗಿತ್ತು. ರಸ್ತೆ ವಿಸ್ತರಣೆ ನೆಪದಲ್ಲಿ ಮರಗಳನ್ನು ಕಡಿದ ಪರಿಣಾಮ ನೆರಳು ಹುಡುಕುವಂತಾಗಿದೆ. ಕಾಂಕ್ರಿಟ್ ರಸ್ತೆಯ ಕಾವಿನಿಂದ ಬಿಸಿಗಾಳಿ ನಗರದಲ್ಲಿ ಮತ್ತಷ್ಟು ಹೆಚ್ಚಿದೆ. ಇದರಿಂದಾಗಿ ಬಹುತೇಕ ಮಧ್ಯಾಹ್ನದ ವೇಳೆಗೆ ರಸ್ತೆಗಳಲ್ಲಿ ವಾಹನಗಳ ಸಂಖ್ಯೆ ವಿರಳವಾಗುತ್ತಿದೆ. ಕಟ್ಟಡ ಕಾರ್ಮಿಕರು ಸೇರಿ ದುಡಿಯುವ ವರ್ಗ ಬಿಸಿಲಿನ ತಾಪಕ್ಕೆ ಹೈರಾಣಾಗಿದ್ದಾರೆ. ಮನೆಗಳಲ್ಲಿ ಫ್ಯಾನ್ಗಳು ನಿರಂತರವಾಗಿ ತಿರುಗುತ್ತಿದ್ದು, ಬಿಸಿಗಾಳಿಯ ಅಬ್ಬರದ ಮುಂದೆ ತಂಗಾಳಿ ಇಲ್ಲವಾಗಿದೆ.

ತಾಪಮಾನದಿಂದ ಪಾರಾಗಲು ಜನ ತಂಪು ಪಾನೀಯಗಳ ಮೊರೆ ಹೋಗುತ್ತಿದ್ದಾರೆ. ಎಳನೀರು, ಮಜ್ಜಿಗೆ, ವಿವಿಧ ಹಣ್ಣಿನ ಜ್ಯೂಸ್ ಸೇವಿಸುತ್ತಿದ್ದಾರೆ. ದೇಹಕ್ಕೆ ತಂಪು ನೀಡುವ ಹಣ್ಣುಗಳು ಮಾರುಕಟ್ಟೆಯಲ್ಲಿ ಭರ್ಜರಿ ಮಾರಾಟವಾಗುತ್ತಿವೆ. ಬೇಡಿಕೆ ಹೆಚ್ಚಿರುವುದರಿಂದ ಬೆಲೆಯಲ್ಲಿಯೂ ವ್ಯತ್ಯಾಸವಾಗಿದೆ.

ಸಂಜೆಯಾಗುತ್ತಿದ್ದಂತೆ ಐಸ್ ಕ್ರೀಮ್ಗೆ ಮೊರೆ ಹೋಗುತ್ತಿರುವ ಜನ ನಗರದ ಪ್ರವಾಸಿ ಮಂದಿರ, ಜೆಸಿಆರ್, ಹೊಳಲ್ಕೆರೆ ರಸ್ತೆಯ ಐಸ್ ಕ್ರೀಮ್ ಅಂಗಡಿ ಹಾಗೂ ಬೀದಿ ಬದಿಯ ಸ್ಟಾಲ್ಗಳಲ್ಲಿ ಐಸ್ ಕ್ರೀಮ್ ಸೇವಿಸಲು ಜಮಾಯಿಸುವುದು ಸಾಮಾನ್ಯವಾಗಿದೆ. ಹೋಟೆಲ್ಗಳಲ್ಲಿ ಮಧ್ಯಾಹ್ನದ ಊಟದ ಜೊತೆಗೆ ಮಜ್ಜಿಗೆ ದೊರೆಯುತ್ತಿದೆ. ಕಲ್ಲಂಗಡಿ, ಕರಬೂಜದಂತಹ ನೀರಿನಾಂಶ ಹೆಚ್ಚಾಗಿರುವ ಹಣ್ಣುಗಳಿಗೆ ಬೇಡಿಕೆ ಬಂದಿದ್ದು, ಏಳನೀರು ಮಾರಾಟ ಹೆಚ್ಚಾಗಿದೆ.

ವೃದ್ಧರು, ಮಕ್ಕಳು ಬಿಸಿಲ ಆಘಾತ ತಡೆದುಕೊಳ್ಳಲು ಆಗದೆ ಸುಸ್ತಾಗುತ್ತಿದ್ದಾರೆ. ರಜೆ ದಿನದಲ್ಲಿ ಆಟವಾಡಲು ಹೊರ ಹೋಗಲು ಆಗದಂತಹ ಸ್ಥಿತಿ ನಿರ್ಮಾಣವಾಗಿದೆ. ಬಿಸಿಲಿಗೆ ಹೆದರಿ ಪಾಲಕರೂ ಮಕ್ಕಳನ್ನು ಮನೆಯಿಂದ ಹೊರ ಕಳುಹಿಸಲು ಯೋಚನೆ ಮಾಡುವಂತಾಗಿದೆ. ಜಿಲ್ಲೆಯ ಮೊಳಕಾಲ್ಮುರು, ಚಳ್ಳಕೆರೆ ಹಾಗೂ ಹಿರಿಯೂರು ತಾಲ್ಲೂಕಿನ ಆಂಧ್ರಪ್ರದೇಶದ ಗಡಿಗೆ ಹೊಂದಿಕೊಂಡ ಭಾಗದಲ್ಲಿ ಬಿಸಿಲಿನ ಪ್ರಖರತೆ ಹೇಳತೀರದಾಗಿದೆ.

ತಾಪಮಾನ ಏರಿಕೆಯಿಂದ ಜಿಲ್ಲೆಯ ಜನರ ಆರೋಗ್ಯದಲ್ಲಿ ಸಮಸ್ಯೆ ಕಂಡು ಬರುತ್ತಿವೆ. ಜಿಲ್ಲಾ ಆಸ್ಪತ್ರೆಯಲ್ಲಿ ನಿತ್ಯ ಹೊರ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದೆ. ತಲೆ ಸುತ್ತು, ವಾಂತಿ ಮತ್ತು ಜ್ವರದಂತಹ ಪ್ರಕರಣಗಳು ಸಾಮಾನ್ಯವಾಗಿವೆ.

ಅಧಿಕ ದೇಹದ ಉಷ್ಣತೆ, ಹೆಚ್ಚಿನ ಜ್ವರ, ಮಾನಸಿಕ ಗೊಂದಲ, ಮಾತಿನಲ್ಲಿ ತೊದಲುವುದು, ಪ್ರಜ್ಞೆ ತಪ್ಪುವುದು, ತಲೆಸುತ್ತುವಿಕೆ, ಚರ್ಮ ಒಣಗುವುದು, ವಾಕರಿಕೆ, ವಾಂತಿ ಹಾಗೂ ವೇಗದ ಉಸಿರಾಟದಂತಹ ಲಕ್ಷಣಗಳು ಕಂಡುಬಂದರೆ ತಕ್ಷಣವೇ ಹತ್ತಿರದ ಆಸ್ಪತ್ರೆಗೆ ಭೇಟಿ ನೀಡಬೇಕು ಎಂದು ಆರೋಗ್ಯ ಇಲಾಖೆ ಗ್ರಾಮೀಣ ಭಾಗದ ಜನರಲ್ಲಿ ನಿರಂತರ ಜಾಗೃತಿ ಮೂಡಿಸುತ್ತಿದೆ.

ಬಿಸಿಲಿನ ಸಮಯದಲ್ಲಿ ಹೊರಗೆ ಹೋಗುವುದನ್ನು ತಪ್ಪಿಸಬೇಕು ಮತ್ತು ಬಾಯಾರಿಕೆ ಆಗದಿದ್ದರೂ ಪದೇಪದೇ ನೀರು ಕುಡಿಯಬೇಕು. ಎಳನೀರು, ಮಜ್ಜಿಗೆ, ನಿಂಬೆಹಣ್ಣಿನ ಶರಬತ್ತು ಹಾಗೂ ನೀರಿನಾಂಶ ಹೆಚ್ಚಿರುವ ಆಹಾರ ಸೇವಿಸಬೇಕು. ಸಡಿಲವಾದ, ತಿಳಿ ಬಣ್ಣದ ಹತ್ತಿ ಬಟ್ಟೆಗಳನ್ನು ಧರಿಸುವುದು ಹಾಗೂ ಬಿಸಿಲಿಗೆ ಹೋಗುವಾಗ ಟೋಪಿ, ಛತ್ರಿ, ಸನ್ಗ್ಲಾಸ್ ಬಳಸುವುದು ಸೂಕ್ತ. ದೇಹದ ಉಷ್ಣತೆ ಹೆಚ್ಚಾದರೆ ಒದ್ದೆ ಬಟ್ಟೆಯಿಂದ ಮೈ ಒರೆಸಿಕೊಳ್ಳಬೇಕು ಮತ್ತು ಬಿಸಿಲಿನಲ್ಲಿ ಸತತವಾಗಿ ಕೆಲಸ ಮಾಡದೆ ಆಗಾಗ ವಿರಾಮ ಪಡೆಯಬೇಕು ಎಂದು ಸಲಹೆ ನೀಡುತ್ತಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260504-44-225954094

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.