ಚಿತ್ರದುರ್ಗ: ಬಿರು ಬೇಸಿಗೆಯ ಕಾರಣ ಜಿಲ್ಲೆಯ ಗರಿಷ್ಠ ಉಷ್ಣಾಂಶ 39 ಡಿಗ್ರಿ ಸೆಲ್ಸಿಯಸ್ನ ಗಡಿ ದಾಟುತ್ತಿದ್ದು ಜನ ಬಿಸಿಲಿನಿಂದ ಬಸವಳಿಯುತ್ತಿದ್ದಾರೆ. ಧಗೆಯಿಂದ ರಕ್ಷಿಸಿಕೊಳ್ಳಲು ಸಾರ್ವಜನಿಕರು ನಾನಾ ಮಾರ್ಗ ಅನುಸರಿಸುತ್ತಿದ್ದಾರೆ. ಶಾಲಾ ವಿದ್ಯಾರ್ಥಿಗಳು ಬೇಸಿಗೆ ರಜೆಯ ಮಜಾ ಅನುಭವಿಸಲು ಈಜುಕೊಳ, ಹೊಂಡ, ಕಟ್ಟೆಗಳಲ್ಲಿ ಮಿಂದೇಳುತ್ತಿದ್ದಾರೆ.

ಸೆಕೆ ಸಹಿಸಲಸಾಧ್ಯವಾಗಿದ್ದು, ಜನರು ಮನೆಯಲ್ಲೇ ಇರಲು ಬಯಸುತ್ತಿದ್ದಾರೆ. ಬೆಳಿಗ್ಗೆ 10 ಗಂಟೆಯ ನಂತರ ಹೊರಬರಲು ಕಷ್ಟಪಡುವಷ್ಟು ಬಿಸಿಲು ಮೈ ಸುಡುತ್ತಿದೆ. ತಂಪು ಪಾನೀಯ, ಎಳನೀರು, ಐಸ್ಕ್ರೀಂ ಹಾಗೂ ಹಣ್ಣುಗಳಿಗೆ ವಿಪರೀತ ಬೇಡಿಕೆ ಸೃಷ್ಟಿಯಾಗಿದೆ. ಶಾಲೆಗಳಿಗೆ ಬೇಸಿಗೆ ರಜೆ ಇರುವ ಕಾರಣ ಮಕ್ಕಳು ಮನೆಯಲ್ಲೇ ಇದ್ದಾರೆ. ಅವರನ್ನು ಬಹುತೇಕ ಪೋಷಕರು ಬೇಸಿಗೆ ಶಿಬಿರಗಳಿಗೆ ಸೇರ್ಪಡೆ ಮಾಡಿದ್ದಾರೆ. ಕೆಲವರು ಮಕ್ಕಳನ್ನು ಈಜುಕೊಳಗಳಿಗೆ ಕರೆದೊಯ್ಯುತ್ತಿದ್ದಾರೆ.

ಜಿಲ್ಲಾ ಕ್ರೀಡಾಂಗಣದ ಆವರಣದಲ್ಲಿರುವ ಒನಕೆ ಓಬವ್ವ ಈಜುಕೊಳಕ್ಕೆ ಅಪಾರ ಬೇಡಿಕೆ ಸೃಷ್ಟಿಯಾಗಿದೆ. ಈಜುಕೊಳದಲ್ಲಿ ಹೊಸ ಬ್ಯಾಚ್ ಸೃಷ್ಟಿಸಿದ್ದರೂ, ಬೇಡಿಕೆ ನೀಗಿಸಲು ಸಾಧ್ಯವಾಗದಷ್ಟು ಮಕ್ಕಳು ಭೇಟಿ ನೀಡುತ್ತಿದ್ದಾರೆ. ಖಾಸಗಿ ಈಜುಕೊಳಕ್ಕಿಂತಲೂ ಸ್ವಚ್ಛವಾಗಿ, ಸುಂದರವಾಗಿ ನಿರ್ವಹಣೆ ಮಾಡಿರುವ ಈ ಈಜುಕೊಳ ಚಿತ್ರದುರ್ಗದ ಹೆಮ್ಮೆಯಾಗಿದೆ.

ಗೂಳಿಹಟ್ಟಿ ಶೇಖರ್ ಕ್ರೀಡಾ ಸಚಿವರಾಗಿದ್ದ ಕಾಲದಲ್ಲಿ ಚಿತ್ರದುರ್ಗ ಹಾಗೂ ಹೊಸದುರ್ಗದಲ್ಲಿ 2 ಈಜುಕೊಳಗಳು ನಿರ್ಮಾಣಗೊಂಡಿದ್ದವು. ಈ ಎರಡೂ ಕೊಳಗಳ ನಿರ್ವಹಣೆ ಅತ್ಯುತ್ತಮವಾಗಿದ್ದು, ಬೇಸಿಗೆ ಅವಧಿಯಲ್ಲಿ ಇವು ಮಕ್ಕಳ ನೆಚ್ಚಿನ ತಾಣಗಳಾಗಿವೆ. ನಗರದ ಒನಕೆ ಓಬವ್ವ ಈಜುಕೊಳಕ್ಕೂ ಭಾರಿ ಬೇಡಿಕೆ ಸೃಷ್ಟಿಯಾಗಿದ್ದು ತಂಡೋಪತಂಡವಾಗಿ ಮಕ್ಕಳು ಬರುತ್ತಿದ್ದಾರೆ.

6 ರಿಂದ 15 ವರ್ಷದೊಳಗಿನ ಮಕ್ಕಳಿಗೆ ಪ್ರತಿ ತಿಂಗಳು ₹ 600 ಶುಲ್ಕ ನಿಗದಿ ಮಾಡಲಾಗಿದೆ. 14 ವರ್ಷ ಮೇಲ್ಪಟ್ಟವರಿಗೆ ₹ 1,200 ದರ ನಿಗದಿ ಮಾಡಲಾಗಿದೆ. ಈಜು ತರಬೇತಿಯ ಅವಶ್ಯಕತೆ ಇರುವ ಮಕ್ಕಳಿಗೆ ₹ 1,800 ಶುಲ್ಕವಿದೆ. ಒಂದು ಗಂಟೆಯ ಈಜಿಗೆ ₹ 100 ದರವಿದೆ.

ಮಾಜಿ ಸೈನಿಕ ಎಸ್.ಜಿ. ಸತ್ಯನಾರಾಯಣ ನಾಯ್ಡು ಅವರು ಈಜುಕೊಳ ನಿರ್ವಹಣೆ ಮಾಡುತ್ತಿದ್ದು, ಇಡೀ ಕೊಳದ ಆವರಣವನ್ನು ಶಿಸ್ತಿನಿಂದ ನೋಡಿಕೊಂಡಿದ್ದಾರೆ. ಜೀವರಕ್ಷಕರಾದ (ಲೈಫ್ ಗಾರ್ಡ್ಸ್) ಬಿ.ವೆಂಕಟೇಶ್, ಡಿ.ಸುರೇಶ್ ಮಕ್ಕಳ ಚಲನವಲನದ ಮೇಲೆ ನಿಗಾ ವಹಿಸಿದ್ದಾರೆ. ಕೆ.ಲಕ್ಷ್ಮಿ, ಅಣ್ಣಪ್ಪ ಅವರು ಈಜುಕೊಳದ ಸ್ವಚ್ಛತೆ ನೋಡಿಕೊಂಡಿದ್ದಾರೆ. ನಗರದಲ್ಲಿರುವ ಉದ್ಯಮಿಗಳು, ವೈದ್ಯರು, ಕಲಾವಿದರು, ಕ್ರೀಡಾಪಟುಗಳು ಇಲ್ಲಿ ನಿತ್ಯ ಈಜಾಡುತ್ತಾರೆ. ಬೇಸಿಗೆ ರಜೆಯ ಅಂಗವಾಗಿ ಇಲ್ಲಿ ಮಕ್ಕಳ ಜಾತ್ರೆ ಆರಂಭಗೊಂಡಿದೆ.

ನಗರದ ಮಂದಾರ ಹೋಟೆಲ್ ಹಿಂಭಾಗದಲ್ಲಿರುವ ವಿಘ್ನೇಶ್ವರ (ಮಂದಾರ) ಈಜುಕೊಳಕ್ಕೂ ಮಕ್ಕಳು ಭೇಟಿ ನೀಡುತ್ತಿದ್ದಾರೆ. ಬೇಸಿಗೆಯಲ್ಲಿ ಮಾತ್ರ ತೆರೆಯುವ ಈ ಈಜುಕೊಳ ಮಳೆ, ಚಳಿಗಾಲದಲ್ಲಿ ಮುಚ್ಚಿರುತ್ತದೆ. ಸ್ವಚ್ಛತೆಯ ಕೊರತೆ ಇರುವ ಕಾರಣ ಇಲ್ಲಿಗೆ ಭೇಟಿ ಕೊಡಲು ಕೆಲವರು ಹಿಂದೇಟು ಹಾಕುತ್ತಾರೆ. ಈ ಈಜುಕೊಳಕ್ಕೆ ಅಕ್ಕಪಕ್ಕದ ಹಳ್ಳಿಗಳ ಮಕ್ಕಳೂ ಭೇಟಿ ನೀಡುತ್ತಾರೆ.

‘ಮಂದಾರ ಈಜುಕೊಳದಲ್ಲಿ ಆಧುನಿಕ ತಂತ್ರಜ್ಞಾನದ ಮೂಲಕ ನೀರು ಸ್ವಚ್ಛಗೊಳಿಸುತ್ತಿಲ್ಲ. ನೀರು ಕೂಡ ಶುದ್ಧವಾಗಿಲ್ಲ. ಶೌಚಾಲಯ ಸೇರಿದಂತೆ ಉತ್ತಮ ಸೌಲಭ್ಯಗಳಿಲ್ಲ. ಬಿಸಿಲು ತಡೆಯಲಾಗದ ಕಾರಣ ಮಕ್ಕಳು ಅನಿವಾರ್ಯವಾಗಿ ಇಲ್ಲಿಗೆ ಬಂದು ಈಜಾಡುತ್ತಾರೆ. ಮಾಲೀಕರು, ನಿರ್ವಾಹಕರು ಕೊಳದ ಸ್ವಚ್ಛತೆಗೆ ಆದ್ಯತೆ ಕೊಡಬೇಕು’ ಎಂದು ಸಾರ್ವಜನಿಕರು ಅಸಮಾಧಾನ ವ್ಯಕ್ತಪಡಿಸಿದರು. ಜೊತೆಗೆ ನಗರದ ಹೊರವಲಯದ ಪಿಳ್ಳೆಕೇರನಹಳ್ಳಿ ಹಾಗೂ ಮಲ್ಲಾಪುರದಲ್ಲಿ ತಲಾ ಒಂದು ಈಜುಕೊಳವಿದ್ದು ಅಲ್ಲೂ ಮಕ್ಕಳಿಂದ ಅಪಾರ ಬೇಡಿಕೆ ಸೃಷ್ಟಿಯಾಗಿದೆ.

ಹೊಂಡಗಳಲ್ಲಿ ನೀರಿಲ್ಲ: ಚಿತ್ರದುರ್ಗದ ಹೊಂಡಗಳಲ್ಲಿ ಈಜಾಡುವುದು ಕೂಡ ಐತಿಹಾಸಿಕ ಮಹತ್ವ ಪಡೆದುಕೊಂಡಿದೆ. ಒಂದು ಕಾಲದಲ್ಲಿ ‘ಗರಡಿ ಮನೆಯಲ್ಲಿ ವ್ಯಾಯಾಮ ಮಾಡು, ಹೊಂಡಗಳಲ್ಲಿ ಈಜಾಡು’ ಎನ್ನುವ ಮಾತು ಯುವಕರ ಧ್ಯೇಯವಾಕ್ಯವಾಗಿತ್ತು. ಈಗ ಗರಡಿಮನೆಗಳು ನೇಪಥ್ಯಕ್ಕೆ ಸರಿದಿವೆ. ಪ್ರತಿವರ್ಷ ಮಕ್ಕಳು ಹೊಂಡಗಳಲ್ಲಿ ಈಜಾಡುತ್ತಿದ್ದರು. ಆದರೆ, ಈ ಬಾರಿ ಹಲವು ಹೊಂಡಗಳಲ್ಲಿ ನೀರಿನ ಸಂಗ್ರಹವಿಲ್ಲ. ಹೀಗಾಗಿ ಮಕ್ಕಳು ಈಜುಕೊಳಗಳತ್ತ ತೆರಳುತ್ತಿದ್ದಾರೆ.

ಕೋಟೆಯಲ್ಲಿರುವ ಗೋಪಾಲಸ್ವಾಮಿ ಹೊಂಡ ಸ್ಥಳೀಯರ ಈಜಾಟಕ್ಕೆ ಪ್ರಸಿದ್ಧಿ ಪಡೆದಿತ್ತು. ಆದರೆ ಅಲ್ಲಿ ಸಾವುನೋವು ಹೆಚ್ಚಾದ ನಂತರ ಈಜು ನಿಷೇಧಿಸಲಾಗಿದೆ. ನಗರದ ವಿವಿಧೆಡೆಯಿರುವ ಹೊಂಡಗಳಲ್ಲಿ ಈಜಾಡುವುದನ್ನು ನಿಷೇಧಿಸಿದ್ದರೂ ಮಕ್ಕಳು, ಯುವಕರು ಕದ್ದು ಮುಚ್ಚಿ ಅಲ್ಲಿ ಮಿಂದೇಳುತ್ತಿದ್ದಾರೆ. ಕೆಳಗೋಟೆಯ ಆಕಾಶವಾಣಿ ಸಮೀಪದ ಚನ್ನಕೇಶ್ವರ ಹೊಂಡದಲ್ಲಿ ನೀರಿಲ್ಲದ ಕಾರಣ ಈ ವರ್ಷ ಅದು ಬರಡಾಗಿದೆ.

ಎಳನೀರಿಗೆ ಬೇಡಿಕೆ: ಬಿಸಿಲು ಎದುರಿಸಲು ಜನರು ತಂಪುಪಾನೀಯಗಳಿಗೆ ಮೊರೆ ಹೋಗಿದ್ದಾರೆ. ಜಿಲ್ಲೆ ಹಾಗೂ ಹೊರ ಜಿಲ್ಲೆಗಳಿಂದ ಎಳನೀರು ಬರುತ್ತಿದೆ. ಕಲ್ಲಂಗಡಿ ಹಣ್ಣಿಗೂ ಅಪಾರ ಬೇಡಿಕೆ ಇದೆ. ಪ್ರತಿ ಕೆ.ಜಿ ಕಲ್ಲಂಗಡಿ ಹಣ್ಣಿಗೆ ₹ 30 ದರವಿದೆ. ಮೋರ್ ಮಾರುಕಟ್ಟೆಯಲ್ಲಿ ₹ 20 ದರವಿರುವ ಕಾರಣ ಹೆಚ್ಚಿನ ಜನರು ಅಲ್ಲಿಯೇ ಖರೀದಿ ಮಾಡುತ್ತಿದ್ದಾರೆ.

ಈಗ ಮಾರುಕಟ್ಟೆಗೆ ಮಾವಿನಹಣ್ಣು ಬರುತ್ತಿದ್ದು, ಜನರು ಅದರ ಜ್ಯೂಸ್ ಹೆಚ್ಚಾಗಿ ಕುಡಿಯುತ್ತಿದ್ದಾರೆ. ಕರಬೂಜ ಹಣ್ಣಿನ ಅವಧಿ ಮುಗಿಯುತ್ತಿದ್ದು, ಹೊರರಾಜ್ಯಗಳಿಂದ ಮಾವಿನಹಣ್ಣು ಮಾರುಕಟ್ಟೆಗೆ ಬರುತ್ತಿದೆ. ಈಗ ಕೆ.ಜಿ ಮಾವಿನಹಣ್ಣಿನ ಬೆಲೆ ದುಬಾರಿ ಇದೆ. ಕೆಲ ದಿನಗಳ ನಂತರ ಬೆಲೆ ಕಡಿಮೆ ಆಗಬಹುದು ಎಂದು ವರ್ತಕರು ಹೇಳುತ್ತಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260420-44-1802962523

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.