ಅ. 2ರಂದು ಗಂಗಾ ಪೂಜೆ ನಂತರ ಘಟಸ್ಥಾಪನೆ, 3ರಂದು ಕಾಳಿಕಾಂಬ ಮಾತೆಗೆ ಅರಿಶಿನ ಅಲಂಕಾರ, 4ರಂದು ಕುಂಕುಮ ಅಲಂಕಾರ, 5ರಂದು ಶಾಕಾಂಬರಿ ಅಲಂಕಾರ, 6ರಂದು ಅಡಿಕೆ ವೀಳ್ಯದೆಲೆ ಅಲಂಕಾರ, 7ರಂದು ಬೆಣ್ಣೆ ಅಲಂಕಾರ, 8ರಂದು ತೆಂಗಿನಕಾಯಿ ಅಲಂಕಾರ, 9ರಂದು ಬಳೆ ಅಲಂಕಾರ, 10ರಂದು ಬೇವಿನ ಅಲಂಕಾರ, 11ರಂದು ಮಹಿಷಾಸುರ ಮರ್ದಿನಿ ಅಲಂಕಾರ ಮತ್ತು 12ರಂದು ವಜ್ರಾಂಗಿ ಅಲಂಕಾರ ಹಾಗೂ ಕಾಳಿಕಾಂಬ ಮಾತೆಯ ಬನ್ನಿ ಉತ್ಸವ ನಡೆಯಲಿದ್ದು, ಭಕ್ತರು ಪೂಜಾ ಕಾರ್ಯಕ್ರಮಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಅರ್ಚಕರು ಮನವಿ ಮಾಡಿದ್ದಾರೆ.