ಚಿಕ್ಕಜಾಜೂರು: ಹೊಳಲ್ಕೆರೆ ತಾಲ್ಲೂಕು ತಾಳ್ಯ ಹೋಬಳಿಯ ಕುಮ್ಮಿನಘಟ್ಟ, ಕೊಳಾಳು, ಮದ್ದಪ್ಪನಹಟ್ಟಿ ಮತ್ತಿತರ ಗ್ರಾಮಗಳಲ್ಲಿ ಕುಡಿಯುವ ನೀರಿನ ಸಮಸ್ಯೆ ದಿನದಿಂದ ದಿನಕ್ಕೆ ಉಲ್ಬಣಿಸುತ್ತಿದ್ದು, ನೀರಿಗಾಗಿ ಜನರು ನಿತ್ಯವೂ ಜಗಳಕ್ಕಿಳಿಯುವ ಪರಿಸ್ಥಿತಿ ನಿರ್ಮಾಣವಾಗಿದೆ.

ತಾಳ್ಯ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕುಮ್ಮಿನಘಟ್ಟ ಗ್ರಾಮದಲ್ಲಿ ಕುಡಿಯುವ ನೀರಿನ ಸಮಸ್ಯೆ ತೀವ್ರವಾಗಿದ್ದು, ಇರುವ ಒಂದು ಕೊಳವೆ ಬಾವಿಯಿಂದ ನೀರು ಬಂದಾಗ ಗ್ರಾಮಸ್ಥರು ನೂಕು ನುಗ್ಗಲಿನಲ್ಲಿ ನಿಂತು ನೀರು ಹಿಡಿದುಕೊಳ್ಳಬೇಕಾಗಿದೆ. ಕೊಳವೆ ಬಾವಿಯಲ್ಲಿ ಸಮರ್ಪಕ ನೀರಿಲ್ಲದೇ ಊರಿನ ಎರಡೂ ಭಾಗಗಳಿಗೆ ಎರಡು ದಿನಗಳಿಗೊಮ್ಮೆ ಬಿಡಲಾಗುತ್ತಿತ್ತು. ಈಗ ಪರಿಸ್ಥಿತಿ ಬಿಗಡಾಯಿಸಿದ್ದು ಜನರು ಸಂಕಷ್ಟ ಎದುರಿಸುತ್ತಿದ್ದಾರೆ.

‘ಈಗ ಕೆಲವು ದಿನಗಳಿಂದ ಒಂದೇ ಇಂಚು ನೀರು ಸಿಗುತ್ತಿದ್ದು, ನೀರನ್ನು ಬಿಟ್ಟಾಗ ಜನರು ಒಮ್ಮೆಲೆ ನೂಕು ನುಗ್ಗಲಿನಲ್ಲಿ ನಿಲ್ಲುತ್ತಾರೆ. ನೀರನ್ನು ಹಿಡಿಯುವಾಗ ಗಲಾಟೆಗಳಾಗುತ್ತಿವೆ’ ಎಂದು ಗ್ರಾಮದ ಮಹಿಳೆಯರಾದ ಹಾಲಮ್ಮ, ದೇವಮ್ಮ, ದ್ಯಾಮಕ್ಕ, ತೊಳಸಮ್ಮ, ರತ್ನಮ್ಮ ಮೊದಲಾದವರು ಹೇಳಿದರು.

‘ಎರಡು ತಿಂಗಳ ಹಿಂದೆ ಶಾಸಕರಿಗೆ ಇಲ್ಲಿನ ನೀರಿನ ಸ್ಥಿತಿ ಹೇಳಿದಾಗ ಗ್ರಾಮದಿಂದ ಅರ್ಧ ಕಿ.ಮೀ. ದೂರದಲ್ಲಿ ಒಂದು ಕೊಳವೆ ಬಾವಿಯನ್ನು ಕೊರೆಸಿಕೊಟ್ಟಿದ್ದರು. ಆದರೆ, ಅದರಲ್ಲಿ ಸಾಕಷ್ಟು ಪ್ರಮಾಣದ ನೀರು ಬರುತ್ತಿಲ್ಲ’ ಎನ್ನುತ್ತಾರೆ ಗ್ರಾಮಸ್ಥರಾದ ತಮ್ಮಣ್ಣ, ಪಿ.ಕೆ. ಲೋಕೇಶ್, ರಾಜಪ್ಪ, ಪಿ. ಲೋಕೇಶ್, ಮಂಜುನಾಥ ಹೇಳಿದರು.

ತಾಳ್ಯ ಹೋಬಳಿಯ ತೇಕಲವಟ್ಟಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೊಳಾಳು, ಮದ್ದಪ್ಪನಹಟ್ಟಿ ಹಾಗೂ ಕುದುರೆ ದೇವರಹಟ್ಟಿ ಗ್ರಾಮಗಳಲ್ಲೂ ಕುಡಿಯುವ ನೀರಿನ ಸಮಸ್ಯೆಯಿಂದಾಗಿ ಜನರು ನಿತ್ಯ ಪರದಾಡುವಂತಾಗಿದೆ. ಗ್ರಾಮಸ್ಥರ ಪರದಾಟ ನೋಡಲಾರದೆ ಕೆಲವು ರೈತರು ತಮ್ಮ ತೋಟಗಳಿಂದ ಟ್ಯಾಂಕರ್ನಲ್ಲಿ ನೀರು ಪೂರೈಕೆ ಮಾಡುತ್ತಿದ್ದರು.

‘ಬಿಸಿಲ ಝಳದಿಂದಾಗಿ ತೋಟಗಳಲ್ಲಿನ ಕೊಳವೆ ಬಾವಿಗಳಲ್ಲೂ ನೀರು ಬರಿದಾಗುತ್ತಿದೆ. ತೇಕಲವಟ್ಟಿ ಗ್ರಾಮ ಪಂಚಾಯಿತಿಯ ಕೊಳವೆ ಬಾವಿಗೆ ಅಳವಡಿಸಿದ್ದ ಮೋಟರ್ ಸುಟ್ಟು ಹೋಗಿದ್ದು, ದುರಸ್ತಿ ಮಾಡಿಸುವಂತೆ ಪಂಚಾಯಿತಿಯವರಿಗೆ ಮನವಿ ಮಾಡಿದರೆ, ಅವರು ‘ಗ್ರಾಮ ಪಂಚಾಯಿತಿಯಲ್ಲಿ ಹಣವಿಲ್ಲ ಎಂದು ಅಧಿಕಾರಿಗಳು ತಿಳಿಸಿದರು’ ಎಂದು ಮಾಜಿ ಉಪಾಧ್ಯಕ್ಷೆ ಸುಮಲತಾ ಕೆಂಚಪ್ಪ ಹೇಳಿದರು.

‘ಕೊಳಾಳು ಗ್ರಾಮದಲ್ಲಿ ಕೊಳವೆ ಬಾವಿಯಲ್ಲಿ ಕೇವಲ ಒಂದು ಇಂಚಿನಷ್ಟು ನೀರು ಬರುತ್ತದೆ. ಅದೇ ನೀರನ್ನು ಹಿಡಿಯಲು ನೂಕುನುಗ್ಗಲು. ಇದರಿಂದಾಗಿ ನೀರನ್ನು ತರಲು ಮಕ್ಕಳನ್ನು ಕಟ್ಟಿಕೊಂಡು ಗ್ರಾಮದಿಂದ ಅನತಿ ದೂರದಲ್ಲಿರುವ ಕೆಂಚಾವಧೂತರ ಮಠದ ಬಳಿ ಹೋಗಿ ನೀರನ್ನು ಹೊತ್ತು ತರುವ ಸ್ಥಿತಿ ಎದುರಾಗಿದೆ’ ಎಂದು ಗ್ರಾಮ ಪಂಚಾಯಿತಿ ಮಾಜಿ ಸದಸ್ಯೆ ಕಣುಮಕ್ಕ ಓಬಳೇಶ್ ಹೇಳಿದರು.

‘ತಾಲ್ಲೂಕು ಆಡಳಿತ ಮತ್ತು ಜಿಲ್ಲಾಡಳಿತ ತಾಳ್ಯ ಹೋಬಳಿಯ ಹಲವು ಗ್ರಾಮಗಳಲ್ಲಿ ಉದ್ಭವಿಸಿರುವ ಕುಡಿಯುವ ನೀರಿನ ಸಮಸ್ಯೆಗೆ ಪರಿಹಾರ ಕಲ್ಪಿಸಬೇಕು’ ಎಂದು ತೇಕಲವಟ್ಟಿ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷೆ ರಾಧಮ್ಮ ಮಂಜಪ್ಪ, ಚಿತ್ತಮ್ಮ, ರುದ್ರಮ್ಮ, ಭಾರತಿ ಆಗ್ರಹಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260503-44-1397263235

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.