ಹೊಸದುರ್ಗ: ತಾಲ್ಲೂಕಿನಾದ್ಯಂತ ಉತ್ತಮ ಮಳೆಯಾಗಿದ್ದು, ಹಲವೆಡೆ ರೈತರು ಭೂಮಿ ಹಸನು ಮಾಡುವ ಕಾರ್ಯದಲ್ಲಿ ತೊಡಗಿದ್ದಾರೆ.

ಕಸಬಾ, ಮಾಡದಕೆರೆ, ಶ್ರೀರಾಂಪುರ ಹಾಗೂ ಮತ್ತೋಡು ಹೋಬಳಿಗಳಲ್ಲಿ ಭೂಮಿ ಸಿದ್ಧತೆ ಕಾರ್ಯ ಬಿರುಸಿನಿಂದ ಸಾಗುತ್ತಿದೆ. ಹಲವೆಡೆ ಹೆಸರು ಬೆಳೆ ಬಿತ್ತನೆಯೂ ಆರಂಭವಾಗಿದೆ.

‘ಇಲ್ಲಿನ ಮಣ್ಣು, ಹವಾಗುಣ, ಸಿರಿಧಾನ್ಯ ಬೆಳೆಗೆ ಯೋಗ್ಯವಾಗಿದೆ. ತಾಲ್ಲೂಕು ರಾಜ್ಯ ಮಟ್ಟದಲ್ಲಿ ಹೆಸರುವಾಸಿಯಾಗಿದೆ. ಈ ಬಾರಿ ಇದೇ ರೀತಿ ಉತ್ತಮ ಮಳೆಯಾಗಿ, ಬೆಳೆ ಕೈ ಸೇರಿದರೆ ಸಾಕು’ ಎನ್ನುತ್ತಾರೆ ನಾಗತಿಹಳ್ಳಿಯ ರೈತ ನಿರಂಜನ್.

ಕಸಬಾ ಹೋಬಳಿಯಲ್ಲಿ ವಾಡಿಕೆಗಿಂತ ಅಧಿಕ ಮಳೆಯಾಗಿದೆ. ಆದರೆ, ಪೂರ್ವ ಮುಂಗಾರು ಮಳೆ ಸಕಾಲಕ್ಕೆ ಬಾರದ ಕಾರಣ, ಹೆಸರು ಎಳ್ಳು ಬಿತ್ತನೆ ಕಡಿಮೆಯಾಗಿದೆ.

‘ಒಂದು ವಾರದಿಂದ ಭೂಮಿ ಸಿದ್ಧತೆ ಕಾರ್ಯ ನಡೆಯುತ್ತಿದೆ. ತಾಲ್ಲೂಕಿನ 4 ರೈತ ಸಂಪರ್ಕ ಕೇಂದ್ರಗಳಲ್ಲಿ ಅಲಸಂದೆ, ಹೆಸರು, ಶೇಂಗಾ ಬಿತ್ತನೆ ಬೀಜಗಳ ದಾಸ್ತಾನು ಇದ್ದು, ರಿಯಾಯಿತಿ ದರದಲ್ಲಿ ನೀಡಲಾಗುತ್ತಿದೆ. ರಸಗೊಬ್ಬರ ದಾಸ್ತಾನು ಇದೆ. ಯೂರಿಯಾ ರಸಗೊಬ್ಬರವನ್ನು ಎಫ್.ಐ.ಡಿ. ಮತ್ತು ಆಧಾರ್ ಕಾರ್ಡ್ ಮೂಲಕ ವಿತರಿಸಲಾಗುತ್ತಿದೆ. ಸಾವಯವ ರಸಗೊಬ್ಬರ ಬಳಕೆ ಆಗಬೇಕು. ಯೂರಿಯಾ ರಸಗೊಬ್ಬರದ ಬದಲು ನ್ಯಾನೋ ಯೂರಿಯಾ ಬಳಸಿ’ ಎಂದು ಸಹಾಯಕ ಕೃಷಿ ನಿರ್ದೇಶಕ ಸಿ.ಎಸ್. ಈಶ ರೈತರಿಗೆ ಸಲಹೆ ನೀಡಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260524-44-1559363075

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.