ಗುರುವಾರ , ಆಗಸ್ಟ್ 18, 2022
25 °C

ಕಲ್ಲಿನಕೋಟೆಯ ಗೋಡೆಯನ್ನು ಬರಿಗೈನಲ್ಲೇ ಏರಿದ ಐಪಿಎಸ್‌ ಅಧಿಕಾರಿ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ರದುರ್ಗ: ಇಲ್ಲಿನ ಐತಿಹಾಸಿಕ ಕಲ್ಲಿನಕೋಟೆಯ ಗೋಡೆಯನ್ನು ಮಂಗಳೂರು ಪೊಲೀಸ್‌ ಕಮಿಷನರ್‌ ಎನ್‌.ಶಶಿಕುಮಾರ್‌ ಸರಾಗವಾಗಿ ಏರಿದ್ದಾರೆ. ಗೋಡೆ ಏರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.

ಮೂಲತಃ ಚಿತ್ರದುರ್ಗ ಜಿಲ್ಲೆಯವರಾದ ಶಶಿಕುಮಾರ್‌, ‘ನಮ್ಮ ಊರು ನಮ್ಮ ಹೆಮ್ಮೆ, ನಮ್ಮೂರಿನಲ್ಲಿ ಮತ್ತೊಮ್ಮೆ’ ಎಂಬ ಬರಹದೊಂದಿಗೆ ಈ ವಿಡಿಯೊವನ್ನು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ. ಐಪಿಎಸ್‌ ಅಧಿಕಾರಿಯ ಈ ಸಾಹಸಕ್ಕೆ ಹಲವರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಜ್ಯೋತಿರಾಜ್‌ ಎಂಬುವರು ಕಲ್ಲಿನಕೋಟೆಯ ಗೋಡೆಗಳನ್ನು ಏರುತ್ತಿದ್ದರು. ಯಾವುದೇ ಉಪಕರಣಗಳ ನೆರವಿಲ್ಲದೇ ‘ವಾಲ್‌ಕ್ಲೈಂಬಿಂಗ್‌’ ಮಾಡುತ್ತಿದ್ದ ಪರಿಯನ್ನು ಪ್ರವಾಸಿಗರು ಸೋಜಿಗದಿಂದ ನೋಡುತ್ತಿದ್ದರು. ಶಶಿಕುಮಾರ್‌ ಅವರು ಗೋಡೆ ಏರಿದ ರೀತಿಯನ್ನು ಪ್ರವಾಸಿಗರು ಕುತೂಹಲದಿಂದ ವೀಕ್ಷಿಸಿದ್ದಾರೆ. ಚೆಪ್ಪಾಳೆ ತಟ್ಟಿ ಹರ್ಷ ವ್ಯಕ್ತಪಡಿಸಿದ್ದಾರೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು