ಚಿತ್ರದುರ್ಗ: ‘ಕಳೆದ ವಿಧಾನಸಭಾ ಚುನಾವಣೆ ವೇಳೆ ನಾನು ಚಿತ್ರದುರ್ಗಕ್ಕೆ ಬಂದಾಗ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದರೆ ಮದಕರಿ ನಾಯಕ ಥೀಮ್ ಪಾರ್ಕ್ ನಿರ್ಮಿಸುವ ಭರವಸೆ ನೀಡಿ ಹೋಗಿದ್ದೆ. ಆದರೆ, ಬಿಜೆಪಿ ಸರ್ಕಾರ ಬರಲಿಲ್ಲ. ಆದರೂ ಆತಂಕ ಬೇಡ, ನರೇಂದ್ರ ಮೋದಿ ಇದ್ದಾರೆ. ಮುಂದೆ ಚಿತ್ರದುರ್ಗದಲ್ಲಿ ಮದಕರಿ ನಾಯಕ ಸ್ಮಾರಕ ನಿರ್ಮಿಸಲು ನಾವು ಬದ್ಧರಾಗಿದ್ದೇವೆ’ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದರು.

ನಗರದ ಹೊರವಲಯದಲ್ಲಿರುವ ಮಾದಾರ ಚನ್ನಯ್ಯ ಗುರುಪೀಠ ಸಮೀಪದ ಮೈದಾನದಲ್ಲಿ ಶನಿವಾರ ನಡೆದ ಬಿಎಸ್ವೈ ಅಭಿಮಾನೋತ್ಸವದಲ್ಲಿ ಪಾಲ್ಗೊಂಡು ಮಾತನಾಡಿದರು.

‘ಮದಕರಿ ನಾಯಕ ಹಾಗೂ ಒನಕೆ ಓಬವ್ವ ಅವರ ಸ್ಫೂರ್ತಿಯ ಕತೆಗಳನ್ನು ನಾನು ಕೇಳಿದ್ದೇನೆ. ತಾತಂದಿರು, ತಂದೆ– ತಾಯಿ ತಮ್ಮ ಮಕ್ಕಳಿಗೆ ಈ ಕತೆಗಳನ್ನು ಹೇಳುತ್ತಾರೆ. ಹೈದರ್ ಅಲಿ ಸೈನಿಕರ ದಾಳಿಯನ್ನು ಹಿಮ್ಮೆಟ್ಟಿಸಿದ ಒನಕೆ ಓಬವ್ವ ಅವರ ಧೈರ್ಯ ಇಂದಿನ ಮಕ್ಕಳಿಗೆ ಸ್ಫೂರ್ತಿ ತುಂಬುತ್ತದೆ. ಮದಕರಿ ನಾಯಕರಿಗೆ ಗೌರವ ಸಲ್ಲಿಸುವ ಸಲುವಾಗಿ ಈ ಐತಿಹಾಸಿಕ ನಗರದಲ್ಲಿ ನಿಶ್ಚಿತವಾಗಿ ಸ್ಮಾರಕ ನಿರ್ಮಿಸಲಾಗುವುದು’ ಎಂದು ತಿಳಿಸಿದರು.

‘ದಣಿವರಿಯದ ನಾಯಕ ಎಂದು ಪ್ರಸಿದ್ಧಿ ಪಡೆದಿರುವ ಬಿ.ಎಸ್.ಯಡಿಯೂರಪ್ಪ ಅವರಿಗೆ ಗೌರವ ಸಲ್ಲಿಸಲು ವಿವಿಧ ಸಮಾಜಗಳ, ವಿವಿಧ ಸಂಸ್ಕೃತಿಯ, ವಿವಿಧ ಸಂಪ್ರದಾಯಗಳ ಸ್ವಾಮೀಜಿಗಳು ಬಂದಿರುವುದು ಸಂತಸ ತಂದಿದೆ. ಈ ನಾಡಿನ ಮಠಗಳು ಶಿಕ್ಷಣದ ಜೊತೆಗೆ ಅನ್ನ ದಾಸೋಹ ನೀಡುತ್ತಿವೆ. ಹಿಂದೂ ಧರ್ಮದ ಅಸ್ಮಿತೆ ಉಳಿಸುವ ಕೆಲಸ ಮಾಡುತ್ತಿವೆ. ಇಂತಹ ಸ್ವಾಮೀಜಿಗಳು ಪಾಲ್ಗೊಂಡಿರುವ ಸಮಾರಂಭದಲ್ಲಿ ನಾನು ಭಾಗವಹಿಸಿರುವುದು ಅತೀವ ಆನಂದ ಉಂಟು ಮಾಡಿದೆ’ ಎಂದು ಹೇಳಿದರು.

‘ಪಶ್ಚಿಮ ಬಂಗಾಳದಲ್ಲಿ ಇದೇ ಮೊದಲ ಬಾರಿಗೆ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬಂದಿದೆ. ಕರ್ನಾಟಕದಲ್ಲೂ ಮುಂದೆ ಬಿ.ಎಸ್.ಯಡಿಯೂರಪ್ಪ ಅವರ ಮಾರ್ಗದರ್ಶನದಲ್ಲಿ ಬಿಜೆಪಿ ಸರ್ಕಾರ ಅಸ್ತಿತ್ವಕ್ಕೆ ಬರಲಿದೆ. ಈ ಸಮಾರಂಭದಲ್ಲಿ ಪಾಲ್ಗೊಂಡಿರುವ ಜನಸಮೂಹವನ್ನು ಗಮನಿಸಿದರೆ ಬಹಳ ರೋಮಾಂಚನವಾಗುತ್ತಿದೆ’ ಎಂದು ಕೇಂದ್ರ ಸಚಿವ ಪ್ರಲ್ಹಾದ ಜೋಶಿ ತಿಳಿಸಿದರು.

‘ಇಡೀ ದೇಶದಲ್ಲೇ ಯಡಿಯೂರಪ್ಪ ಅವರು ಹೋರಾಟದ ಹೊಸ ಪರಿಕಲ್ಪನೆ ಹುಟ್ಟು ಹಾಕಿದರು. ಅವರು ನಡೆಸಿಕೊಂಡು ಬಂದಿರುವ ಹೋರಾಟಗಳು ಇತರರಿಗೆ, ಯುವಜನರಿಗೆ ಸ್ಫೂರ್ತಿ ತುಂಬುತ್ತವೆ. ಅವರ ಮಾರ್ಗದರ್ಶನದಲ್ಲಿ ಪಕ್ಷ ಮುನ್ನಡೆಯಲಿದೆ’ ಎಂದರು.

ಸಂಸದ ಬಸವರಾಜ ಬೊಮ್ಮಾಯಿ ಮಾತನಾಡಿ ‘ಬಯಲು ಸೀಮೆಯಲ್ಲಿ ಭದ್ರಾ ಮೇಲ್ದಂಡೆ ಯೋಜನೆಗೆ ಅಡಿಗಲ್ಲು ಹಾಕಿದ್ದೇ ಬಿ.ಎಸ್.ಯಡಿಯೂರಪ್ಪ. ವಾಣಿವಿಲಾಸ ಸಾಗರ ಜಲಾಶಯಕ್ಕೆ ನೀರು ಹರಿಸುವ ಯೋಜನೆ ನೀಡಿದವರೂ ಯಡಿಯೂರಪ್ಪ. ಬಯಲು ಸೀಮೆಗೆ ಕುಡಿಯುವ ನೀರು ತಂದ ಭಗೀರಥ ಅವರು. ಬಹುಗ್ರಾಮ ಕುಡುಯುವ ನೀರಿನ ಯೋಜನೆಗಳ ಮೂಲಕ ಅಪಾರ ಕೊಡುಗೆ ನೀಡಿದ್ದಾರೆ’ ಎಂದು ಹೇಳಿದರು.

‘ಉತ್ತರ ಕರ್ನಾಟಕ ಭಾಗದ ಹಲವು ಕೆರೆಗಳನ್ನು ಅವರು ತುಂಬಿಸಿದ್ದಾರೆ. ಭೂಮಿ ತಾಯಿಗೆ ನೀರುಣಿಸಿದ ಕೀರ್ತಿ ಅವರಿಗೆ ಸಲ್ಲುತ್ತದೆ. ಅಧಿಕಾರಕ್ಕಾಗಿ ರಾಜಕಾರಣ ಮಾಡುವ ಈ ದಿನಗಳಲ್ಲಿ ಬಡವರಿಗಾಗಿ ಆಡಳಿತ ನಡೆಸಿದ ಕೀರ್ತಿ ಯಡಿಯೂರಪ್ಪ ಅವರಿಗೆ ಸಲ್ಲುತ್ತದೆ. ಇಂದು ಹಲವು ರಾಜಕಾರಣಿಗಳು ತಮ್ಮನ್ನು ತಾವು ಮಾಸ್ ಲೀಡರ್ ಎಂದು ಕರೆದುಕೊಳ್ಳುತ್ತಾರೆ. ಅಭಿಮಾನೋತ್ಸವದಲ್ಲಿ ಈ ಬೃಹತ್ ಜನಶಕ್ತಿಯನ್ನು ನೋಡಿದರೆ ಯಡಿಯೂರಪ್ಪ ಮಾತ್ರ ಕರ್ನಾಟಕದಲ್ಲಿ ಮಾಸ್ ಲೀಡರ್ ಎಂಬುದು ಮನದಟ್ಟಾಗುತ್ತದೆ’ ಎಂದು ಬಣ್ಣಿಸಿದರು.

‘ಸದಾ ಕಾಲ ಸಾಮಾಜಿಕ ನ್ಯಾಯದ ಬಗ್ಗೆ ಉಪನ್ಯಾಸ ನೀಡುವವರು ಈಗ ದಲಿತರಿಗೆ ಅನ್ಯಾಯ ಮಾಡಿದ್ದಾರೆ. ಒಳ ಮೀಸಲಾತಿಯಲ್ಲಿ ಎಸ್ಸಿ, ಎಸ್ಟಿ ವರ್ಗಕ್ಕೆ ನ್ಯಾಯ ನೀಡಿಲ್ಲ. ವಾಲ್ಮೀಕಿ ಜಯಂತಿ, ಕನಕದಾಸ ಜಯಂತಿ ಘೋಷಣೆ ಮಾಡುವ ಮೂಲಕ ಯಡಿಯೂರಪ್ಪ ಅವರು ನಾಡಿಗೆ ಅಪಾರ ಕೊಡುಗೆ ನೀಡಿದ್ದಾರೆ. ಹಿಂದುಳಿದ ವರ್ಗಗಳಿಗೆ ನ್ಯಾಯ ಕೊಡುವ ಕೆಲಸ ಮಾಡಿದ್ದಾರೆ’ ಎಂದು ಹೇಳಿದರು.

‘2009ರಲ್ಲಿ ರಾಜ್ಯಕ್ಕೆ ಪ್ರವಾಹ ಬಂದಾಗ ಯಡಿಯೂರಪ್ಪ ಒಂದು ದಿನವೂ ಮನೆಯಲ್ಲಿ ಕೂರಲಿಲ್ಲ. ಸಂಕಷ್ಟ ಕಾಲದಲ್ಲಿ ಹಳ್ಳಿಹಳ್ಳಿಗಳನ್ನು ಸುತ್ತಿ ಕಷ್ಟ ಅನುಭವಿಸುವಿಸುತ್ತಿದ್ದ ಜನರ ಸಮಸ್ಯೆ ಪರಿಹರಿಸುವ ಕೆಲಸ ಮಾಡಿದರು. ಮನೆ ಕಳೆದುಕೊಂಡವರಿಗೆ ಸಾವಿರಾರು ಮನೆಗಳನ್ನು ಕಟ್ಟಿಸಿಕೊಟ್ಟರು. ಶಾಶ್ವತ ಪರಿಹಾರ ಕ್ರಮ ಕೈಗೊಳ್ಳುವ ಮೂಲಕ ಬಡವರ ಧ್ವನಿಯಾಗಿದ್ದರು’ ಎಂದರು.

‘ಆಡಳಿತ ಪಕ್ಷ ಮುಳುಗುತ್ತಿರುವ ಸೂರ್ಯ, ಬಿಜೆಪಿ ಉದಯಿಸುತ್ತಿರುವ ಸೂರ್ಯ. ಬಿಎಸ್ವೈ ಅಭಿಮಾನೋತ್ಸವದಲ್ಲಿ ನಾವೆಲ್ಲರೂ ಸೇರಿ ಸಂಕಲ್ಪ ಮಾಡೋಣ. ಬಿ.ಎಸ್.ಯಡಿಯೂರಪ್ಪ ಅವರ ಮಾರ್ಗದರ್ಶನದಲ್ಲಿ ಪಕ್ಷ ಮುನ್ನಡೆಯಲಿದೆ’ ಎಂದು ತಿಳಿಸಿದರು.

ಸಂಸದ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ ‘ಆರ್ಎಸ್ಎಸ್ ಪರಿಕಲ್ಪನೆಗಳನ್ನು ಬಿ.ಎಸ್.ಯಡಿಯೂರಪ್ಪ ಅವರು ಸರಳ ಭಾಷೆಯಲ್ಲಿ ಜನರಿಗೆ ಮುಟ್ಟಿಸುವ ಕೆಲಸ ಮಾಡಿದ್ದಾರೆ. ಸಾಮಾನ್ಯರ ಜೊತೆ ಬೆಳೆದ ಅವರು ಸಾಮಾನ್ಯರ ಕಷ್ವಗಳಿಗೆ ತಕ್ಷಣವೇ ಸ್ಪಂದಿಸುತ್ತಾರೆ. ಜೀತ ಪದ್ಧತಿ ವಿರುದ್ಧ, ಬಗರ್ ಹುಕುಂ ರೈತರಿಗಾಗಿ ಪಾದಯಾತ್ರೆ ಮಾಡಿದ್ದಾರೆ’ ಎಂದು ಹೇಳಿದರು.

‘ದೇಶದಲ್ಲಿ ಮೊದಲ ಕೃಷಿ ಬಜೆಟ್ ನೀಡಿದ ನಾಯಕ ಯಡಿಯೂರಪ್ಪ. ಭವ್ಯ ರಾಮಮಂದಿರಕ್ಕೆ ಕರಸೇವಕರಾಗಿದ್ದರು. ವಿರೋಧ ಪಕ್ಷದ ನಾಯಕರಾಗಿದ್ದಾಗ ಯಡಿಯೂರಪ್ಪ ಗುಡುಗಿದರೆ ವಿಧಾನಸೌಧ ನಡುಗುತ್ತಿತ್ತು. ಅವರ ಜೋಳಿಗೆ ಊರಿಗೆಲ್ಲ ಹೋಳಿಗೆಯಾಗಿತ್ತು. ಬಡವರ ಪರ ಸದಾ ಹೋರಾಟ ನಡೆಸಿದರು’ ಎಂದು ಸಂಸದ ಬಿ.ವೈ.ರಾಘವೇಂದ್ರ ತಿಳಿಸಿದರು.

ಇದೇ ಸಂದರ್ಭದಲ್ಲಿ ಅಮಿತ್ ಶಾ ಅವರು ಯಡಿಯೂರಪ್ಪ ಅವರ ಜೀವನ ಚರಿತ್ರೆ ‘ಕೆಂದಾವರೆ– ಕಮwಲ ಅರಳಿದ ಕಥೆ’ ಹಾಗೂ ‘ಸದನ ಶಿಕಾರಿ– ಯಡಿಯೂರಪ್ಪನವರ ಗುಡುಗಿನ ನುಡಿಗಳು’ ಕೃತಿಗಳನ್ನು ಬಿಡುಗಡೆ ಮಾಡಿದರು. ಸಮಾರಂಭದಲ್ಲಿ ಗಾಯಕರಾದ ಅನುರಾಧ ಭಟ್, ಸಾದ್ವಿನಿ ಕೊಪ್ಪ, ದರ್ಶನ್, ಸುನೀಲ್ ಮುಂತಾದವರು ಗೀತಾ ಗಾಯನ ಪ್ರಸ್ತುತಪಡಿಸಿದರು.

ಕೇಂದ್ರ ಸಚಿವರಾದ ವಿ. ಸೋಮಣ್ಣ, ಶೋಭಾ ಕರಂದ್ಲಾಜೆ, ಬಿಜೆಪಿ ರಾಜ್ಯ ಉಸ್ತುವಾರಿ ರಾಧಾಮೋಹನ್ ಅಗರವಾಲ್, ಸಹ ಉಸ್ತುವಾರಿ ಸುಧಾಕರ ರೆಡ್ಡಿ, ವಿರೋಧ ಪಕ್ಷದ ನಾಯಕ ಆರ್.ಅಶೋಕ, ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಮಾಜಿ ಮುಖ್ಯಮಂತ್ರಿಗಳಾದ ಡಿ.ವಿ.ಸದಾನಂದ ಗೌಡ, ಜಗದೀಶ ಶೆಟ್ಟರ್, ಸಂಸದ ಗೋವಿಂದ ಕಾರಜೋಳ, ರಾಜ್ಯಸಭಾ ಮಾಜಿ ಸದಸ್ಯ ಪ್ರಭಾಕರ್ ಕೋರೆ, ಕೇಂದ್ರದ ಮಾಜಿ ಸಚಿವರಾದ ಜಿ.ಎಂ.ಸಿದ್ಧೇಶ್ವರ, ಎ.ನಾರಾಯಣಸ್ವಾಮಿ, ಮಾಜಿ ಸಚಿವರಾದ ಬಿ. ಶ್ರೀರಾಮುಲು, ಸಿ.ಟಿ.ರವಿ, ಶಾಸಕ ಡಾ.ಅಶ್ವತ್ಥನಾರಾಯಣ, ಉಡುಪಿ ಪೇಜಾವರ ಮಠದ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಶ್ರವಣ ಬೆಳಗೊಳದ ಆಗಮಕೀರ್ತಿ ಭಟ್ಟಾರಕ ಸ್ವಾಮೀಜಿ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.