ಚಿತ್ರದುರ್ಗ: ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಅವರು 40 ದಿನಗಳಿಂದ ಆಸ್ಪತ್ರೆಯಲ್ಲಿ ನಡೆಸುತ್ತಿದ್ದ ಹೋರಾಟ ಅವರ ಸಾವಿನೊಂದಿಗೆ ಭಾನುವಾರ ಕೊನೆಗೊಂಡಿದೆ. ಅವರು ಬದುಕಿ ಬರುತ್ತಾರೆ ಎಂಬ ವಿಶ್ವಾಸದಿಂದ ಜಿಲ್ಲೆಯಾದ್ಯಂತ ನಡೆದ ಪೂಜೆ, ಹೋಮ, ಹವನಗಳು ಫಲಕೊಡಲಿಲ್ಲ. ವಿವಿಧ ಧರ್ಮೀಯರು ನಡೆಸಿದ ಪ್ರಾರ್ಥನೆ ಕೈಗೂಡಲಿಲ್ಲ ಎಂಬ ಕೊರಗುಸಾರ್ವಜನಿಕರಲ್ಲಿ ಮನೆ ಮಾಡಿದೆ.

ಮಂಡಿಚಿಪ್ಪಿನ ಶಸ್ತ್ರಚಿಕಿತ್ಸೆಗೆ ಹೋದವರು ಶ್ವಾಸಕೋಶದ ಸೋಂಕಿನಿಂದ ಬಳಲುತ್ತಿದ್ದಾಗ ಚಳ್ಳಕೆರೆ, ಹಿರಿಯೂರು ಸೇರಿದಂತೆ ಜಿಲ್ಲೆಯ ವಿವಿಧೆಡೆ ಸಾರ್ವಜನಿಕರು ಮರುಗಿದ್ದರು. ಅವರ ಬಗ್ಗೆ ಇಲ್ಲಸಲ್ಲದ ಸುದ್ದಿಗಳು ಹರಿದಾಡುತ್ತಿದ್ದಾಗ ಸುಧಾಕರ್ ಅಭಿಮಾನಿಗಳು ಅವುಗಳನ್ನು ನಂಬಲಿಲ್ಲ. ತಮ್ಮ ನಾಯಕ ಬದುಕಿ ಬರುತ್ತಾರೆಂಬ ವಿಶ್ವಾಸದಿಂದ ದೇವರ ಮೊರೆ ಹೋದರು. ಹಿಂದೂ, ಮುಸ್ಲಿಂ, ಜೈನ ಸಮುದಾಯದ ಜನರೆಲ್ಲ ಸೇರಿ ಪ್ರಾರ್ಥನೆ ಸಲ್ಲಿಸಿದರು.

ಇನ್ನೂ ಒಂದು ಹೆಜ್ಜೆ ಮುಂದೆ ಹೋಗಿ ಮಹಾ ಮೃತ್ಯುಂಜಯ ಹೋಮ ನಡೆಸಲಾಯಿತು. ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಸಚಿವರಿಗೆ ದೇವರು ಜೀವದಾನ ಮಾಡುತ್ತಾನೆ ಎಂದೇ ಜನ ನಂಬಿದ್ದರು. ಆದರೆ ಅವರ ನಂಬಿಕೆ, ವಿಶ್ವಾಸಗಳೆಲ್ಲವೂ ಸುಳ್ಳಾಗಿದ್ದು ಸಚಿವ ಸುಧಾಕರ್ ಇಹಲೋಕದ ಯಾತ್ರೆ ಮುಗಿಸಿದ್ದಾರೆ.

ಪೊಲೀಸರು ನಗರಸಭೆ ಸಹಯೋಗದೊಂದಿಗೆ ಸೂಕ್ತ ಬ್ಯಾರಿಕೇಡ್ ವ್ಯವಸ್ಥೆ ಮಾಡಿದ್ದು, ಅಭಿಮಾನಿಗಳು ಸಾಲಿನಲ್ಲಿ ಬಂದು ಅಂತಿಮ ದರ್ಶನ ಪಡೆಯಲು ವ್ಯವಸ್ಥೆ ಮಾಡಿದ್ದರು. ವೃದ್ಧರು, ಮಹಿಳೆಯರು ದರ್ಶನ ಪಡೆಯಲು ಪರದಾಡುತ್ತಿದ್ದರು. ನೆತ್ತಿ ಕಾಯುವಂತೆ ಸುಡುತ್ತಿದ್ದ ಬಿಸಿಲನ್ನು ಲೆಕ್ಕಿಸದೆ ಸಾವಿರಾರು ಸಂಖ್ಯೆಯ ಅಭಿಮಾನಿಗಳು ನೆಹರು ಮೈದಾನದ ಸುತ್ತ ಇರುವ ಮರಗಳ ನೆರಳಿನಲ್ಲಿ ಪಾರ್ಥಿವ ಶರೀರದ ದರ್ಶನಕ್ಕಾಗಿ ಕಾದು ಕುಳಿತಿದ್ದರು. ಸುಡುಬಿಸಿಲನ್ನೂ ಲೆಕ್ಕಿಸದೆ ನೂರಾರು ಸಂಖ್ಯೆಯಲ್ಲಿ ಗ್ರಾಮೀಣ ಭಾಗದಿಂದ ಮಹಿಳೆಯರು ಬಂದಿದ್ದರು.

‘ಎಂತಹ ಕಷ್ಟ ಬಂದ್ರೂ ನೀನಿದ್ದೀಯ ಎಂಬ ಧೈರ್ಯ ಇತ್ತು. ಯಪ್ಪೋ ಇನ್ಮೇಲೆ ಯಾರು ನಮ್ಮ ಕೈಹಿಡೀತಾರೆ’ ಎಂದು ನಗರದ ಹರಿಶ್ಚಂದ್ರಘಾಟ್ ಬಡಾವಣೆಯ ಕರಿಯಮ್ಮ ಕಣ್ಣೀರು ಹಾಕಿದರು.

ಮತ್ತೆ ಕೆಲವರು ಮೈದಾನದಲ್ಲಿ ಹಾಕಿದ್ದ ಶಾಮಿಯಾನದ ಕೆಳಗೆ ಕುಳಿತು, ಆಂಬುಲೆನ್ಸ್ ಎಲ್ಲಿದೆಯಂತೆ ಎಂದು ಗಳಿಗೆಗೊಮ್ಮೆ ಕಂಡಕಂಡವರನ್ನು ಕೇಳುತ್ತಿದ್ದರು. ನೆಹರೂ ಮೈದಾನದ ಹೊರಗೆ ಪ್ರಧಾನ ರಸ್ತೆಯ ಎರಡೂ ಬದಿಯ ನೆರಳಿನಲ್ಲಿ ನೂರಾರು ಸಂಖ್ಯೆಯಲ್ಲಿ ಅಭಿಮಾನಿಗಳು ನಿಂತಿದ್ದರು. ಪಾರ್ಥಿವ ಶರೀರ ನೆಹರೂ ಮೈದಾನ ಪ್ರವೇಶಿಸುತ್ತಿದ್ದಂತೆ ಪೂಜೆ ಸಲ್ಲಿಸಿ ಸಾರ್ವಜನಿಕ ದರ್ಶನಕ್ಕೆ ಅವಕಾಶ ಕಲ್ಪಿಸಲಾಯಿತು. ನೂಕುನುಗ್ಗಲು ತಪ್ಪಿಸಲು ಪೊಲೀಸರು ಸಂಜೆ 6 ರವರೆಗೆ ದರ್ಶನಕ್ಕೆ ಅವಕಾಶವಿದೆ. ಸಾವಧಾನವಾಗಿ ಬನ್ನಿ ಎಂದು ಧ್ವನಿವರ್ಧಕದಲ್ಲಿ ಮನವಿ ಮಾಡುತ್ತಿದ್ದರು.

ಪಾರ್ಥಿವ ಶರೀರ ಹೊತ್ತ ವಾಹನದೊಂದಿಗೆ ಶಾಸಕರಾದ ಟಿ. ರಘುಮೂರ್ತಿ, ಕೆ.ಸಿ.ವೀರೇಂದ್ರ, ಪುತ್ರ ಸುಹಾಸ್, ಸಹೋದರ ಡಿ. ಕುಮಾರ್ ಆಗಮಿಸಿದ್ದರು. ಸಂಸದ ಗೋವಿಂದ ಕಾರಜೋಳ, ಶಾಸಕ ಬಿ.ಜಿ. ಗೋವಿಂದಪ್ಪ, ವಿಧಾನ ಪರಿಷತ್ ಸದಸ್ಯ ಡಿ.ಟಿ. ಶ್ರೀನಿವಾಸ್, ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್, ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷ ಎಂ. ಜಯಣ್ಣ, ಜಿಲ್ಲಾಧಿಕಾರಿ ಟಿ. ವೆಂಕಟೇಶ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು, ಡಿವೈಎಸ್ಪಿ ಶಿವಕುಮಾರ್, ತಹಶೀಲ್ದಾರ್ ಎಂ.ಸಿದ್ದೇಶ್, ನಗರಸಭೆ ಪೌರಾಯುಕ್ತ ವಾಸೀಂ ಅಂತಿಮ ದರ್ಶನ ಪಡೆದರು. ಮೃತರ ಗೌರವಾರ್ಥ ನಗರದಲ್ಲಿನ ಅಂಗಡಿಗಳನ್ನು ವರ್ತಕರು ಸ್ವಯಂ ಬಂದ್ ಮಾಡಿದ್ದರು.

ಹಿರಿಯೂರು ತಾಲ್ಲೂಕಿನಲ್ಲಿ ಕಣ್ಣೀರು

ಜಿಲ್ಲಾ ಉಸ್ತುವಾರಿ ಸಚಿವ ಡಿ. ಸುಧಾಕರ್ ಅವರ ಪಾರ್ಥಿವ ಶರೀರ ಮಧ್ಯಾಹ್ನ 2.25ಕ್ಕೆ ನಗರದ ನೆಹರೂ ಮೈದಾನಕ್ಕೆ ಆಗಮಿಸಿದಾಗ ನೆರೆದಿದ್ದ ಸಾವಿರಾರು ಸಂಖ್ಯೆಯ ಅಭಿಮಾನಿಗಳು ಅಶ್ರುತರ್ಪಣ ಅರ್ಪಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.