ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮುರುಘಾ ಮಠದಲ್ಲಿ ನೀರವ ಮೌನ: ಆತಂಕದ ಕಾರ್ಮೋಡ

Last Updated 31 ಆಗಸ್ಟ್ 2022, 7:27 IST
ಅಕ್ಷರ ಗಾತ್ರ

ಚಿತ್ರದುರ್ಗ: ಲೈಂಗಿಕ ಕಿರುಕುಳದ ಆರೋಪ ಎದುರಿಸುತ್ತಿರುವ ಮುರುಘಾ ಮಠದ ಪೀಠಾಧ್ಯಕ್ಷ ಶಿವಮೂರ್ತಿ ಮುರುಘಾ ಶರಣರು ಮಠದಲ್ಲಿ ಮೌನಕ್ಕೆ ಜಾರಿದ್ದಾರೆ. ಮಠದ ಸುತ್ತಲು ಪೊಲೀಸ್ ಸರ್ಪಗಾವಲು ಹಾಕಲಾಗಿದೆ.

ಎಂದಿನಂತೆ ಬುಧವಾರ ಮುಂಜಾನೆ ವಾಯುವಿಹಾರ ಮುಗಿಸಿದ ಶರಣರು, ಪೂಜಾ ಕೈಂಕರ್ಯ ಮುಗಿಸಿ ಕೊಠಡಿಗೆ ತೆರಳಿದರು.
ಮಠದ ಆವರಣದಲ್ಲಿರುವ ವಿದ್ಯಾರ್ಥಿ ನಿಲಯದ ವಿದ್ಯಾರ್ಥಿಗಳು ಗದ್ದುಗೆಗೆ ತೆರಳಿ ಪೂಜೆ ಸಲ್ಲಿಸುತ್ತಿದ್ದ ದೃಶ್ಯ ಸಾಮಾನ್ಯವಾಗಿತ್ತು.

ಪೊಲೀಸರು ಪ್ರತಿಯೊಬ್ಬರನ್ನು ತಪಾಸಣೆ ಮಾಡಿ ಒಳ ಆವರಣಕ್ಕೆ ಪ್ರವೇಶ ಕಲ್ಪಿಸುತ್ತಿದ್ದಾರೆ.

ಬೆಳಗ್ಗೆಯಿಂದ ನೀರವ ಮೌನ ಆವರಿಸಿದ್ದ ಮಠದಲ್ಲಿ ಬೆಳಿಗ್ಗೆ 11.45 ರ ವೇಳೆಗೆ ಜೆಡಿಎಸ್ ಮುಖಂಡ ವೀರೇಂದ್ರ ಪಪ್ಪಿ, ಬಿಜೆಪಿ ಮುಖಂಡ ಅನಿತ್ ಕುಮಾರ್ ಬರುತ್ತಿದ್ದಂತೆ ಭಕ್ತರು ಪ್ರತ್ಯಕ್ಷರಾದರು.

ಗಣಪತಿ ಹಬ್ಬದ ಅಂಗವಾಗಿ ಸಾರ್ವಜನಿಕರು ಮಠಕ್ಕೆ ಭೇಟಿ ನೀಡಿ ಮುರುಘಾ ವನದಲ್ಲಿ ಸುತ್ತಾಡಿದರು. ಸಿಪಿಐ ಬಾಲಚಂದ್ರ ನಾಯ್ಕ್ ಭದ್ರತೆ ಪರಿಶೀಲಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT