ಚಿತ್ರದುರ್ಗ: ‘ವಿದ್ಯಾರ್ಥಿಗಳಲ್ಲಿ ಸೇವಾ ಮನೋಭಾವ, ಶಿಸ್ತು ಮತ್ತು ಸಾಮಾಜಿಕ ಜವಾಬ್ದಾರಿ ಮೂಡಿಸುವಲ್ಲಿ ಎನ್ಎಸ್ಎಸ್ ಶಿಬಿರಗಳು ಪ್ರಮುಖ ಪಾತ್ರ ವಹಿಸುತ್ತವೆ. ಗ್ರಾಮ ವಾಸ್ತವ್ಯದ ಮೂಲಕ ವಿದ್ಯಾರ್ಥಿನಿಯರು ಗ್ರಾಮೀಣ ಬದುಕಿನ ಸವಾಲುಗಳನ್ನು ಹತ್ತಿರದಿಂದ ಕಂಡಿದ್ದಾರೆ’ ಎಂದು ಪ್ರಾಂಶುಪಾಲ ಶಿವಣ್ಣ ಹೇಳಿದರು.

ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನ ಎನ್ಎಸ್ಎಸ್ ಘಟಕದ ವತಿಯಿಂದ ಹುಲ್ಲೂರು ಗ್ರಾಮದಲ್ಲಿ ನಡೆದ ವಾರ್ಷಿಕ ವಿಶೇಷ ಶಿಬಿರದ ಸಮಾರೋಪ ಸಮಾರಂಭದಲ್ಲಿ ಅವರು ಮಾತನಾಡಿದರು.

‘ಹುಲ್ಲೂರಿನ ಜನ ಹಾಗೂ ಇಲ್ಲಿನ ಸಾಂಸ್ಕೃತಿಕ ಪರಿಸರವು ನಮ್ಮ ಶಿಬಿರಕ್ಕೆ ವಿಶೇಷ ಸಹಕಾರ ನೀಡಿದೆ. ಈ ಊರಿನಲ್ಲಿರುವ ಸಂಘ ಸಂಸ್ಥೆಗಳು ಸೇವಾ ಮನೋಭಾವ, ಅರ್ಪಣ ಭಾವ ಹೊಂದಿವೆ’ ಎಂದರು.

‘ವಿದ್ಯಾರ್ಥಿನಿಯರ ಸೇವಾ ಮನೋಭಾವ ಕಂಡು ಸಂತೋಷವಾಗಿದೆ. ಒಂದು ವಾರ ನಮ್ಮ ಊರಿನಲ್ಲಿ ಸಾಂಸ್ಕೃತಿಕ ವಾತಾವರಣ ಸೃಷ್ಟಿ ಮಾಡಿದ್ದರು’ ಎಂದು ಊರಿನ ಮುಖಂಡ ದೇವರಾಜ್ ಹೇಳಿದರು.

ಎನ್ಎಸ್ಎಸ್ ಯೋಜನಾಧಿಕಾರಿ ಗಿರೀಶ್, ಸಹ ಶಿಬಿರಾಧಿಕಾರಿಗಳಾದ ಎಂ.ಮೋಹನ್ ಕುಮಾರ್, ಆರ್.ಶಿವಪ್ರಸಾದ್, ಮುಖಂಡರಾದ ಕಲ್ಲೇಶ್, ದೇವರಾಜ್, ಪ್ರವೀಣ್, ನಾಗೇಶ್, ಮಹೇಶ್ವರಪ್ಪ, ರಾಮಚಂದ್ರ ರೆಡ್ಡಿ, ರಾಜಪ್ಪ, ಸುಭಾಷ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260427-44-862876865

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.