ಶುಕ್ರವಾರ, ಅಕ್ಟೋಬರ್ 18, 2019
23 °C

ಚಿತ್ರದುರ್ಗ ಜಿಲ್ಲೆಯಲ್ಲಿ ಉತ್ತಮ ಮಳೆ: ಹಳ್ಳ-ಕೊಳ್ಳ, ಚೆಕ್ ಡ್ಯಾಮ್ ಭರ್ತಿ

Published:
Updated:
Prajavani

ಚಿತ್ರದುರ್ಗ: ಜಿಲ್ಲೆಯಲ್ಲಿ ಸೋಮವಾರ ರಾತ್ರಿ ಉತ್ತಮ ಮಳೆ ಸುರಿದಿದ್ದು, ಹಳ್ಳ-ಕೊಳ್ಳ ಹಾಗೂ ಚೆಕ್ ಡ್ಯಾಮ್ ಗಳು ಭರ್ತಿಯಾಗಿವೆ.

ಸೋಮವಾರ ತಡರಾತ್ರಿ ಆರಂಭವಾದ ಮಳೆ ಮಂಗಳವಾರ ಬೆಳಿಗ್ಗೆ ವರೆಗೆ ಸುರಿದಿದೆ. ಹಿರಿಯೂರು ತಾಲ್ಲೂಕಿನ ಧರ್ಮಾಪುರ, ಚಿತ್ರದುರ್ಗ, ಹೊಸದುರ್ಗ ಸೇರಿ ಹಲವೆಡೆ ಉತ್ತಮ ಮಳೆಯಾಗಿದೆ.

ಧರ್ಮಪುರ ಅರಳೀಕೆರೆ ಹಳ್ಳ ಐದು ವರ್ಷಗಳ ನಂತರ ಮೈತುಂಬಿ ಹರಿಯುತ್ತಿದೆ. ಮಳೆಯಿಂದಾಗಿ ರೈತರು ಹರ್ಷಗೊಂಡಿದ್ದಾರೆ.

Post Comments (+)