ಚಿತ್ರದುರ್ಗ: ‘ಜಟ್ ಪಟ್ ನಗರದ ಸಮೀಪದ ಹಿಂದೂ ವೀರಶೈವ ರುದ್ರಭೂಮಿಯಲ್ಲಿ ಮೂಲಸೌಲಭ್ಯಗಳ ಕೊರತೆ ಇದೆ. ಇಲ್ಲಿ ಅಗತ್ಯ ಸೌಲಭ್ಯಗಳನ್ನು ಶೀಘ್ರ ಒದಗಿಸುವಲ್ಲಿ ಬದ್ಧನಾಗಿದ್ದೇನೆ’ ಎಂದು ಶಾಸಕ ಕೆ.ಸಿ.ವೀರೇಂದ್ರ ಹೇಳಿದರು.

ವೀರಶೈವ ಸಮಾಜದ ಪ್ರಮುಖ ಮುಖಂಡರೊಂದಿಗೆ ಬುಧವಾರ ರುದ್ರಭೂಮಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಅವರು ಮಾತನಾಡಿದರು.

‘ಪ್ರತಿ ಹಳ್ಳಿಯಲ್ಲೂ ರುದ್ರಭೂಮಿ ಇರಬೇಕು ಎಂಬುದು ಸರ್ಕಾರದ ನಿಯಮವಾಗಿದೆ. ಅದರಂತೆ ರುದ್ರಭೂಮಿಗೆ ಬೇಕಾಗಿರುವಂತಹ ಮೂಲ ಸೌಕರ್ಯಗಳನ್ನು ಒದಗಿಸುವ ಕೆಲಸವನ್ನು ಪ್ರಾಮಾಣಿಕವಾಗಿ ಮಾಡುತ್ತೇನೆ. ಮಾನವ ಕುಲದಲ್ಲಿ ಎಷ್ಟೇ ಆಸ್ತಿ ಅಂತಸ್ತು ಸಂಪಾದನೆ ಮಾಡಿದರೂ ಆತ ರುದ್ರಭೂಮಿಯಲ್ಲಿ ಮುಕ್ತಿ ಪಡೆಯಬೇಕು. ಎಷ್ಟೇ ಆಸ್ತಿ ಹಣ ಗಳಿಸಿದರೂ ಕೊನೆಗೆ ರುದ್ರಭೂಮಿ ಸೇರುವುದು ನಿಶ್ಚಿತ’ ಎಂದರು.

‘ರುದ್ರಭೂಮಿ ಪ್ರದೇಶದಲ್ಲಿ ಕುಡಿಯುವ ನೀರು, ವಿದ್ಯುತ್, ಶೌಚಾಲಯ ವ್ಯವಸ್ಥೆ, ಒಳರಸ್ತೆಗಳ ಅಭಿವೃದ್ಧಿ, ಕಾಂಪೌಂಡ್ ವ್ಯವಸ್ಥೆ, ಶೆಡ್ ನಿರ್ಮಾಣಮಾಡಬೇಕಿದೆ. ಸ್ವಚ್ಛತೆಯನ್ನ ಮುಖ್ಯವಾಗಿ ರುದ್ರ ಭೂಮಿಯಲ್ಲಿ ಕಾಪಾಡಿಕೊಳ್ಳಬೇಕಿದೆ. ಮೃತರ ಅಂತ್ಯಕ್ರಿಯೆಗಳ ವೇಳೆ ಕುಟುಂಬದವರಿಗೆ ಆಗುತ್ತಿರುವ ತೊಂದರೆಗಳನ್ನು ಹಂತ ಹಂತವಾಗಿ ಸರಿಪಡಿಸಲು ಅಧಿಕಾರಿಗಳಿಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ತಿಳಿಸುತ್ತೇನೆ’ ಎಂದು ಹೇಳಿದರು.

‘ರುದ್ರಭೂಮಿ ಎಂಬುದು ಸಮಾಜದ ಎಲ್ಲಾ ವರ್ಗದ ಜನರಿಗೆ ಅತ್ಯಂತ ಸಂವೇದನಾಶೀಲವಾದ ಸ್ಥಳವಾಗಿದೆ. ಶವ ಸಾಗಣೆಗೆ ಸುಗಮ ರಸ್ತೆ, ಮಳೆಗಾಲದಲ್ಲಿ ನೀರು ನಿಂತುಕೊಳ್ಳದ ವ್ಯವಸ್ಥೆ, ಬೆಳಕಿನ ಸೌಲಭ್ಯ ಬೇಕಿದೆ. ಭದ್ರತಾ ಗೋಡೆ ತ್ವರಿತಗತಿಯಲ್ಲಿ ಮಾಡಲಾಗುತ್ತದೆ. ಇದಕ್ಕೆ ಸಮಾಜದ ಮುಖಂಡರು, ಸಾರ್ವಜನಿಕರ ಸಹಕಾರ ನೀಡಿದರೆ ಮಾತ್ರ ರುದ್ರಭೂಮಿಯ ಸಮಗ್ರ ಅಭಿವೃದ್ಧಿ ಸಾಧ್ಯವಾಗುತ್ತದೆ ’ ಎಂದರು.

ಈ ಸಂದರ್ಭದಲ್ಲಿ ನಗರಸಭೆ ಪೌರಾಯುಕ್ತೆ ಎಸ್.ಲಕ್ಷ್ಮಿ, ವೀರಶೈವ ಮುಖಂಡರಾದ ಷಣ್ಮುಖಪ್ಪ, ನಾಗರಾಜ್, ಸಂತೋಷ್, ಮಂಜುನಾಥ್, ತಿಪ್ಪೇಶ್, ದ್ವಾರಕೀಶ್, ರಮೇಶ್ ನಾಗರಾಜ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260507-44-454489815

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.