ಚಿತ್ರದುರ್ಗ: ‘12ನೇ ಶತಮಾನ ಇತಿಹಾಸದಲ್ಲಿ ಪ್ರಮುಖ ಕಾಲಘಟ್ಟ. 800 ವರ್ಷಗಳ ಹಿಂದೆ ಶರಣರು ಸಾಮಾಜಿಕ ಹಿತ, ಸಮಾನತೆಗೆ ಹೋರಾಟ ಮಾಡಿದ್ದರು’ ಎಂದು ಆಕಾಶವಾಣಿ ಕೇಂದ್ರದ ಕಾರ್ಯಕ್ರಮ ಅಧಿಕಾರಿ ಡಿ.ಆರ್.ಶಿವಪ್ರಕಾಶ್ ತಿಳಿಸಿದರು.

ನಗರದ ಮುರುಘಾ ಮಠದಲ್ಲಿ ಬುಧವಾರ ಆಯೋಜಿಸಿದ್ದ ಯಡಿಯೂರು ತೋಂಟದ ಸಿದ್ಧಲಿಂಗ ಯತಿಗಳ ಶರಣೋತ್ಸವದಲ್ಲಿ ಮಾತನಾಡಿದರು.

‘ಬಸವಣ್ಣ, ಅಲ್ಲಮ, ಅಕ್ಕಮಹಾದೇವಿ, ಸಿದ್ಧರಾಮ ಸೇರಿದಂತೆ ನೂರಾರು ಶರಣರು ನಮ್ಮಂತೆಯೇ ಬದುಕಿದವರು. ಅವರ ಬದುಕಿನ ರೀತಿ, ಕೊಟ್ಟ ಕೊಡುಗೆ ಎಲ್ಲದರ ಪರಿಣಾಮವಾಗಿ ನಾವು ಅವರನ್ನು ದೈವದ ಸ್ಥಾನದಲ್ಲಿರಿಸಿದ್ದೇವೆ’ ಎಂದರು.

‘ಶರಣರು ಜೀವನದ ಎಲ್ಲ ಅವಸ್ಥೆಗಳನ್ನು ಕಂಡು ಅಧ್ಯಯನಶೀಲರಾಗಿ ವಚನ ಸಾಹಿತ್ಯವನ್ನು ಸೃಷ್ಟಿಸುವ ಮೂಲಕ ಬಹುದೊಡ್ಡ ಜ್ಞಾನಭಂಡಾರವನ್ನು ಜಗತ್ತಿಗೆ ಬಿಟ್ಟು ಹೋಗಿದ್ದಾರೆ. 12ನೇ ಶತಮಾನದ ವಚನ ಸಾಹಿತ್ಯ ಪ್ರಜಾ ಸಾಹಿತ್ಯವಾಗಿತ್ತು’ ಎಂದು ತಿಳಿಸಿದರು.

‘16ನೇ ಶತಮಾನದಲ್ಲಿ ತೋಂಟದ ಸಿದ್ಧಲಿಂಗ ಯತಿಗಳು ಬಸವಣ್ಣನವರಂತೆ ಈ ನೆಲದಲ್ಲಿ ಹುಟ್ಟಿ ಬೆಳೆದು ಜ್ಞಾನ ಸಂಪಾದನೆಗಾಗಿ ಅಧ್ಯಯನ ನಡೆಸಿದರು. ನಂತರದಲ್ಲಿ ಬಸವೋತ್ತರ ಯುಗದ ವಚನ ಸಾಹಿತ್ಯ ಸೃಷ್ಟಿಗೆ ಕಾರಣಕರ್ತರಾದರು’ ಎಂದರು.

ಬಸವ ಮುರುಘೇಂದ್ರ ಸ್ವಾಮೀಜಿ, ಈಚಲನಾಗೇನಹಳ್ಳಿ ಗೋವಿಂದ ಸ್ವಾಮೀಜಿ, ಭಕ್ತರಾದ ಶ್ರೀನಿವಾಸ್, ತಿಪ್ಪೇಸ್ವಾಮಿ, ನಾಗರಾಜ ಸಂಗಂ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260326-44-2144221065

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.