‘ಚಂದ್ರಶೇಖರ್ ಹಾಗೂ ರೋಷನ್ ಸಲ್ದಾನ ಸಾಲ ಕೊಡುವುದಾಗಿ ಸಾಕಷ್ಟು ಜನರಿಗೆ ನಂಬಿಸಿ ವಂಚಿಸಿದ್ದಾರೆ. ಚಂದ್ರ ಫೈನಾನ್ಶಿಯರ್ ಆಗಿ ನಟನೆ ಮಾಡಿದರೆ ರೋಷನ್ ಸಲ್ದಾನಾ ವಕೀಲನಂತೆ ನಟಿಸುತ್ತಿದ್ದ. ಉದ್ಯಮಿಗಳಿಗೆ ನಂಬಿಕೆ ಬರುವಂತೆ ಇಬ್ಬರೂ ನಾಟಕ ಮಾಡುತ್ತಿದ್ದರು. ಇಬ್ಬರೂ ವಂಚನೆಯ ನಟನೆಯಲ್ಲಿ ‘ಮಾಸ್ಟರ್’ ಆಗಿದ್ದರು. ಮುಂಗಡ ಹಣ ಪಡೆದು ವಂಚಿಸುತ್ತಿದ್ದರು. ವಂಚನೆ ಮಾಡಿರುವ ಪ್ರಕರಣಗಳ ವಿಚಾರಣೆ ಮುಂದುವರಿಸುತ್ತೇವೆ’ ಎಂದು ಎಸ್ಪಿ ಹೇಳಿದರು.