ಚಿತ್ರದುರ್ಗ: ನಗರದ ಗಮಕ ಕಲಾಭಿಮಾನಿಗಳ ಸಂಘ ಆಯೋಜಿಸಿದ್ದ ಮಾಸಿಕ ಗಮಕ ಸಂಭ್ರಮದ 32ನೇ ಕಾರ್ಯಕ್ರಮದಲ್ಲಿ ಸಂಧ್ಯಾ ರಾಗ ಸುಗಮ ಸಂಗೀತ ಶಾಲೆಯ ಪ್ರಾಚಾರ್ಯರಾದ ವಿದುಷಿ ಸಂಧ್ಯಾ ಜಯಶಂಕರ ಮತ್ತು ಶಿಷ್ಯರು ಸುಗಮ ಸಂಗೀತ ಪ್ರಸ್ತುತಪಡಿಸಿದರು.

ಗಣಪನೇ ತ್ರಿಜಗ ವಂದಿತನೇ, ಪ್ರಾಹಿಗ ಜಮುಖ, ಕನ್ನಡದ ಕವನ, ಮೂಡುತ ರವಿ ರಂಗು ಚೆಲ್ಲೈತೆ, ಬಾ..ಬಾ.. ಓ ಬೆಳಕೆ, ಹಾರಿ ಬಂದನೇ ಸ್ವಾಮಿ ಏರಿಬಂದನೆ, ಸೋಜುಗಾದ ಸೂಜು ಮಲ್ಲಿಗೆ, ರಸಿಕ ಇದೋ ಹೃದಯ ವಂದನೆ ಮುಂತಾದ ಗೀತೆಗಳು ಸಭಿಕರ ಮನಸೂರೆಗೊಂಡವು.

ಸಿ.ಆರ್. ಬಡಾವಣೆಯ ಗಣಪತಿ ದೇವಾಲಯದಲ್ಲಿ ಕಾರ್ಯಕ್ರಮ ನಡೆಯಿತು.

‘ಗಮಕವು ಅತ್ಯಂತ ಶ್ರೇಷ್ಠ ಕಲೆ. ರಾಮಾಯಣದ ಕಾಲದಿಂದಲೂ ಈ ಕಲೆಯು ಪ್ರಚಲಿತದಲ್ಲಿತ್ತು ಎನ್ನುವು ದಕ್ಕೆ ಸಾಕಷ್ಟು ಉಲ್ಲೇಖಗಳಿವೆ. ನಮ್ಮ ಪುರಾತನ ಕಾವ್ಯ ಪ್ರಕಾರಗಳು ಇಂದಿಗೂ ಜೀವಂತವಾಗಿರಲು ಗಮಕ ಕಲೆ ಪೂರಕವಾಗಿದೆ. ನಮ್ಮ ಪರಂಪರೆ ಉಳಿಸಲು ಹಾಗೂ ಮೌಲ್ಯಯುತ ಸಮಾಜ ನಿರ್ಮಾಣದಲ್ಲಿ ಇದರ ಕೊಡುಗೆ ಪ್ರಮುಖವಾಗಿದೆ’ ಎಂದು ಸರ್ಕಾರಿ ಕಲಾ ಕಾಲೇಜಿನ ಉಪನ್ಯಾಸಕಿ ಭಾರ್ಗವಿ ತಿಳಿಸಿದರು.

ಕಾರ್ಯಕ್ರಮವು ಗಾಯಕ ಕಲ್ಯಾಣ್ ಅವರ ಗಮಕ ಪ್ರಾರ್ಥನೆಯೊಂದಿಗೆ ಆರಂಭವಾಯಿತು. ಸಂಘದ ಅಧ್ಯಕ್ಷೆ ರಮಾದೇವಿ ವೆಂಕಣ್ಣಾಚಾರ್, ಉಪಾಧ್ಯಕ್ಷ ಅನಂತಕೃಷ್ಣ, ಜಿಲ್ಲಾ ಪ್ರತಿನಿಧಿ ರಾಜೀವಲೋಚನ, ಕಾರ್ಯದರ್ಶಿ, ವಿದುಷಿ ಮೀನಾಕ್ಷಿ ಭಟ್, ಸಂಸ್ಕಾರ ಭಾರತಿಯ ಪ್ರಧಾನ ಕಾರ್ಯದರ್ಶಿ ಶಶಿಧರ್, ನಿರ್ದೇಶಕಿ ಬಿ.ಎಲ್. ಉಮಾ ಇದ್ದರು.

ಮುಂದಿನ ಮಾಸಿಕ ಕಾರ್ಯಕ್ರಮ ಏ. 26ರಂದು ನಡೆಯಲಿದ್ದು ಸಾಗರ ತಾಲ್ಲೂಕು ಹೆಗ್ಗೋಡಿನ ಸಿ. ಅಶೋಕಕುಮಾರ ಅವರು ‘ಅಳುಕುವರೆ ಸುಪ್ರತೆಯರ್ ಅಗ್ನಿಗೆ’ ಕಾವ್ಯ ಭಾಗವನ್ನು ವಾಚಿಸುವರು. ಶ್ರಾವ್ಯ ಅವರು ವ್ಯಾಖ್ಯಾನಿಸುವರು ಎಂದು ಸಂಘದ ಪ್ರಕಟಣೆ ತಿಳಿಸಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260325-44-58971477

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.