ಚಿತ್ರದುರ್ಗ: ದೂರದ ಲಕ್ಕವಳ್ಳಿಯಿಂದ ಭದ್ರೆಯ ನೀರು ಇನ್ನೂ ಜಿಲ್ಲಾ ವ್ಯಾಪ್ತಿ ಪ್ರವೇಶಿಸಿಲ್ಲ. ಆದರೆ, ನಗರದ ಜನರು ಈಗಾಗಲೇ ಭದ್ರೆ ಅಷ್ಟೇ ಅಲ್ಲ ಸುಭದ್ರೆಯ ಹೆಸರಿನ ಆರ್ಒ ನೀರು ಕುಡಿಯುತ್ತಿದ್ದಾರೆ. ಮಾತ್ರವಲ್ಲದೆ, ಗಂಗೆ, ತುಂಗೆ, ಯಮುನೆ, ಕಾವೇರಿ, ಗೋಧಾವರಿ ಆರ್ಒ ನೀರು ಕೂಡ ಕೋಟೆ ಜಿಲ್ಲೆಗೆ ಹರಿದು ಬರುತ್ತಿದೆ..!

ಹೌದು, ಬೇಸಿಗೆಯ ತೀವ್ರತೆ ಹೆಚ್ಚುತ್ತಿದ್ದಂತೆಯೇ ಜಿಲ್ಲೆಯ ವಿವಿಧೆಡೆ ಖಾಸಗಿ ಆರ್ಒ ನೀರಿನ ಟ್ಯಾಂಕರ್ಗಳು ನಗರದಲ್ಲಿ ದರ್ಬಾರ್ ನಡೆಸುತ್ತಿವೆ. ಈ ಎಲ್ಲ ಟ್ಯಾಂಕರ್ಗಳಿಗೂ ನದಿಗಳ ಹೆಸರನ್ನೇ ಇಡಲಾಗಿದೆ. ಜೊತೆಗೆ ಶ್ರೀರಂಗ, ಸಿದ್ಧಗಂಗಾ, ಸಿದ್ದೇಶ್ವರ ಮುಂತಾದ ದೇವರುಗಳ ಹೆಸರನ್ನಿಟ್ಟುಕೊಂಡು ನೀರು ಮಾರಾಟ ಮಾಡಲಾಗುತ್ತಿದೆ. ನಗರಸಭೆ ಸೇರಿದಂತೆ ಸಂಬಂಧಿಸಿದ ಇಲಾಖೆಗಳಿಂದ ಅನುಮತಿ ಪಡೆಯದೇ ನೀರು ಮಾರಾಟ ಮಾಡುತ್ತಿರುವುದು ಸಾರ್ವಜನಿಕರಲ್ಲಿ ಅನುಮಾನ ಸೃಷ್ಟಿಸಿದೆ.

ಕಳೆದ ಮುಂಗಾರು ಹಂಗಾಮಿನಲ್ಲಿ ಮಳೆ ಕೊರತೆಯಾದ ಕಾರಣ ಜಿಲ್ಲೆಯಾದ್ಯಂತ ಈ ಬಾರಿ ಅಂತರ್ಜಲ ಕುಸಿತಗೊಂಡಿದೆ. ಕೊಳವೆಬಾವಿಗಳು ಬರಡಾಗಿದ್ದು, ಸಾವಿರ ಅಡಿ ಕೊರೆಸಿದರೂ ನೀರು ಸಿಗುತ್ತಿಲ್ಲ. ಜೊತೆಗೆ ಇರುವ ಕೊಳವೆ ಬಾವಿಯಲ್ಲೂ ಶುದ್ಧ ನೀರು ಬರುತ್ತಿಲ್ಲ. ಹೀಗಾಗಿ ಸಾರ್ವಜನಿಕರು ಟ್ಯಾಂಕರ್ ನೀರಿನ ಮೊರೆ ಹೋಗಿದ್ದಾರೆ.

ಜೊತೆಗೆ ನಗರಸಭೆಯಿಂದ ಸಮರ್ಪಕವಾಗಿ ನೀರು ಪೂರೈಸುತ್ತಿಲ್ಲ. ಕೆಲವು ಬಡಾವಣೆಗಳಲ್ಲಿ 15 ದಿನವಾದರೂ ನೀರು ಸರಬರಾಜು ಆಗುತ್ತಿಲ್ಲ. ನಗರದ ಭಾಗವಾಗಿದ್ದರೂ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಕಾರಣ ಹೊರವಲಯದ ಕೆಲವು ಬಡಾವಣೆಗಳಿಗೆ ನಗರಸಭೆ ಕುಡಿಯುವ ನೀರು ಪೂರೈಕೆಯನ್ನು ನಿಲ್ಲಿಸಿದೆ. ಮೆದೇಹಳ್ಳಿ ಸೇರಿದಂತೆ ಹಲವು ಬಡಾವಣೆಗಳ ಜನರು ಖಾಸರಿ ಆರ್ಒ ನೀರಿನ ಮೊರೆ ಹೋಗಿದ್ದಾರೆ.

ನೀರಿನ ಕೊರತೆಯನ್ನೇ ಬಂಡವಾಳ ಮಾಡಿಕೊಂಡ ಕೆಲ ಖಾಸಗಿ ಆರ್ಒ ಮಾಲೀಕರು ನಗರ, ಜಿಲ್ಲೆಯಾದ್ಯಂತ ಟ್ಯಾಂಕರ್ ಮೂಲಕ ನೀರು ಮಾರಾಟ ಮಾಡುತ್ತಿದ್ದಾರೆ. ಮನೆಮನೆ ಬಾಗಿಲಿಗೆ ನೀರು ಪೂರೈಸುತ್ತಿರುವ ಇವರು ನಿಗದಿತ ದರ ವಸೂಲಿ ಮಾಡುತ್ತಿದ್ದಾರೆ. ನಗರದಲ್ಲಿ ಬಹುತೇಕ ಹೋಟೆಲ್, ಕ್ಯಾಂಟೀನ್, ಆಸ್ಪತ್ರೆಗಳು ಖಾಸಗಿ ಆರ್ಒ ನೀರನ್ನೇ ಅವಲಂಬಿಸಿವೆ.

ಖಾಸಗಿ ಆರ್ಒ ಮಾಲೀಕರು ಸ್ಥಳೀಯವಾಗಿ ನಗರಸಭೆಯಿಂದಾಗಲೀ, ಮಾಲಿನ್ಯ ನಿಯಂತ್ರಣ ಮಂಡಳಿಯಿಂದಾಗಲೀ ಅನುಮತಿ ಪಡೆದಿಲ್ಲ. ಅಧಿಕಾರಿಗಳು ಕೂಡ ಈ ಆರ್ಒ ಘಟಕಗಳ ನೀರಿನ ಗುಣಮಟ್ಟವನ್ನು ಪರಿಶೀಲಿಸುವ ಕೆಲಸ ಮಾಡಿಲ್ಲ. ಮನೆಯಲ್ಲಿ ಅಳವಡಿಸುವ ಸಣ್ಣ ಆರ್ಒಗೂ ನೀರಿನ ಪಿಎಚ್ (ಜಲಜನಕ ಶಕ್ತಿ) ಮಟ್ಟ ನಿಗದಿ ಮಾಡಲಾಗುತ್ತದೆ. ಆದರೆ, ಖಾಸಗಿ ಮಾಲೀಕರ ಆರ್ಒ ಘಟಕದಲ್ಲಿ ಪಿಎಚ್ ಮಟ್ಟ ಸೇರಿದಂತೆ ಗುಣಮಟ್ಟದ ಪರೀಕ್ಷೆ ನಡೆಯುತ್ತಿದೆಯೇ? ಎಂಬ ಬಗ್ಗೆ ಯಾವ ಮಾಹಿತಿಯೂ ಇಲ್ಲದೆ ಕಾರಣ ಗೊಂದಲ ಸೃಷ್ಟಿಯಾಗಿದೆ.

‘ಅನಿವಾರ್ಯತೆಗೆ ಒಳಗಾಗಿ ನಾವು ಸಾರ್ವಜನಿಕವಾಗಿ ಸಿಗುವ ಆರ್ಒ ನೀರು ಖರೀದಿ ಮಾಡುತ್ತೇವೆ. ಖಾಸಗಿ ಆರ್ಒ ಮಾಲೀಕರು ಸ್ಪರ್ಧೆಗೆ ಬಿದ್ದವರಂತೆ ಬಾಗಿಲಿಗೆ ಬಂದು ಮಾರಾಟ ಮಾಡುತ್ತಿದ್ದಾರೆ. ಗುಣಮಟ್ಟದ ಬಗ್ಗೆ ನಮಗೆ ಏನೂ ಗೊತ್ತಿಲ್ಲ. ನೀರು ರುಚಿ ಇರುವ ಕಾರಣ ಆರ್ಒ ನೀರನ್ನೇ ಖರೀದಿ ಮಾಡುತ್ತೇವೆ’ ಎಂದು ನಗರದ ಸ್ಟೇಡಿಯಂ ರಸ್ತೆಯಲ್ಲಿರುವ ಕ್ಯಾಂಟೀನ್ ಮಾಲೀಕರೊಬ್ಬರು ತಿಳಿಸಿದರು.

‘ಆರ್ಒ ಘಟಕಗಳಲ್ಲಿ ರುಚಿ ನೀಡಲು ರಾಸಾಯನಿಕಗಳನ್ನು ಬಳಸುತ್ತಾರೆ. ಈಗ ನೀರಿಗಾಗಿ ಬಳಸುವ ಹಲವು ರಾಸಾಯನಿಕಗಳು ಮಾರುಕಟ್ಟೆಯಲ್ಲಿವೆ. ಪಿಎಚ್ ಮಟ್ಟದಲ್ಲಿ ವ್ಯತ್ಯಾಸ ಉಂಟಾದರೆ ಆರೋಗ್ಯದ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ’ ಎಂದು ವೈದ್ಯ ಡಾ.ಎಸ್.ಸತೀಶ್ ತಿಳಿಸಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260423-44-868720531

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.