ಚಿತ್ರದುರ್ಗ: ನಗರದ ಹೊರವಲಯದಲ್ಲಿರುವ ಆಡುಮಲ್ಲೇಶ್ವರ ಕಿರು ಮೃಗಾಲಯದಲ್ಲಿ ನರಿಗಳ ಚಿನ್ನಾಟ ಪ್ರವಾಸಿಗರ ಗಮನ ಸೆಳೆಯುತ್ತಿದೆ. ಫೆಬ್ರುವರಿ ತಿಂಗಳಲ್ಲಿ ಹುಟ್ಟಿರುವ ನರಿ ಮರಿಗಳನ್ನು ಇತ್ತೀಚೆಗಷ್ಟೇ ವೀಕ್ಷಣೆಗೆ ಬಿಡಲಾಗಿದ್ದು ಅವುಗಳ ಆಟ ನೋಡುಗರ ಮನಸೂರೆಗೊಳ್ಳುತ್ತಿದೆ.

ಮೃಗಾಲಯದಲ್ಲಿ 5 ನರಿಗಳಿದ್ದವು. ಅವುಗಳಲ್ಲಿ 2 ನರಿಗಳು ಮರಿ ಹಾಕಿದ್ದು, ಅವುಗಳ ಸಂಖ್ಯೆ 18ಕ್ಕೆ ಏರಿಕೆಯಾಗಿದೆ. 1 ನರಿ 9 ಮರಿ, ಇನ್ನೊಂದು ನರಿ 3 ಮರಿಗಳನ್ನು ಹಾಕಿದೆ. ಪುಟಾಣಿ ಮರಿಗಳ ಪೋಷಣೆಯ ನಂತರ ಅವುಗಳನ್ನು ಪ್ರವಾಸಿಗರ ವೀಕ್ಷಣೆಗೆ ಬಿಡಲಾಗಿದೆ. ಬೇಸಿಗೆ ರಜೆಯ ಅವಧಿಯಲ್ಲಿ ಮಕ್ಕಳು ಅವುಗಳನ್ನು ವೀಕ್ಷಿಸುತ್ತಿದ್ದಾರೆ. ಎಮು ಹಕ್ಕಿಯ ಮನೆಯ ಪಕ್ಕದಲ್ಲೇ ಇರುವ ಪ್ರಾಂಗಣದಲ್ಲಿ ಅವುಗಳನ್ನು ಬಿಡಲಾಗಿದ್ದು, ಸ್ವಚ್ಛಂದವಾಗಿ ಆಟವಾಡಿಕೊಂಡಿವೆ. ಬೇಲಿಯ ಪಕ್ಕದಲ್ಲೇ ಓಡಾಡಿಕೊಂಡಿರುವ ಕಾರಣ ಶಾಲಾ ವಿದ್ಯಾರ್ಥಿಗಳ ಗಮನ ಸೆಳೆಯುತ್ತಿವೆ.

‘ಬಯಲುಸೀಮೆ ಭಾಗದಲ್ಲಿ ಕರಡಿ ಮತ್ತು ನರಿಗಳ ವಾಸಕ್ಕೆ ವಾತಾವರಣ ಬಹಳ ಚೆನ್ನಾಗಿದೆ. ನರಿಗಳು ಗರಿಷ್ಠ 8 ಮರಿ ಹಾಕುತ್ತವೆ. ಆದರೆ ನಮ್ಮ ಮೃಗಾಲಯದ ಒಂದು ನರಿ 9 ಮರಿ ಹಾಕಿರುವುದು ವಿಶೇಷ. ಬಹಳ ಪ್ರೀತಿಯಿಂದ ಅವುಗಳನ್ನು ಪೋಷಣೆ ಮಾಡಿ ವೀಕ್ಷಣೆಗೆ ಬಿಟ್ಟಿದ್ದೇವೆ. ಪ್ರವಾಸಿಗರು ಅವುಗಳನ್ನು ನೋಡಿ ಖುಷಿ ಪಡುತ್ತಿದ್ದಾರೆ’ ಎಂದು ಮೃಗಾಲಯದ ಸಿಬ್ಬಂದಿ ಹೇಳಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260527-44-2077835176

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.