ಗುರುವಾರ, 28 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಹಿಂದುಳಿದವರ ಒಗ್ಗೂಡಿಕೆ ಅನಿವಾರ್ಯ- ಪ್ರವರ್ಗ-1ರ ಜಾತಿಗಳ ಒಕ್ಕೂಟದ ಅಧ್ಯಕ್ಷ

Last Updated 28 ನವೆಂಬರ್ 2021, 8:49 IST
ಅಕ್ಷರ ಗಾತ್ರ

ಹಿರಿಯೂರು:‘ರಾಜಕೀಯ ಅಧಿಕಾರ ಪಡೆಯಲು, ಸಾಮಾಜಿಕ, ಆರ್ಥಿಕ ಅಸಮಾನತೆ ನೀಗಿಸಲು ಹಿಂದುಳಿದವರ ಒಗ್ಗೂಡಿಕೆ ಅನಿವಾರ್ಯ’ ಎಂದು ರಾಜ್ಯ ಪ್ರವರ್ಗ-1ರ ಜಾತಿಗಳ ಒಕ್ಕೂಟದ ಅಧ್ಯಕ್ಷ ಡಿ.ಟಿ. ಶ್ರೀನಿವಾಸ್ ಹೇಳಿದರು.

ನಗರದಲ್ಲಿ ಶನಿವಾರ ಪ್ರವರ್ಗ-1 ರಜಾತಿಗಳ ಒಕ್ಕೂಟದ ಸದಸ್ಯತ್ವ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

‘ಹಿಂದುಳಿದ ಸಮುದಾಯದವರನ್ನು ಒಂದೇ ವೇದಿಕೆಗೆ ತರಲು ರಾಜ್ಯ ಪ್ರವಾಸ ಆರಂಭಿಸಿದ್ದು, ಚಿತ್ರದುರ್ಗ ಜಿಲ್ಲೆಯಲ್ಲಿ ಇಂದಿನಿಂದ ಸದಸ್ಯತ್ವ ನೋಂದಣಿ ಆರಂಭಿಸಲಾಗಿದೆ. ಸಂಘಟನೆಯ ಸಮಯದಲ್ಲಿ ಹಲವರು ಅಪಪ್ರಚಾರ ಮಾಡುವುದುಂಟು. ಹಿಂದುಳಿದ ಸಮುದಾಯಗಳ ಸಮಗ್ರ ಏಳಿಗೆ ಆಗಬೇಕೆನ್ನುವುದು ನಮ್ಮ ಧ್ಯೇಯ. ಸಂಘಟನೆ ಬಲಗೊಂಡಷ್ಟೂ ಆಳುವವರ ಮೇಲೆ ಒತ್ತಡ ತಂದು ಬೇಡಿಕೆ ಈಡೇರಿಸಿಕೊಳ್ಳುವುದು ಸುಲಭವಾಗುತ್ತದೆ. ಜಿಲ್ಲೆಯಲ್ಲಿ ಎರಡು ಲಕ್ಷ ಸದಸ್ಯತ್ವ ನೋಂದಣಿ ಗುರಿ ಹೊಂದಲಾಗಿದೆ’ ಎಂದು ವಿವರಿಸಿದರು.

ಸದಸ್ಯತ್ವ ಅಭಿಯಾನದಲ್ಲಿ ಉಪ್ಪಾರ, ದಾಸರು, ಅಲೆಮಾರಿ, ಶಿಳ್ಳೆಕ್ಯಾತ, ಸುಡುಗಾಡು ಸಿದ್ಧರು, ಗೊಲ್ಲ, ತೇವರ್ ಸಮುದಾಯದ ಪ್ರಮುಖರು ಭಾಗವಹಿಸಿದ್ದರು.

ಒಕ್ಕೂಟದ ಪದಾಧಿಕಾರಿಗಳಾದ ಲೋಕೇಶಪ್ಪ, ಉಮಾಶಂಕರ್, ನರಸಿಂಹಮೂರ್ತಿ, ಧನಂಜಯ್, ಜೋಗ್ ಮಲ್, ಸತೀಶ್, ಗಿರೀಶ್, ಇಂದ್ರನಾಥ್, ಕೃಷ್ಣಪ್ಪ, ರಮೇಶ್, ಸ್ಥಳೀಯ ಮುಖಂಡರಾದ ಆಲೂರು ರಾಮಣ್ಣ, ನಿಂಗರಾಜು, ಗೋವಿಂದಪ್ಪ, ಕೃಷ್ಣಮೂರ್ತಿ, ಕೃಷ್ಣಪ್ಪ, ಗುರುಮೂರ್ತಿ, ಮಂಜು, ಈರಣ್ಣ, ಶ್ರೀನಿವಾಸ, ಹರೀಶ್, ದಾಸಪ್ಪ, ಅಭಿ, ಓಂಕಾರಪ್ಪ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT