ಶನಿವಾರ, ಸೆಪ್ಟೆಂಬರ್ 25, 2021
24 °C

ಬ್ಯಾನರ್, ಕುರ್ಚಿ ಮನೆಗೆ ಒಯ್ದ ಕಾಂಗ್ರೆಸ್ ಮುಖಂಡ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೊಳಕಾಲ್ಮುರು: ಪಟ್ಟಣದ ಬ್ಲಾಕ್ ಕಾಂಗ್ರೆಸ್ ಕಚೇರಿಯಲ್ಲಿ ಹಾಕಿದ್ದ ಬ್ಯಾನರ್‌ಗಳು ಮತ್ತು ಕುರ್ಚಿಗಳನ್ನು ಪಕ್ಷದ ಮುಖಂಡರೊಬ್ಬರು ಭಾನುವಾರ ಮನೆಗೆ ತೆಗೆದುಕೊಂಡು ಹೋಗಿದ್ದಾರೆ.

ಯುವ ಕಾಂಗ್ರೆಸ್ ಮತ್ತು ಜಿಲ್ಲಾ ಎಐಟಿಯುಸಿ ಕಾಂಗ್ರೆಸ್ ಜಂಟಿ ಕಾರ್ಯದರ್ಶಿಯಾಗಿ 6 ವರ್ಷ ಕೆಲಸ ಮಾಡಿರುವ ಮಹಮದ್ ಗೌಸ್ ಹೀಗೆ ಮಾಡಿರುವವರು.

‘ಬ್ಲಾಕ್ ಕಾಂಗ್ರೆಸ್‌ನಲ್ಲಿ ಹುದ್ದೆಗಳನ್ನು ನೀಡುವಾಗ ಕಾರ್ಯಕರ್ತರು, ಮುಖಂಡರ ಅಭಿಪ್ರಾಯ ಪಡೆದುಕೊಂಡು ನೀಡಬೇಕು. ಎಲ್ಲೋ ಕುಳಿತು ನಮ್ಮ ಗಮನಕ್ಕೆ ಬಾರದೇ ನೀಡಲಾಗುತ್ತಿದೆ. ಇದರಿಂದ ಪಕ್ಷದ ಬೆಳವಣಿಗೆಗೆ ಹಾನಿಯಾಗುತ್ತದೆ. ಇದರಿಂದ ಬೇಸತ್ತು ಈ ಕೆಲಸ ಮಾಡುತ್ತಿದ್ದೇನೆ’ ಎಂದು ಹೇಳುತ್ತ ಅವರು ಕಚೇರಿಯಲ್ಲಿ ಬ್ಯಾನರ್, ಕುರ್ಚಿ ತೆರವು ಮಾಡುತ್ತಿರುವ ವಿಡಿಯೊಗಳು ಸಾಮಾಜಿಕ ಜಾಲತಾಣ ಹಂಚಿಕೊಂಡಿದ್ದಾರೆ. ಇವು ಬಿಜೆಪಿ ಮುಖಂಡರ ಮೊಬೈಲ್‌ಗಳಲ್ಲಿ ಹರಿದಾಡುತ್ತಿವೆ.

ಈ ಬಗ್ಗೆ ‘ಪ್ರಜಾವಾಣಿ’ ಸಂಪರ್ಕಿಸಿದಾಗ, ‘ಕಚೇರಿಗೆ ನಾನು ಕೊಟ್ಟಿದ್ದ ಬ್ಯಾನರ್‌ಗಳು ಮತ್ತು ಕುರ್ಚಿಗಳನ್ನು ಮಾತ್ರ ತಂದಿದ್ದೇನೆ. ಕಚೇರಿಯಲ್ಲಿ ಕಸ ಗುಡಿಸಿ ಕೆಲಸ ಮಾಡಿದ್ದೇನೆ. ಕೆಲ ವರಿಷ್ಠರ ನಿರ್ಧಾರಕ್ಕೆ ಬೇಸರವಾಗಿದೆ’ ಎಂದು ಹೇಳಿದರು. ಮುಖಂಡ ಡಾ. ಬಿ. ಯೋಗೇಶ್ ಬಾಬು ಮಾತನಾಡಿ, ‘ಬ್ಲಾಕ್ ಕಾಂಗ್ರೆಸ್‌ನ ಹುದ್ದೆಯೊಂದರ ಆಯ್ಕೆಗೆ ಸಂಬಂಧಿಸಿ ಈ ರೀತಿ ನಡೆದುಕೊಂಡಿದ್ದಾರೆ. ಅವರ ಜತೆ ಮಾತನಾಡಿ ತಿಳಿಗೊಳಿಸಲಾಗುವುದು’ ಎಂದು ಹೇಳಿದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು