ಅ.6 ಕ್ಕೆ ಸಂವಿಧಾನ ಹೋರಾಟ ಸಮಿತಿಯ ಬಹಿರಂಗ ಸಭೆ

7
ಪತ್ರಿಕಾಗೋಷ್ಠಿಯಲ್ಲಿ ಹೋರಾಟ ಸಮಿತಿ ಸಂಘಟಕ ಸಿ.ಕೆ. ಮಹೇಶ್ವರಪ್ಪ

ಅ.6 ಕ್ಕೆ ಸಂವಿಧಾನ ಹೋರಾಟ ಸಮಿತಿಯ ಬಹಿರಂಗ ಸಭೆ

Published:
Updated:

ಚಿತ್ರದುರ್ಗ: ಇಲ್ಲಿನ ಜಿಲ್ಲಾಧಿಕಾರಿ ವೃತ್ತದಲ್ಲಿ ಅ.6 ರಂದು ಬೆಳಿಗ್ಗೆ 11ಕ್ಕೆ ಸಂವಿಧಾನ ಉಳಿಸಿ ಹೋರಾಟ ಸಮಿತಿಯಿಂದ ಸಂವಿಧಾನ ಬದಲಾಯಿಸಲು ಹೊರಟಿರುವ ದೇಶದ್ರೋಹಿಗಳನ್ನು ಕಾನೂನಿನಡಿ ಬಂಧಿಸುವಂತೆ ಒತ್ತಾಯಿಸಿ ಬಹಿರಂಗ ಸಭೆ ಹಮ್ಮಿಕೊಳ್ಳಲಾಗಿದೆ ಎಂದು ಸಮಿತಿ ಸಂಘಟಕ ಸಿ.ಕೆ. ಮಹೇಶ್ವರಪ್ಪ ಹೇಳಿದರು.

‘ಅಂಬೇಡ್ಕರ್ ಅವರ ಸಮಾನತೆಯ ಸಂವಿಧಾನವನ್ನೇ ಸಾತ್ವಿಕವಾಗಿ ಸುಟ್ಟರೆ ದೇಶವನ್ನೇ ಸುಟ್ಟಂತೆ. ಆದ್ದರಿಂದ ಸಂವಿಧಾನ ವಿರೋಧಿ ಕೆಲಸ ಮಾಡುವವರನ್ನು ಕೂಡಲೇ ಬಂಧಿಸಿ ಕಾನೂನು ರೀತಿ ಶಿಕ್ಷಿಸಬೇಕೆಂದು ಒತ್ತಾಯಿಸಿ ಈ ಸಭೆ ಆಯೋಜಿಸಿದ್ದೇವೆ’ ಎಂದು ಇಲ್ಲಿ ಬುಧವಾರ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಸಂವಿಧಾನದ ಅಡಿಯಲ್ಲಿ ನಿಂತಿದೆ. ಅಂತಹ ಶ್ರೇಷ್ಠವಾದ ಸಂವಿಧಾನವನ್ನೇ ಬದಲಾಯಿಸಲು ಹೊರಟಿರುವ ಉಗ್ರಗಾಮಿಗಳು, ಭಯೋತ್ಪಾದಕರಿಗಿಂತ ಅಪಾಯಕಾರಿಯಾದವರು. ಅವರ ವಿರುದ್ಧ ಕ್ರಮ ಕೈಗೊಳ್ಳದಿದ್ದರೆ ಹೋರಾಟದ ರೂಪುರೇಷೆ ಸಿದ್ದಪಡಿಸಲಾಗುವುದು’ ಎಂದು ಎಚ್ಚರಿಸಿದರು.

‘ಪೇಜಾವರ ಶ್ರೀಗಳು ಸಂವಿಧಾನದ ವಿರುದ್ಧ ಮಾತನಾಡಿದ್ದಾರೆ. ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಸಂವಿಧಾನ ಬದಲಾವಣೆ ಮಾಡುವುದಕ್ಕಾಗಿಯೇ ಕೇಂದ್ರದಲ್ಲಿ ಬಿಜೆಪಿ ಅಧಿಕಾರಕ್ಕೆ ಬಂದಿರುವುದು ಎಂಬ ಹೇಳಿಕೆ ನೀಡಿದ್ದರೂ ಈವರೆಗೂ ಅವರ ಮೇಲೆ ಯಾವ ಕ್ರಮ ಕೈಗೊಂಡಿಲ್ಲ. ಇದನ್ನು ಗಮನಿಸಿದರೆ, ಆಳುವ ಸರ್ಕಾರಗಳು ಸಂವಿಧಾನ ವಿರೋಧಿಗಳಿಗೆ ಕುಮ್ಮಕ್ಕು ನೀಡುತ್ತಿದೆ ಎನ್ನುವುದರಲ್ಲಿ ಯಾವುದೇ ಅನುಮಾನವಿಲ್ಲ. ಅದಕ್ಕಾಗಿ ಜಿಲ್ಲಾಡಳಿತದ ಮೂಲಕ ರಾಷ್ಟ್ರಪತಿ ಅವರಿಗೆ ಮನವಿ ಸಲ್ಲಿಸಲು ತೀರ್ಮಾನಿಸಿದ್ದೇವೆ’ ಎಂದು ತಿಳಿಸಿದರು.

ಅಹಿಂದ ಮುಖಂಡ ಮುರುಘರಾಜೇಂದ್ರ ಒಡೆಯರ್ ಮಾತನಾಡಿ, ‘ವರ್ಗಬೇಧ, ವರ್ಣಬೇಧ, ಬಡವ-ಶ್ರೀಮಂತ, ಮೇಲು-ಕೀಳು ಎಂಬ ಅಸಮಾನತೆಯನ್ನು ದೇಶದಲ್ಲಿ ಬಿತ್ತುತ್ತಿರುವ ಕೆಲ ಸಂಘಟನೆಗಳು ಸಂವಿಧಾನ ಬದಲಾವಣೆಗೂ ಕೈಹಾಕಿದೆ. ಕೂಡಲೇ ಅಂಥವರನ್ನು ಬಂಧಿಸಿ ಕಾನೂನು ರೀತಿಯಲ್ಲಿ ಶಿಕ್ಷಿಸುವ ಮೂಲಕ ಸಂವಿಧಾನದ ಗೌರವವನ್ನು ಕೇಂದ್ರ ಸರ್ಕಾರ ಎತ್ತಿ ಹಿಡಿಯಬೇಕು’ ಎಂದು ಒತ್ತಾಯಿಸಿದರು.

ಮಹಮದ್ ಜೈಲುದ್ದೀನ್, ನಸ್ರುಲ್ಲಾ, ಕೆ.ಕುಮಾರ್, ನರಸಿಂಹಮೂರ್ತಿ, ಸತೀಶ್, ಅರವಿಂದ್, ರಮೇಶ್, ಮೆಹಬೂಬ್‌ ಖಾತೂನ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !