ಸೋಮವಾರ, ಜೂಲೈ 6, 2020
22 °C

ಚಿತ್ರದುರ್ಗ: ಮತ್ತೆ 6 ಕಾರ್ಮಿಕರಿಗೆ ಕೋವಿಡ್-19

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ರದುರ್ಗ: ಚಳ್ಳಕೆರೆ ತಾಲ್ಲೂಕಿನ ಬಿಸಿಎಂ ಹಾಸ್ಟೆಲ್ ನಲ್ಲಿ ಕ್ವಾರಂಟೈನ್ ನಲ್ಲಿ ಇದ್ದ ವಲಸೆ ಕಾರ್ಮಿಕರ ಪೈಕಿ ಮತ್ತೆ ಆರು ಜನರಿಗೆ ಕೋವಿಡ್-19 ಇರುವುದು ಗುರುವಾರ ದೃಢಪಟ್ಟಿದೆ. 59 ವಲಸೆ ಕಾರ್ಮಿಕರಲ್ಲಿ 27 ಜನರಿಗೆ ಸೋಂಕು ತಗುಲಿದೆ.

ತಮಿಳುನಾಡಿನ ಚೆನ್ನೈನಿಂದ ಉತ್ತರಪ್ರದೇಶಕ್ಕೆ ಕಂಟೇನರ್ ನಲ್ಲಿ ಹೊರಟಿದ್ದ ಕಾರ್ಮಿಕರನ್ನು ಪೊಲೀಸರು ತಡೆದು ಚಳ್ಳಕೆರೆಯಲ್ಲಿ ಕ್ವಾರಂಟೈನ್ ಮಾಡಿದ್ದರು. ಉತ್ತರಪ್ರದೇಶಕ್ಕೆ ಕಳುಹಿಸುವ ಸಿದ್ಧತೆಯಲ್ಲಿ ಇದ್ದಾಗ ಕಂಟೇನರ್ ಚಾಲಕನಿಗೆ ಸೋಂಕಿನ ಲಕ್ಷಣಗಳು ಕಾಣಿಸಿಕೊಂಡಿದ್ದವು. ಎಲ್ಲರನ್ನೂ ಪರೀಕ್ಷೆಗೆ ಒಳಪಡಿಸಿದಾಗ ಹಲವರಿಗೆ ಸೋಂಕು ತಗುಲಿದ್ದು ಗೊತ್ತಾಗಿದೆ.

15 ವರ್ಷದ ಪಿ-2452, 36 ವರ್ಷದ ಪಿ-2453, 19 ವರ್ಷದ ಪಿ-2454, 21 ವರ್ಷದ ಪಿ-2455, 24 ವರ್ಷದ ಪಿ-2456, 25 ವರ್ಷದ ಪಿ-2457 ಸೋಂಕಿತರು. ಸೋಂಕಿತ ಎಲ್ಲರೂ ಪುರುಷರು.

ಚಿತ್ರದುರ್ಗ ಜಿಲ್ಲೆಯ ಸೋಂಕಿತರ ಸಂಖ್ಯೆ 37ಕ್ಕೆ ಏರಿದೆ. 5 ರೋಗಿಗಳು ಗುಣಮುಖರಾಗಿದ್ದು, ಆಸ್ಪತ್ರೆಯಿಂದ ಬಿಡುಗಡೆ ಆಗಿದ್ದಾರೆ.

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನು ಲೈಕ್ ಮಾಡಿ, ಪ್ರಮುಖ ಸುದ್ದಿಗಳ ಅಪ್‌ಡೇಟ್ಸ್ ಪಡೆಯಿರಿ.

ಪ್ರಜಾವಾಣಿಯನ್ನು ಟ್ವಿಟರ್‌ನಲ್ಲಿ ಇಲ್ಲಿ ಫಾಲೋ ಮಾಡಿ.

ಟೆಲಿಗ್ರಾಂ ಮೂಲಕ ನಮ್ಮ ಸುದ್ದಿಗಳ ಅಪ್‌ಡೇಟ್ಸ್ ಪಡೆಯಲು ಇಲ್ಲಿ ಕ್ಲಿಕ್ ಮಾಡಿ.