ಭಾನುವಾರ, 1 ಅಕ್ಟೋಬರ್ 2023
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಕುರಿಗಳನ್ನು ಕದ್ಯೊಯ್ದ ಕಳ್ಳರು

Published 19 ಜುಲೈ 2023, 16:20 IST
Last Updated 19 ಜುಲೈ 2023, 16:20 IST
ಅಕ್ಷರ ಗಾತ್ರ

ಶ್ರೀರಾಂಪುರ: ಹೋಬಳಿಯ ಎಸ್. ನೇರಲಕೆರೆ ಗ್ರಾಮದ ಬಳಿಯ ಜಮೀನೊಂದರಲ್ಲಿ ಕುರಿಗಳನ್ನು ಮೇಯಿಸುತ್ತಿರುವಾಗ 4 ಕುರಿಗಳನ್ನು ಕಳ್ಳರು ಕದ್ದೊಯ್ದಿರುವ ಘಟನೆ ಮಂಗಳವಾರ ಸಂಜೆ ನಡೆದಿದೆ.

ಹಿರಿಯೂರು ತಾಲ್ಲೂಕಿನ ಸೀಗೆಹಟ್ಟಿ ಗ್ರಾಮದ ಬಾಲರಾಜ ಹಾಗೂ ಸಂಬಂಧಿ ಮಂಜುಳಾ ತಮ್ಮ ಜೀವನೋಪಾಯಕ್ಕೆ 250 ಕುರಿಗಳನ್ನು ಸಾಕಿಕೊಂಡಿದ್ದು, ಹತ್ತು ದಿನಗಳಿಂದ ಹೋಬಳಿಯ ಎಸ್. ನೇರಲಕೆರೆ ಗ್ರಾಮದ ಗೋವಿಂದಪ್ಪ ಅವರ ಜಮೀನಿನಲ್ಲಿ ರೊಪ್ಪ ಹಾಕಿಕೊಂಡಿದ್ದರು.

ಮಂಗಳವಾರ ಸಂಜೆ ರೊಪ್ಪದ ಬಳಿ ಇರುವ ಬೈಲು ಈರಣ್ಣ ದೇವಸ್ಥಾನದ ಬಳಿಯ ಬೀಳು ಜಮೀನಿನಲ್ಲಿ ಕುರಿಗಳನ್ನು ಮೇಯಿಸುತ್ತಿರುವಾಗ 3– 4 ಜನರು ಏಕಾಏಕಿ ಬಂದು ನಾಲ್ಕು ಕುರಿಗಳನ್ನು ಟಾಟಾ ಏಸ್‍ ವಾಹನದಲ್ಲಿ ಕಳವು ಮಾಡಿಕೊಂಡು ಹೋಗಿದ್ದಾರೆ. ಈ ಬಗ್ಗೆ ಶ್ರೀರಾಂಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT