ಶುಕ್ರವಾರ, 29 ಮಾರ್ಚ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ನಿಧಿ ಆಸೆಗಾಗಿ ಈಶ್ವರಲಿಂಗ ಹಾಳುಗೆಡವಿದ ದುಷ್ಕರ್ಮಿಗಳು

Last Updated 18 ಡಿಸೆಂಬರ್ 2021, 4:35 IST
ಅಕ್ಷರ ಗಾತ್ರ

ಹೊಸದುರ್ಗ: ನಿಧಿ ಆಸೆಗಾಗಿ ದುಷ್ಕರ್ಮಿಗಳು ದೇವಾಲಯದಲ್ಲಿರುವ ಈಶ್ವರ ಲಿಂಗವನ್ನೇ ಅಗೆದಿರುವ ಘಟನೆ ತಾಲ್ಲೂಕಿನ ದೊಡ್ಡಘಟ್ಟ ಸಮೀಪದ ಗಿಣಿ ವಜ್ರದಲ್ಲಿ ಗುರುವಾರ ತಡರಾತ್ರಿ ನಡೆದಿದೆ.

ಪುರಾತನ ಇತಿಹಾಸ ಹೊಂದಿರುವ ಈ ದೇವಸ್ಥಾನದಲ್ಲಿ ಶಿವನ ವಿಗ್ರಹ ಮತ್ತು ನಂದಿ ವಿಗ್ರಹ ಇದೆ. ಆದರೆ, ಇಲ್ಲಿರುವ ವಿಗ್ರಹಗಳನ್ನು ದುಷ್ಕರ್ಮಿಗಳು ಸುಮಾರು 5 ಅಡಿ ಬಗೆದು ಕೆಡವಿ ಹಾಳುಗೆಡವಿದ್ದಾರೆ. ನಂತರ ಅಲ್ಲಿರುವ ಕಡಪ ಕಲ್ಲುಗಳನ್ನು ಸಹ ಒಡೆದು ಹಾಕಿದ್ದಾರೆ ಎನ್ನಲಾಗಿದೆ.

ಈ ಕುರಿತು ಅದೇ ಗ್ರಾಮದ ಯುವಕನೊಬ್ಬ ದೇವಸ್ಥಾನ ಮುಂಭಾಗ ನಿಂತು ವಿಡಿಯೊ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾನೆ.

ಹೊಸದುರ್ಗ ತಾಲ್ಲೂಕಿನ ಅನೇಕ ಗ್ರಾಮಗಳಲ್ಲಿ ಹುಂಡಿ ಕಳ್ಳತನ ಹಾಗೂ ನಿಧಿ ಆಸೆಗೆ ದೇವರ ವಿಗ್ರಹಗಳನ್ನು ನಾಶ ಮಾಡಿದ ಪ್ರಕರಣಗಳು ನೆಡೆಯುತ್ತಿವೆ. ಸಂಬಂಧಪಟ್ಟ ಇಲಾಖೆ ಮತ್ತು ಪೋಲಿಸ್ ಇಲಾಖೆ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ಶಿವನ ವಿಗ್ರಹ ಮತ್ತು ನಂದಿ ವಿಗ್ರಹಗಳನ್ನು ಹಾಳುಗೆಡವಿದ ದುಷ್ಕರ್ಮಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಮನವಿ ಮಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT