ಹಿರಿಯೂರು: ಯಾವುದೋ ಜನ್ಮದಲ್ಲಿ ಮಾಡಿದ ಪಾಪಕ್ಕೆ ಈ ಜನ್ಮದಲ್ಲಿ ಈ ಜಾತಿಯಲ್ಲಿ ಹುಟ್ಟಬೇಕಾಗಿ ಬಂದಿದೆ. ಪುಣ್ಯ ಮಾಡಿದ್ದರಿಂದ ಅವರು ಮೇಲ್ಜಾತಿಯಲ್ಲಿ ಹುಟ್ಟಿದ್ದಾರೆ ಎಂಬ ಆಲೋಚನೆಯೇ ತಪ್ಪು. ಪಾಪ– ಪುಣ್ಯಗಳ ಪರಿಕಲ್ಪನೆಯಿಂದ ದಲಿತರು ಹೊರಬರಬೇಕು ಎಂದು ಸಾಮಾಜಿಕ ಹೋರಾಟಗಾರ ಅಹಿಂಸಾ ಚೇತನ್ ಕರೆ ನೀಡಿದರು.

ತಾಲ್ಲೂಕಿನ ಮಾರಿಕಣಿವೆ ಪ್ರವಾಸಿ ಮಂದಿರದಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರ 69 ನೇ ಪರಿನಿಬ್ಬಾಣದ ಅಂಗವಾಗಿ ಸಂವಿಧಾನ ಸಂರಕ್ಷಣಾ ಸಮಿತಿ ನೇತೃತ್ವದಲ್ಲಿ ಹಮ್ಮಿಕೊಂಡಿರುವ ಎರಡು ದಿನದ ರಾಜ್ಯಮಟ್ಟದ ವಿಚಾರಗೋಷ್ಠಿಯ ಎರಡನೇ ದಿನವಾದ ಭಾನುವಾರ ತರಬೇತಿಯಲ್ಲಿ ಪಾಲ್ಗೊಂಡವರನ್ನು ಉದ್ದೇಶಿಸಿ ಅವರು ಮಾತನಾಡಿದರು.

ಹುಟ್ಟಿದ ಮೇಲೆ ವ್ಯವಸ್ಥೆಯಲ್ಲಿ ಅಸಮಾನತೆ ಇರುವುದು ಕಂಡು ಬಂದಿದೆ. ನಮ್ಮ ಶತ್ರು ಯಾವುದೇ ಧರ್ಮ, ಜಾತಿ, ಭಾಷೆಯಲ್ಲ. ಅಸಮಾನತೆಯೇ ನಮ್ಮ ಶತ್ರು. ವ್ಯವಸ್ಥೆಯಲ್ಲಿ ಶಿಕ್ಷಣ, ಆರೋಗ್ಯ, ಉದ್ಯೋಗ, ಆರ್ಥಿಕತೆ ಎಲ್ಲ ವಿಷಯಗಳಲ್ಲಿ ಬಲಿಪಶುಗಳಾಗಿರುವುದು ದಲಿತರು, ಆದಿವಾಸಿಗಳು, ಮಹಿಳೆಯರು ಮಾತ್ರ. ಈ ವ್ಯವಸ್ಥೆಯನ್ನು ಅಹಿಂಸಾವಾದದ ಮೂಲಕ ವಿರೋಧಿಸಬೇಕಿದೆ. ಸಮಸಮಾಜ ನಿರ್ಮಾಣಕ್ಕೆ ಪುರುಷ ಪ್ರಧಾನ ವ್ಯವಸ್ಥೆ, ಅಸಮಾನತೆ, ಮನುವಾದ, ಬಂಡವಾಳಶಾಹಿ ವ್ಯವಸ್ಥೆ, ಭಾಷೆಯ ತಾರತಮ್ಯದ ವಿರುದ್ಧ ಹೋರಾಟ ನಡೆಸಬೇಕಿದೆ. ಹೀಗಾಗಿ ತುಳಿತಕ್ಕೆ ಒಳಗಾಗಿರುವ ಪ್ರತಿಯೊಬ್ಬರೂ ಬಾಬಾಸಾಹೇಬ್ ಅಂಬೇಡ್ಕರ್ ಹಾಕಿಕೊಟ್ಟಿರುವ ಮಾರ್ಗದಲ್ಲಿ ಹಕ್ಕುಗಳನ್ನು ಪಡೆಯಬೇಕಿದೆ ಎಂದು ಅವರು ಪ್ರತಿಪಾದಿಸಿದರು.

ದಲಿತರಿಗೆ ಬಾಬಾಸಾಹೇಬರೇ ಪ್ರತ್ಯಕ್ಷ ದೈವ. ನಮಗೆ ಆಗಿರುವ ಅನ್ಯಾಯವನ್ನು ಸಂವಿಧಾನದ ಮೂಲಕ ಸರಿಪಡಿಸುವ ಕೆಲಸಕ್ಕೆ ಅವರು ಮುಂದಾಗದೇ ಹೋಗಿದ್ದರೆ ದಲಿತರು ಇಂದಿಗೂ ದನಿ ಇಲ್ಲದ ಬದುಕು ನಡೆಸಬೇಕಾಗಿತ್ತು. ಪ್ರಯುಕ್ತ ಅಂಬೇಡ್ಕರ್ ಭಾರತೀಯ ಸಮಾಜಕ್ಕೆ ಸಂವಿಧಾನದ ಮೂಲಕ ಕೊಟ್ಟಿರುವ ಕೊಡುಗೆಗಳ ಬಗ್ಗೆ ಯುವ ಸಮುದಾಯಕ್ಕೆ ಅರಿವು ಮೂಡಿಸಲು ಈ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಅಧ್ಯಕ್ಷತೆ ವಹಿಸಿದ್ದ ಸಂವಿಧಾನ ಸಂರಕ್ಷಣಾ ಸಮಿತಿ ಸಂಸ್ಥಾಪಕ ಅಧ್ಯಕ್ಷ ಕೆ.ರಾಮಚಂದ್ರ ಹೇಳಿದರು.

ರಾಜಕೀಯ, ಉದ್ಯೋಗ, ಶಿಕ್ಷಣ ಕ್ರೇತ್ರದಲ್ಲಿ ದಲಿತರಿಗೆ ಇಂದಿಗೂ ಉನ್ನತ ಸ್ಥಾನಗಳು ಸಿಗುವುದು ಕನಸಾಗಿದೆ. ರಾಜಕೀಯ ಕ್ಷೇತ್ರ ಬಂಡವಾಳಶಾಹಿಗಳ ಆಡುಂಬೊಲವಾಗಿದೆ. ಮೀಸಲು ಕ್ಷೇತ್ರಗಳಲ್ಲಿಯೂ ಕುರುಡು ಕಾಂಚಾಣ ಸದ್ದು ಮಾಡುತ್ತಿದೆ. ಮೀಸಲು ಕ್ಷೇತ್ರಗಳಿಂದ ದಲಿತರ ಪರವಾಗಿ ದನಿ ಎತ್ತುವವರನ್ನು ಚುನಾಯಿಸುವ ಕೆಲಸವನ್ನು ನಾವು ಮಾಡಬೇಕಿದೆ. ವಿಶೇಷವಾಗಿ ಶಿಕ್ಷಣಕ್ಕೆ ಒತ್ತು ನೀಡುವ ಮೂಲಕ ನಮ್ಮ ಹಕ್ಕುಗಳನ್ನು ಪಡೆಯೋಣ ಎಂದು ಅವರು ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ರಾಜ್ಯ ಪ್ರಧಾನ ಕಾರ್ಯದರ್ಶಿ ಆರ್. ರಾಘವೇಂದ್ರ, ರಾಜ್ಯ ಕಾರ್ಯದರ್ಶಿ ಎನ್. ಸಂಜೀವಪ್ಪ, ರಾಜ್ಯ ಸಲಹೆಗಾರ ಬಿ. ವಸಂತ್, ಪಿ.ದುರ್ಗೇಶ್, ನಿಟ್ಟೂರು ಶಿವಸೋಮಣ್ಣ, ಕೆ. ತಿಮ್ಮರಾಜು, ಕೆ.ಪಿ. ಶ್ರೀನಿವಾಸ್, ಘಾಟ್ ರವಿ, ಘಾಟ್ ಚಂದ್ರಪ್ಪ, ಮಾರುತಿ ಕೂನಿಕೆರೆ, ಎನ್. ಮಾರುತಿ, ಗೋಣೆಪ್ಪ ಸಂಗೊಳ್ಳಿ, ಆರ್. ಶಿವರಾಜ್ ಕುಮಾರ್, ಕೆ. ಓಂಕಾರಮೂರ್ತಿ, ಹೊನ್ನಪ್ಪ ಮಳಗಿ, ವಿಜಯನಗರದ ವಕೀಲ ಪ್ರಭು, ಮೈದೂರು ಪಕೀರಪ್ಪ, ಪೂಜಾರ್ ಗೋಣೆಪ್ಪ, ಪರಶುರಾಮ್ ಚಿಗಟೇರಿ, ಮಲ್ಲಿಕಾರ್ಜುನ್ ಹಾಗೂ ಸ್ಥಳೀಯ ಮುಖಂಡರು ತರಬೇತಿಯಲ್ಲಿ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.