ಸಂತೇಬೆನ್ನೂರು: ‘ಎಲ್ಲಿ ಎಷ್ಟೇ ಅಭೂತಪೂರ್ವ ಸನ್ಮಾನಗಳು ನಡೆದರೂ ಹುಟ್ಟಿದೂರಿನಲ್ಲಿ ಸನ್ಮಾನ ಸ್ವೀಕರಿಸುವುದು ಸ್ವರ್ಗಕ್ಕೆ ಸಮಾನ’ ಎಂದು ಪಾಂಡೋಮಟ್ಟಿ ವಿರಕ್ತಮಠದ ಗುರುಬಸವ ಸ್ವಾಮೀಜಿ ಹೇಳಿದರು.

ಸಮೀಪದ ತಣಿಗೆರೆ ಗ್ರಾಮದ ನೌಕರರು ಹಾಗೂ ಉದ್ದಿಮೆದಾರರ ಸ್ನೇಹ ಬಳಗದ ವತಿಯಿಂದ ಶುಕ್ರವಾರ ‘ಸಾಧಕರು ಮತ್ತು ನಿವೃತ್ತ ನೌಕರರಿಗೆ ಸನ್ಮಾನ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ವಿದ್ಯೆ, ಸಂಸ್ಕಾರ ಹಾಗೂ ಮೌಲ್ಯಗಳನ್ನು ವೃದ್ಧಿಸುವುದು ಹುಟ್ಟೂರು. ನೌಕರಿ, ಉದ್ದಿಮೆಗಳಿಂದ ಗಳಿಸಿದ ಸ್ವಲ್ಪಭಾಗವನ್ನು ಗ್ರಾಮದ ಅಭಿವೃದ್ಧಿಗಾಗಿ ನೀಡುತ್ತಿರುವುದು ಶ್ಲಾಘನೀಯ. ಹಣ ಸಂಗ್ರಹವೇ ಗುರಿ ಆಗಬಾರದು. ಪ್ರಾಮಾಣಿಕತೆಯಿಂದ ಗಳಿಸಿ, ಜೀವನದ ಭದ್ರತೆಗೆ ಉಳಿಸಿ. ಉಳಿದದ್ದನ್ನು ಬಡವರಿಗೆ, ಮಠಗಳಿಗೆ ದಾನವಾಗಿ ನೀಡಬೇಕು. ಯುವಕರ ಮಾತು, ವರ್ತನೆಗಳಲ್ಲಿ ಮೃದುತ್ವ ಮರೆಯಾಗುತ್ತಿದೆ. ಎಲ್ಲೆಡೆ ಅವ್ಯಕ್ತ ಭಯ ಆವರಿಸಿದೆ. ಸದ್ವರ್ತನೆ ರೂಢಿಸಿಕೊಳ್ಳುವ ದೃಢ ನಿರ್ಧಾರ ಎಲ್ಲರ ಜವಾಬ್ದಾರಿ’ ಎಂದರು.

ಗೌರವಾಧ್ಯಕ್ಷ ಎಂ.ಜಯಪ್ಪ, ನಿವೃತ್ತ ಪ್ರಾಂಶುಪಾಲ ಎಚ್.ಯಲ್ಲಪ್ಪ, ಡಿಎಫ್ಒ ಜಿ.ಆರ್.ಅಜ್ಜಯ್ಯ, ಹಾಸ್ಯ ಸಾಹಿತಿ ಜಗನ್ನಾಥ್, ಸಮಾಜ ಸೇವಕ ಸನ್ನಿ ಆರ್.ರಾಜಮನೆ ಮಾತನಾಡಿದರು.

ಸಿಪಿಐ ಟಿ.ಎನ್.ತಿಪ್ಪೇಸ್ವಾಮಿ, ಚಿಂತಕ ಎಂ.ಬಿ.ನಾಗರಾಜ್, ಬಿ. ಕುಬೇಂದ್ರಪ್ಪ, ಆರ್.ಆರ್.ಶಿವಕುಮಾರ್, ಎಸ್.ಮಲ್ಲೇಶಪ್ಪ, ಎಸ್.ಆರ್.ರಾಜಪ್ಪ, ಎಸ್.ಪೃಥ್ವಿ ಕುಮಾರ್, ಎ.ಪಿ.ಚೈತ್ರಾ, ಕೆ. ಹನುಮಂತಪ್ಪ, ಆರ್.ವೀರೇಶ್ ಇದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260329-43-688445491

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.