ಚಿಕ್ಕಜಾಜೂರು: ರಾತ್ರಿ ವೇಳೆ ನಿದ್ದೆಯಲ್ಲಿದ್ದ ಮಹಿಳೆಯರ ಕೊರಳಲ್ಲಿನ ಸರಗಳನ್ನು ಕದ್ದು ಪರಾರಿಯಾಗುತ್ತಿದ್ದ ಇಬ್ಬರು ಅಂತರರಾಜ್ಯ ಸರಗಳ್ಳರನ್ನು ರೈಲ್ವೆ ಹಾಗೂ ಇಲ್ಲಿನ ಪೊಲೀಸರು ಸೆರೆ ಹಿಡಿದಿದ್ದಾರೆ.

ಎರಡು ದಿನಗಳ ಹಿಂದೆ ದಾವಣಗೆರೆಯಿಂದ ಬೆಂಗಳೂರು ಕಡೆಗೆ ಸಂಚರಿಸುತ್ತಿದ್ದ ಎಕ್ಸ್ಪ್ರೆಸ್ ರೈಲಿನಲ್ಲಿ ಮಲಗಿದ್ದ ಮಹಿಳೆಯರ ಕೊರಳಲ್ಲಿದ್ದ ಸರಗಳನ್ನು ಕಿತ್ತ ಕಳ್ಳರು ಸಿಗ್ನಲ್ ಬಳಿ ರೈಲಿನಿಂದ ಜಿಗಿದು ಪರಾರಿಯಾಗಿದ್ದರು. ಅವರು ಚಿಕ್ಕಜಾಜೂರು ಸಮೀಪದ ಸಾಸಲು ಗ್ರಾಮದ ಬಳಿ ತಲೆಮರೆಸಿಕೊಂಡಿದ್ದರು. ದಾವಣಗೆರೆ ರೈಲ್ವೆ ಪೊಲೀಸ್ ನಿರೀಕ್ಷಕ ಕೃಷ್ಣನಾಯಕ್ ನಿರ್ದೇಶನದಂತೆ ಆರ್ಪಿಎಫ್ ಇನ್ಸ್ಪೆಕ್ಟರ್ ಆರ್.ಕೆ. ಭಾರಧ್ವಾಜ್, ಚಿಕ್ಕಜಾಜೂರು ಪಿಎಸ್ಐ ಗಾದಿಲಿಂಗಪ್ಪ, ರೈಲ್ವೆ ಸಬ್ ಇನ್ಸ್ಪೆಕ್ಟರ್ ಚಂದ್ರಶೇಖರ್ ನೇತೃತ್ವದಲ್ಲಿ ಎಎಸ್ಐ ಜಾನ್ಕುರಿಯ ಕೋಸ್ ಅವರು ಸಾಸಲು ಗ್ರಾಮದ ಬಳಿ ಕಳ್ಳರನ್ನು ಬಂಧಿಸಿದ್ದಾರೆ.

ಮಹಾರಾಷ್ಟ್ರದ ಈ ಸರಗಳ್ಳರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ. ಹೆಡ್ ಕಾನ್ಸ್ಟೆಬಲ್ಗಳಾದ ಈರನಾಗಪ್ಪ, ಪ್ರದೀಪ್, ಅರುಣ್ಕುಮಾರ್, ಬರ್ಕತ್ ಅಲಿ ಕರ್ಜಗಿ, ಮಂಜುನಾಥ್ ಗೌಳಿಯಾರ್, ಮಂಜು ಜಂಗುಲಿಯರ್, ಕುಮಾರನಾಯ್ಕ, ಆರ್ಪಿಎಫ್ಗಳಾದ ರಮೇಶ್, ಶಿವಾನಂದ, ಚಿದಾನಂದ, ಕಾನ್ಸ್ಟೆಬಲ್ಗಳಾದ ಸುನೀಲ್, ಮಂಜುನಾಥ್, ಹರೀಶ್, ಹಾಲೇಶ್, ರಾಜಕುಮಾರ್, ಮಹಾಂತೇಶ್ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು. ಸುಳಿವು ನೀಡಿದ ಸಾಸಲು ಗ್ರಾಮಸ್ಥರನ್ನು ಪೊಲೀಸರು ಪ್ರಶಂಸಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260604-44-641897407

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.