ನಾಯಕನಹಟ್ಟಿ: ಮಧ್ಯ ಕರ್ನಾಟಕದ ಗೌಡನ ಕುರುಬ ಸಮುದಾಯದ ಆರಾಧ್ಯ ದೈವ ಚನ್ನಕೇಶವಸ್ವಾಮಿಯ ಪ್ರಸಿದ್ಧ ದೀವಳಿಗೆ ಹಬ್ಬ ಭಾನುವಾರ ಪಟ್ಟಣದಲ್ಲಿ ಸಂಪ್ರದಾಯದಂತೆ ಅದ್ದೂರಿಯಾಗಿ ನಡೆಯಿತು.

ದೀಪಾವಳಿ ಹಬ್ಬದ 15 ದಿನಗಳ ನಂತರ ಈ ದೀವಳಿಗೆ ಹಬ್ಬವನ್ನು ಆಚರಿಸಲಾಗುತ್ತದೆ. ಈ ಹಬ್ಬವು ಬುಡಕಟ್ಟು ಸಂಸ್ಕೃತಿ ಸಂಪ್ರದಾಯದಂತೆ ನಡೆಯುತ್ತದೆ. ಮೊದಲು ದೇವರಿಗೆ ಸಮುದಾಯದ ಮುಖಂಡರು ಕಾಸು ಮೀಸಲನ್ನು ಒಪ್ಪಿಸಿ ನಂತರ ದೀಪೋತ್ಸವ ಕಾರ್ಯವನ್ನು ನೆರವೇರಿಸುತ್ತಾರೆ. ಶನಿವಾರ ರಾತ್ರಿ ಭೂತರಾಜರನ್ನು ಪಟ್ಟಣದ ಹೊರ ವಲಯದಲ್ಲಿರುವ ಮರಡಿ ರಂಗನಾಥಸ್ವಾಮಿ ದೇವಾಲಯಕ್ಕೆ ಕೊಂಡೊಯ್ಯಲಾಗುತ್ತದೆ. ಬೆಳಗಿನ ಜಾವ ಭೂತರಾಜರಿಗೆ ಆಹಾರೋತ್ಸವ ಕಾರ್ಯ ಮಾಡಲಾಗುತ್ತದೆ. ನಂತರ ದೇವರನ್ನು ಪಲ್ಲಕ್ಕಿಯಲ್ಲಿ ಭವ್ಯವಾಗಿ ಅಲಂಕಾರ ಮಾಡಿಕೊಂಡು ಸಕಲ ಬಿರುದಾವಳಿಗಳಿಂದ ಜಯ ಘೋಷ ಕೂಗಿಕೊಂಡು ಸಾಗಿದರು.

ದೇವರ ಉತ್ಸವವು ಪಟ್ಟಣದ ಪಾದಗಟ್ಟೆಯ ಬಳಿ ಬಂದಾಗ ಪಲ್ಲಕ್ಕಿಯ ಸುತ್ತ ಕುರಿಮಂದೆಯನ್ನು ಪ್ರದಕ್ಷಿಣೆ ಹಾಕಿಸಲಾಯಿತು. ನಂತರ ಮರಡಿ ರಂಗನಾಥನ ಸನ್ನಿಧಾನಕ್ಕೆ ದೇವರ ಪಲ್ಲಕ್ಕಿಯನ್ನು ಹೊತ್ತು ತಂದು ಪೂಜೆ ಸಲ್ಲಿಸಿದರು. ಭಕ್ತರಿಗೆ ಅನ್ನ ದಾಸೋಹ ವ್ಯವಸ್ಥೆಯನ್ನು ಕಲ್ಪಿಸಲಾಯಿತು. ಸಂಜೆ ಭೂತರಾಜರಿಂದ ಭೂತರ ಹಲಗೆ ಆಡಿಸಿ, ದೇವರನ್ನು ಸ್ವ–ಸ್ಥಾನಕ್ಕೆ ಮರಳಿ ಕರೆತಂದು ಗುಡಿ ತುಂಬಿಸಲಾಯಿತು.

ಬೆಂಗಳೂರು, ಕೋಲಾರ, ಮಾಗಡಿ, ಮಾಲೂರು, ಚಿಂತಾಮಣಿ, ತುಮಕೂರು, ಬಳ್ಳಾರಿ, ಚಿತ್ರದುರ್ಗ, ದಾವಣಗೆರೆ ಜಿಲ್ಲೆಗಳ ಗೌಡನಕುರುಬ ಸಮುದಾಯದವರು ಒಂದೆಡೆ ಸೇರಿ ಹಬ್ಬವನ್ನು ಆಚರಿಸಿದರು.

ಇದೇ ವೇಳೆ ಚನ್ನಕೇಶವಸ್ವಾಮಿ ಸೇವಾಸಮಿತಿ ಅಧ್ಯಕ್ಷ ಸಿ. ಕಾಳಪ್ಪ, ಉಪಾದ್ಯಕ್ಷ ಜಿ.ಟಿ. ಗುರುಸ್ವಾಮಿ, ಕಾರ್ಯದರ್ಶಿ ಕೆ. ತಿಪ್ಪೇಸ್ವಾಮಿ, ಖಜಾಂಚಿ ಸಿ. ರಂಗಸ್ವಾಮಿ, ನಿರ್ದೇಶಕರಾದ ಕೆ. ನಾಗೇಂದ್ರಪ್ಪ, ಗೌಡರ ತಿಪ್ಪೇಸ್ವಾಮಿ, ಡ್ರೈವರ್ ತಿಪ್ಪೇಸ್ವಾಮಿ, ಸೋಮಶೇಖರ, ಮಂಜಣ್ಣ, ಚನ್ನಯ್ಯ, ರೇವಣ್ಣ, ಹನುಮಂತಪ್ಪ, ರುದ್ರಪ್ಪ, ಮಂಜುನಾಥ, ಕಂಟಪ್ಪರ ಮುನಿಯಪ್ಪ, ಪಾಲಾಕ್ಷಪ್ಪ, ಆರ್. ತಿಪ್ಪೇಸ್ವಾಮಿ ಉಪಸ್ಥಿತರಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.