ಧರ್ಮಪುರ: ಇಲ್ಲಿನ ರೈತ ಸಂಪರ್ಕ ಕೇಂದ್ರದ ಸುತ್ತಲೂ ನಿವೇಶನ ಮತ್ತು ಮನೆಗಳು ನಿರ್ಮಾಣ ಆಗಿರುವುದರಿಂದ ರೈತರು ಇಲ್ಲಿಂದ ಪರಿಕರಗಳನ್ನು ಕೊಂಡೊಯ್ಯಲು ಕಷ್ಟಪಡುವಂತಾಗಿದೆ.

ನಿವಾಸಿಗಳಾದ ಕಂಬದ ರಂಗಣ್ಣ ಮತ್ತು ತಿಮ್ಮಕ್ಕ ಅವರು 2005ರಲ್ಲಿ 80 ಮತ್ತು 60ರ ಅಳತೆಯ ನಿವೇಶನವನ್ನು ಕೃಷಿ ಇಲಾಖೆಗೆ ದಾನ ಮಾಡಿದ್ದು, ನಂತರ ಕಟ್ಟಡ ನಿರ್ಮಾಣವಾಯಿತು. ಆಗ ಈ ಸ್ಥಳದಲ್ಲಿ ಯಾವುದೇ ಕಟ್ಟಡಗಳಾಗಲೀ, ನಿವೇಶನವಾಗಲೀ ಇರಲಿಲ್ಲ. ಆದ್ದರಿಂದ ರೈತ ಸಂಪರ್ಕ ಕೇಂದ್ರದಲ್ಲಿನ ಔಷಧ, ಗೊಬ್ಬರ, ಕೃಷಿ ಪರಿಕರ ಮತ್ತು ಬಿತ್ತನೆ ಬೀಜ ಕೊಂಡೊಯ್ಯಲು ಸಮಸ್ಯೆ ಆಗುತ್ತಿರಲಿಲ್ಲ.

ಆದರೆ, ಈಗ ಕೇಂದ್ರದ ಸುತ್ತಲೂ ನಿವೇಶನ ಹಂಚಿಕೆಯಾಗಿ ಮನೆಗಳು ನಿರ್ಮಾಣವಾಗಿವೆ. ರಸ್ತೆ ಈಗ ಕೇವಲ 8 ಅಡಿ ಇರುವುದರಿಂದ ಕೃಷಿ ಪರಿಕರಗಳನ್ನು ಮತ್ತು ಬಿತ್ತನೆ ಬೀಜವನ್ನು ಕೇಂದ್ರಕ್ಕೆ ಸರಬರಾಜು ಮಾಡಲು ಬರುವ ಲಾರಿಗಳು ಸ್ಥಳಕ್ಕೆ ಹೋಗದಂತ ಪರಿಸ್ಥಿತಿ ನಿರ್ಮಾಣವಾಗಿದೆ ಎಂದು ರೈತರು ದೂರುತ್ತಾರೆ.

‘ರೈತ ಸಂಪರ್ಕ ಕೇಂದ್ರ ಮುಖ್ಯ ರಸ್ತೆಯಿಂದ ಸುಮಾರು ದೂರವಿದ್ದು, ಈಗ ವಾಹನಗಳು ಅಲ್ಲಿಗೆ ಹೋಗಲು ಆಗದೇ ಇರುವುದರಿಂದ ಸರಕುಗಳನ್ನು ಮುಖ್ಯ ರಸ್ತೆಯಲ್ಲಿಯೇ ಇಳಿಸುವಂತಾಗಿದೆ. ನಂತರ ಟ್ರ್ಯಾಕ್ಟರ್ ಮೂಲಕ ಕೇಂದ್ರಕ್ಕೆ ಸರಬರಾಜು ಮಾಡಬೇಕು. ರೈತರು ಪ್ರಾಯಾಸ ಪಟ್ಟು ಪರಿಕರಗಳನ್ನು ಕೊಂಡೊಯ್ಯಬೇಕು’ ಎಂದು ರೈತ ಮುಖಂಡ ಹೊರಕೇರಪ್ಪ ದೂರಿದರು.

‘ರೈತ ಸಂಪರ್ಕ ಕೇಂದ್ರದ ಕಟ್ಟಡ ಶಿಥಿಲಾವಸ್ಥೆ ತಲುಪಿದ್ದು, ಮಳೆಗಾಲದಲ್ಲಿ ಸೋರುತ್ತಿದೆ. ಈಚೆಗೆ ಸೋರುವುದನ್ನು ತಡೆಯಲು ತಾತ್ಕಾಲಿಕ ವ್ಯವಸ್ಥೆ ಮಾಡಲಾಗಿದೆ. ಬದಲಾಗಿ ಹೊಸ ಕಟ್ಟಡ ನಿರ್ಮಾಣವಾಗಬೇಕು. ಅದು ಮುಖ್ಯ ರಸ್ತೆಗೆ ಹೊಂದಿಕೊಂಡಿದ್ದರೆ ಒಳಿತು’ ಎಂದು ಮದ್ದಿಹಳ್ಳಿ ಗೊಲ್ಲರಹಟ್ಟಿಯ ರೈತ ಬಸವರಾಜು ತಿಳಿಸಿದ್ದಾರೆ.

‘2005ರಲ್ಲಿ ಪ್ರಾರಂಭವಾದ ಕೇಂದ್ರದ ಸುತ್ತ ಈಗ ಮನೆಗಳು ನಿರ್ಮಾಣವಾಗಿವೆ. ಕೃಷಿ ಪರಿಕರಗಳು, ಶೇಂಗಾ ಬಿತ್ತನೆ ಬೀಜ, ಪಿವಿಸಿ ಪೈಪ್ ಮತ್ತು ಸ್ಪ್ರಿಂಕ್ಲರ್ ಪರಿಕರಗಳನ್ನು ಹೊತ್ತು ತರುವ ಲಾರಿಗಳು ಇಲ್ಲಿಗೆ ಬರದಂತಹ ಸ್ಥಿತಿ ಇದೆ. ಅದಕ್ಕಾಗಿ ಸಂಬಂಧಪಟ್ಟ ಗ್ರಾಮ ಪಂಚಾಯಿತಿಯವರು ಮುಖ್ಯ ರಸ್ತೆಗೆ ಹೊಂದಿಕೊಂಡಿರುವ ನಿವೇಶನವನ್ನು ನಮ್ಮ ಇಲಾಖೆಗೆ ಹಸ್ತಾಂತರಿಸಿದರೆ ಹೊಸ ಕಟ್ಟಡ ನಿರ್ಮಾಣ ಮಾಡಿಕೊಳ್ಳಲಾಗುವುದು’ ಎಂದು ಕೃಷಿ ಅಧಿಕಾರಿ ಕಿರಣ್ ಕುಮಾರ್ ತಿಳಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260417-44-1176296269

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.