ಧರ್ಮಪುರ: ವೈದ್ಯರ ಕೊರತೆಯಿಂದಾಗಿ ಗ್ರಾಮೀಣ ಜನರಿಗೆ ಆರೋಗ್ಯ ಸೇವೆ ಮರೀಚಿಕೆಯಾಗಿದೆ. ರೋಗಿಗಳು ದೂರದ ಪಟ್ಟಣ, ನಗರ ಪ್ರದೇಶಗಳಿಗೆ ಹೋಗಬೇಕಾದ ಪರಿಸ್ಥಿತಿ ಎದುರಾಗಿದೆ.

ಹಿರಿಯೂರು ತಾಲ್ಲೂಕಿನಲ್ಲಿ ಗುಹಿಲಾಳು, ಜೆ.ಜೆ. ಹಳ್ಳಿ, ಭರಂಪುರ, ಹರಿಯಬ್ಬೆ, ಹೂವಿನಹೊಳೆ, ಹಿರಿಯೂರಿನ ನಮ್ಮ ಕ್ಲಿನಿಕ್ ಆಸ್ಪತ್ರೆಗಳಲ್ಲಿ ವೈದ್ಯರಿಲ್ಲದೆ ರೋಗಿಗಳು ಪ್ರತಿನಿತ್ಯ ಪರದಾಡುವಂತಾಗಿದೆ. ಹಿರಿಯೂರು ಹೊರತು ಪಡಿಸಿದರೆ ಎಲ್ಲವೂ ಗ್ರಾಮೀಣ ಪ್ರದೇಶಗಳಾಗಿದ್ದು, ವೈದ್ಯರಿಲ್ಲದೆ ಜನ ತೊಂದರೆ ಅನುಭವಿಸುತ್ತಿದ್ದಾರೆ.

ಧರ್ಮಪುರ ಗಡಿಗ್ರಾಮವಾಗಿದ್ದು, ಇಲ್ಲಿನ ಸಮುದಾಯ ಆಸ್ಪತ್ರೆಗೆ ಪಕ್ಕದ ಆಂಧ್ರಪ್ರದೇಶದ ಹಳ್ಳಿಗಳಾದ ಅಗ್ರಹಾರಂ, ವಲಸೆ, ಅಮರಾಪುರಂ, ಪುಲ್ಲಿಕುಂಟೆ, ಕಾಸಿಕುಂಟೆ ಮೊದಲಾದ ಗ್ರಾಮಗಳಿಂದ ಹೆಚ್ಚಿನ ರೋಗಿಗಳು ಇಲ್ಲಿಗೆ ಬರುತ್ತಾರೆ. ಇದರಿಂದ ಇಲ್ಲಿನ ಸಮುದಾಯ ಆಸ್ಪತ್ರೆ ಯಾವಾಗಲೂ ರೋಗಿಗಳಿಂದ ತುಂಬಿರುತ್ತದೆ. ಇಲ್ಲಿ ನಿತ್ಯ ಕನಿಷ್ಠ 300 ಜನ ಹೊರರೋಗಿಗಳು ಚಿಕಿತ್ಸೆಗೆ ಬರುತ್ತಾರೆ. ಆದರೆ, ಒಂದು ತಿಂಗಳಲ್ಲಿ ಮಕ್ಕಳ ವೈದ್ಯರು ಮತ್ತು ಪ್ರಸೂತಿ ಹಾಗೂ ಸ್ತ್ರೀರೋಗ ತಜ್ಞರು ಒಮ್ಮಲೇ ವರ್ಗಾವಣೆ ಆಗಿರುವುದರಿಂದ ರೋಗಿಗಳ ಪರದಾಟ ಹೆಚ್ಚಿದೆ.

ಈ ಆಸ್ಪತ್ರೆಯಲ್ಲಿ ಎರಡು ವರ್ಷದಿಂದ ಕ್ಷ–ಕಿರಣ ಯಂತ್ರದ ನಿರ್ವಹಣೆಯ ತಾಂತ್ರಿಕ ಅಧಿಕಾರಿ ಇಲ್ಲದೇ ಇರುವುದರಿಂದ ರೋಗಿಗಳು 35 ಕಿ.ಮೀ. ದೂರದ ಹಿರಿಯೂರು ಇಲ್ಲವೇ, 80 ಕಿ.ಮೀ. ದೂರದ ಚಿತ್ರದುರ್ಗಕ್ಕೆ ಹೋಗಬೇಕಿದೆ. ಅದೇರೀತಿ, ಫಾರ್ಮಸಿಸ್ಟ್ ಕೂಡ ಇಲ್ಲದಿರುವುದರಿಂದ ಆಸ್ಪತ್ರೆಯಲ್ಲಿ ಕಾರ್ಯ ನಿರ್ವಹಿಸುವ ‘ಡಿ’ ದರ್ಜೆಯ ಹೊರಗುತ್ತಿಗೆ ನೌಕರರೇ ಮಾತ್ರೆ ಕೊಡಬೇಕಾದ ಸ್ಥಿತಿ ಇದೆ.

ಹರಿಯಬ್ಬೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲೂ ಮೂರು ತಿಂಗಳಿನಿಂದ ವೈದ್ಯರಿಲ್ಲ. ಇದರಿಂದ ಸುತ್ತಲಿನ ಗ್ರಾಮಗಳ ಜನ ಆರೋಗ್ಯ ಸೇವೆಯಿಂದ ವಂಚಿತರಾಗಿದ್ದಾರೆ. ತಾಲ್ಲೂಕಿನಲ್ಲಿರುವ ಏಳು ಆಸ್ಪತ್ರೆಗಳಲ್ಲಿ ವೈದ್ಯರ ಕೊರತೆ ಇದ್ದು, ತಕ್ಷಣವೇ ಆಸ್ಪತ್ರೆಗಳಿಗೆ ವೈದ್ಯರನ್ನು ನೇಮಕ ಮಾಡುವುದರ ಮೂಲಕ ಆರೋಗ್ಯ ಸೇವೆ ನೀಡಬೇಕು ಎಂದು ಅನೇಕ ರೋಗಿಗಳು ಒತ್ತಾಯಿಸಿದ್ದಾರೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260505-44-1641469922

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.