ಮೊಳಕಾಲ್ಮುರು-ಬಳ್ಳಾರಿ ಬಸ್‌ ಸೇವೆಗೆ ಚಾಲನೆ

7

ಮೊಳಕಾಲ್ಮುರು-ಬಳ್ಳಾರಿ ಬಸ್‌ ಸೇವೆಗೆ ಚಾಲನೆ

Published:
Updated:
Prajavani

ಮೊಳಕಾಲ್ಮುರು: ತಾಲ್ಲೂಕಿನ ರಾಂಪುರದಲ್ಲಿ ಗುರುವಾರ ಮೊಳಕಾಲ್ಮುರು-ಬಳ್ಳಾರಿ ಬಸ್ ಸೇವೆಯನ್ನು ಶಾಸಕ ಬಿ. ಶ್ರೀರಾಮುಲು ಟಿಕೆಟ್ ಖರೀದಿ ಮಾಡಿ ಸಾಂಕೇತಿಕವಾಗಿ ಪ್ರಯಾಣಿಸುವ ಮೂಲಕ ಉದ್ಘಾಟಿಸಿದರು.

ಈ ಮಾರ್ಗದಲ್ಲಿ ಸಾರ್ವಜನಿಕರು ಓಡಾಡಲು ಹಾಗೂ ಮುಖ್ಯವಾಗಿ ವಿದ್ಯಾರ್ಥಿಗಳು ಶಾಲಾ-ಕಾಲೇಜಿಗೆ ತೆರಳಲು ಸಾರಿಗೆ ವ್ಯವಸ್ಥೆ ಇಲ್ಲ ಎಂದು ಗಮನಕ್ಕೆ ತಂದಿದ್ದ ಹಿನ್ನೆಲೆಯಲ್ಲಿ ನೂತನ ಬಸ್ ಸೇವೆ ಕಲ್ಪಿಸಲಾಗಿದೆ. ಇದನ್ನು ವಿದ್ಯಾರ್ಥಿಗಳು ಸದುಪಯೋಗ ಮಾಡಿಕೊಳ್ಳಬೇಕು ಎಂದು ಬಿ.ಶ್ರೀರಾಮುಲು ಹೇಳಿದರು.

ಬಿಜೆಪಿ ಮುಖಂಡರಾದ ಜಿಂಕಲು ಬಸವರಾಜ್, ಟಿ. ರೇವಣ್ಣ, ಪರಮೇಶ್ವರಪ್ಪ, ಆರ್.ಜಿ. ಗಂಗಾಧರಪ್ಪ, ಭರತ್ ಕುಮಾರ್, ಎನ್.ವೈ. ಚೇತನ್, ಸೋಮರೆಡ್ಡಿ, ಆರ್.ಜಿ. ಗಂಗಾಧರಪ್ಪ ಭಾಗವಹಿಸಿದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 1

  Angry

Comments:

0 comments

Write the first review for this !