ಹಿರಿಯೂರು: ಮಹಿಳೆಯರ ಮೇಲೆ ಮೊದಲಿನಿಂದಲೂ ಒಂದಲ್ಲಾ ಒಂದು ರೀತಿಯಲ್ಲಿ ಶೋಷಣೆ, ದಬ್ಬಾಳಿಕೆ ನಡೆಯುತ್ತಿದೆ. ಉನ್ನತ ಶಿಕ್ಷಣ, ಗೌರವಯುತ ಹುದ್ದೆ ಪಡೆಯುವ ಮೂಲಕ ಹೆಣ್ಣುಮಕ್ಕಳು ಪರಿಹಾರ ಕಂಡುಕೊಳ್ಳಬೇಕು ಎಂದು ಚಿತ್ರದುರ್ಗದ ಇಂಟೆಲಿಜೆನ್ಸ್ ಪೊಲೀಸ್ ವಿಭಾಗದ ಎಸ್ಐ ಟಿ.ಎನ್. ಮೇಘನಾ ಸಲಹೆ ನೀಡಿದರು.

ನಗರದ ವಾಣಿ ಸಕ್ಕರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಗುರುವಾರ ಹಮ್ಮಿಕೊಂಡಿದ್ದ ಮಹಿಳಾ ದಿನಾಚರಣೆಗೆ ಚಾಲನೆ ನೀಡಿ ಅವರು ಮಾತನಾಡಿದರು.

ಜನ್ಮ ನೀಡಿದ ತಾಯಿಗೆ, ಅಕ್ಷರದ ಅರಿವು ಮೂಡಿಸಿದ ಗುರುಗಳಿಗೆ ಗೌರವ ಕೊಡುವುದು ಉತ್ತಮ ಸಂಸ್ಕಾರವಂತರ ಲಕ್ಷಣ. ಎಲ್ಲಿ ಮಹಿಳೆಯರು ಗೌರವಿಸಲ್ಪಡುತ್ತಾರೋ ಅಲ್ಲಿ ದೇವತೆಗಳು ನೆಲೆಸಿರುತ್ತಾರೆ ಎಂಬ ಮಾತಿದೆ. ಹೀಗಿದ್ದೂ ಮಹಿಳೆಯರ ಮೇಲೆ ದೌರ್ಜನ್ಯಗಳು ನಡೆಯುತ್ತಿರುವುದು ವಿಪರ್ಯಾಸ. ಎಲ್ಲಾ ಹೆಣ್ಣುಮಕ್ಕಳು ಬದುಕಿನಲ್ಲಿ ಎದುರಾಗುವ ಸಮಸ್ಯೆಗಳಿಗೆ ಶಿಕ್ಷಣ ಪಡೆಯುವುದೇ ಮೂಲ ಎಂಬ ಸತ್ಯವನ್ನು ಅರಿಯಬೇಕು. ಆತ್ಮಸ್ಥೈರ್ಯದೊಂದಿಗೆ ಬದುಕುವುದನ್ನು ಕಲಿಯಬೇಕು ಎಂದು ಅವರು ಹೇಳಿದರು.

‘ಕಿತ್ತೂರು ಚನ್ನಮ್ಮ, ಮಹಾದೇವಿಯಕ್ಕ, ಸಾವಿತ್ರಿಬಾಯಿ ಫುಲೆ, ಸರೋಜಿನಿ ನಾಯ್ಡು, ಪ್ರತಿಭಾ ಪಾಟೀಲ್, ಇಂದಿರಾಗಾಂಧಿ ಮೊದಲಾದ ಸಾಧಕ ಮಹಿಳೆಯರ ಬದುಕು ನಮಗೆ ಆದರ್ಶವಾಗಬೇಕು. ಮಹಿಳೆ ಎಂಬ ಕಾರಣಕ್ಕೆ ಅಂಜಿ ನಡೆಯಬೇಕೆಂಬ ಕಾಲ ಇದಲ್ಲ. ಎದುರಾಗುವ ಸಮಸ್ಯೆಗಳನ್ನು ದಿಟ್ಟತನದಿಂದ ಪರಿಹರಿಸಿಕೊಳ್ಳಬೇಕು’ ಎಂದು ಬಿ.ಆರ್. ಹೇಮಲತಾ ಸೂಚಿಸಿದರು.

‘ನಮ್ಮದೇ ಕಾಲೇಜಿನಲ್ಲಿ ಓದಿರುವ ಮೇಘನಾ ಪೊಲೀಸ್ ಅಧಿಕಾರಿ. ಶಬೀನಾಬಾನು ಖಜಾನೆಯಲ್ಲಿ ಉದ್ಯೋಗಿ. ಪರಿಶ್ರಮಪಟ್ಟು ವ್ಯಾಸಂಗ ಮಾಡಿದಲ್ಲಿ ಅವಕಾಶಗಳು ತಾನಾಗಿಯೇ ಬರುತ್ತವೆ. ಇಂತಹ ಕಾರ್ಯಕ್ರಮಗಳಿಂದ ಹೆಣ್ಣುಮಕ್ಕಳಿಗೆ ತಮ್ಮ ಹಕ್ಕುಗಳ ಬಗ್ಗೆ ಅರಿಯಲು ಸಾಧ್ಯವಾಗಿದೆ. ಸ್ತ್ರೀ–ಪುರುಷ ತಾರತಮ್ಯ ಇಂದು ಚರ್ಚಿಸುವ ವಿಷಯವೇ ಅಲ್ಲ. ಸಾಧನೆಗೆ ಲಿಂಗ ತಾರತಮ್ಯವಿಲ್ಲ’ ಎಂದು ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಿ.ಧರಣೇಂದ್ರಯ್ಯ ಅಭಿಪ್ರಾಯಪಟ್ಟರು.

ಸಮಾರಂಭದಲ್ಲಿ ಪ್ರಾಧ್ಯಾಪಕರಾದ ಎ. ದೇವಿಕಾ, ಆರ್. ಗಂಗಾಧರ್, ಬಸವರಾಜ ಟಿ ಬಳಗಟ್ಟ, ಅಧೀಕ್ಷಕ ಪಿ.ಎನ್. ನರಸಿಂಹಮೂರ್ತಿ, ಶಬೀನಾಬಾನು ಮಾತನಾಡಿದರು.

ವಿದ್ಯಾರ್ಥಿಗಳಾದ ಎ.ಸೃಜನಾ ಕಾರ್ಯಕ್ರಮ ನಿರೂಪಿಸಿದರು. ನವ್ಯ ಯಾದವ್ ಸ್ವಾಗತಿಸಿ, ಮೇಘನಾ ವಂದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.