ಬುಧವಾರ, ಆಗಸ್ಟ್ 17, 2022
28 °C
ಮೊದಲ ಹಂತದಲ್ಲಿ ನಡೆಯಲಿದೆ 100 ಗ್ರಾಮ ಪಂಚಾಯಿತಿಗಳ ಚುನಾವಣೆ

ಗ್ರಾಮ ಪಂಚಾಯಿತಿ ಚುನಾವಣೆ: ಚಿತ್ರದುರ್ಗದಲ್ಲಿ 5,831 ನಾಮಪತ್ರ ಸಲ್ಲಿಕೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

ಚಿತ್ರದುರ್ಗ: ಗ್ರಾಮ ಪಂಚಾಯಿತಿ ಚುನಾವಣೆ ಸಂಬಂಧ ಸಾವಿರಾರು ಆಕಾಂಕ್ಷಿಗಳು ಅಖಾಡಕ್ಕೆ ಇಳಿದಿದ್ದಾರೆ. ಶುಕ್ರವಾರ ಕೂಡ ಅನೇಕರು ಉಮೇದುವಾರಿಕೆ ಸಲ್ಲಿಸಿದ್ದಾರೆ. ಜಿಲ್ಲೆಯಲ್ಲಿ ನಿಗದಿತ ಅವಧಿಯೊಳಗೆ ಒಟ್ಟು 5,831 ನಾಮಪತ್ರ ಸಲ್ಲಿಕೆಯಾಗಿವೆ.

ಜಿಲ್ಲೆಯ 189 ಗ್ರಾಮ ಪಂಚಾಯಿತಿಗಳ ಪೈಕಿ ಮೊದಲ ಹಂತದಲ್ಲಿ ಚಿತ್ರದುರ್ಗ ತಾಲ್ಲೂಕಿನ 38, ಹೊಸದುರ್ಗ 33, ಹೊಳಲ್ಕೆರೆ 29 ಸೇರಿ ಒಟ್ಟು 100 ಪಂಚಾಯಿತಿಗಳ 1,753 ಸದಸ್ಯ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.

ಈ ಚುನಾವಣೆ ಸಂಬಂಧ ಚಿತ್ರದುರ್ಗ ತಾಲ್ಲೂಕಿನ 727 ಸದಸ್ಯ ಸ್ಥಾನಗಳಿಗೆ 2,431, ಹೊಸದುರ್ಗ ತಾಲ್ಲೂಕಿನ 493 ಸದಸ್ಯ ಸ್ಥಾನಗಳಿಗೆ 1,847 ಹಾಗೂ ಹೊಳಲ್ಕೆರೆ ತಾಲ್ಲೂಕಿನ 533 ಸದಸ್ಯ ಸ್ಥಾನಗಳಿಗೆ 1,553 ಸೇರಿ ಒಟ್ಟು 5,831 ನಾಮಪತ್ರ ಸ್ವೀಕೃತಗೊಂಡಿವೆ.

ಪರಿಶಿಷ್ಟ ಜಾತಿಯಲ್ಲಿ 1,580, ಪರಿಶಿಷ್ಟ ಪಂಗಡದಲ್ಲಿ 759, ಹಿಂದುಳಿದ ‘ಎ’ ವರ್ಗದಲ್ಲಿ 484, ಹಿಂದುಳಿದ ‘ಬಿ’ ವರ್ಗದಲ್ಲಿ 105 ಹಾಗೂ ಸಾಮಾನ್ಯ ವರ್ಗದಲ್ಲಿ 2,903 ನಾಮಪತ್ರ ಸಲ್ಲಿಕೆಯಾಗಿವೆ. ಉಮೇದುವಾರಿಕೆ ಹಿಂಪಡೆಯಲು ಡಿ. 14 ಕೊನೆಯ ದಿನವಾಗಿದೆ. ಆ ನಂತರವೇ ಕಣದಲ್ಲಿ ಎಷ್ಟು ಅಭ್ಯರ್ಥಿಗಳು ಉಳಿಯಲಿದ್ದಾರೆ ಎಂಬುದು ಖಚಿತವಾಗಲಿದೆ.

ಜಿದ್ದಾಜಿದ್ದಿನ ಹುಮ್ಮಸ್ಸಿನಿಂದಲೇ ಅನೇಕರು ನಾಮಪತ್ರ ಸಲ್ಲಿಸಿದ್ದರೂ ಚಿತ್ರದುರ್ಗ ತಾಲ್ಲೂಕಿನಲ್ಲಿ 1, ಹೊಳಲ್ಕೆರೆ ತಾಲ್ಲೂಕಿನಲ್ಲಿ 2 ಸೇರಿ ಒಟ್ಟು 3 ಸ್ಥಾನಗಳಿಗೆ ನಾಮಪತ್ರ ಸಲ್ಲಿಸದ ಕಾರಣ ಖಾಲಿ ಉಳಿದಿವೆ.  

ಡಿ. 22ರಂದು ಮತದಾನ ಪ್ರಕ್ರಿಯೆ ನಡೆಯಲಿದೆ. ಅಗತ್ಯವಿದ್ದಲ್ಲಿ 24ರಂದು ಮರು ಮತದಾನಕ್ಕೆ ಅವಕಾಶ ಕಲ್ಪಿಸಲಾಗಿದೆ. 30ರಂದು ಮತ ಎಣಿಕೆ ಕಾರ್ಯ ನಡೆಯಲಿದ್ದು, 31ಕ್ಕೆ ಚುನಾವಣೆ ಮುಕ್ತಾಯವಾಗಲಿದೆ.

 

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.