ಸಮಾನತೆ ಎಂಬುದು ಸೂರ್ಯ ಕಿರಣಗಳಿದ್ದಂತೆ

7
ಶರಣ ಸಂಗಮದಲ್ಲಿ ಶಿವಮೂರ್ತಿ ಮುರುಘಾ ಶರಣರು

ಸಮಾನತೆ ಎಂಬುದು ಸೂರ್ಯ ಕಿರಣಗಳಿದ್ದಂತೆ

Published:
Updated:
Deccan Herald

ಚಿತ್ರದುರ್ಗ: ಸ್ವಾತಂತ್ರ್ಯ ಮಾನವ ಬದುಕಿನ ಪ್ರಖರವಾಗಿರುವ ಸೂರ್ಯ. ಸಮಾನತೆ ಎಂಬುದು ಸೂರ್ಯನ ಕಿರಣಗಳು ಇದ್ದ ಹಾಗೆ ಎಂದು ಮುರುಘಾಮಠದ ಶಿವಮೂರ್ತಿ ಮುರುಘಾ ಶರಣರು ಅಭಿಪ್ರಾಯಪಟ್ಟರು.

ಮುರುಘಾಮಠದಲ್ಲಿ ಸೋಮವಾರ ಶ್ರೀಮಠ, ಪ್ರಿಯದರ್ಶಿನಿ ಬಾಲಕಿಯರ ಪ್ರೌಢಶಾಲೆ, ಬೃಹನ್ಮಠ ಪ್ರೌಢಶಾಲೆಯಿಂದ ಹಮ್ಮಿಕೊಂಡಿದ್ದ ‘ಶರಣ ಸಂಗಮ’ ಕಾರ್ಯಕ್ರಮದಲ್ಲಿ ಸ್ವಾತಂತ್ರ್ಯ, ಸಮಾನತೆ, ರಾಷ್ಟ್ರದ ಘನತೆ ವಿಷಯ ಕುರಿತು ಅವರು ಮಾತನಾಡಿದರು.

ಪ್ರಸ್ತುತ ದಿನಗಳಲ್ಲಿ ಅನೇಕ ಗುಡಿಸಲುಗಳ ಒಳಗೆ ಸೂರ್ಯನ ಕಿರಣ ಹೋಗಬೇಕಿದೆ. ಸಂವಿಧಾನಕ್ಕೆ ಯಾರು ಗೌರವ ಕೊಡುತ್ತಾರೋ ಅವರು ಉತ್ತಮ ಬದುಕನ್ನು ಕಟ್ಟಿಕೊಳ್ಳುತ್ತಾರೆ ಎಂದರು.

ದಾವಣಗೆರೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಸಹ ಪ್ರಾಧ್ಯಾಪಕ ಡಾ.ಎಂ. ಮಂಜಣ್ಣ ಮಾತನಾಡಿ, ಸಮಾಜದ ಕಟ್ಟ ಕಡೆಯ ವ್ಯಕ್ತಿಗೂ ಕೂಡ ಉತ್ತಮ ಬದುಕು ಸಿಗುವಂತಾಗಬೇಕು ಎಂದ ಅವರು, ಇಂದು ಜಾತಿ, ಧರ್ಮ ವೈಭವೀಕರಿಸುವ ವ್ಯವಸ್ಥೆಯೊಳಗೆ ಬದುಕುತ್ತಿದ್ದೇವೆ. ಅಲ್ಪಸಂಖ್ಯಾತರು ಇನ್ನೂ ಅಸಹಾಯಕರಾಗಿದ್ದಾರೆ ಎಂದರು.

ಶಿರಸಂಗಿಯ ಮಹಾಂತ ಸ್ವಾಮೀಜಿ, ಹಾವೇರಿಯ ಬಸವ ಶಾಂತಲಿಂಗ ಸ್ವಾಮೀಜಿ, ಎಸ್‌ಜೆಎಂ ವಿದ್ಯಾಪೀಠದ ಕಾರ್ಯನಿರ್ವಹಣಾ ನಿರ್ದೇಶಕ ಡಾ.ಜಿ.ಎನ್. ಮಲ್ಲಿಕಾರ್ಜುನಪ್ಪ, ಡಾ.ಮಲ್ಲಿಕಾರ್ಜುನ ಕಲಮರಹಳ್ಳಿ, ಕಾರ್ಯದರ್ಶಿ ಎ.ಜೆ. ಪರಮಶಿವಯ್ಯ, ಕಾರ್ಯನಿರ್ವಹಣಾಧಿಕಾರಿ ಎಂ.ಜಿ. ದೊರೆಸ್ವಾಮಿ, ನಾಗರಾಜ ಸಂಗಮ್ ಇದ್ದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !