ಚಿತ್ರದುರ್ಗ: ‘ಖೋಟಾನೋಟು’ ಹೆಸರಿನ ವಂಚನೆ ಪ್ರಕರಣದ ಪ್ರಮುಖ ಆರೋಪಿ ಚಂದ್ರಶೇಖರ್ ದುರ್ಗದ ತುಂಬೆಲ್ಲಾ ಹಲವರಿಗೆ, ಸಂಘಟನೆಗಳಿಗೆ, ಜಾತ್ರೆ, ಮಠ, ಮಂದಿರಗಳಿಗೆ ಧನ ಸಹಾಯ ಮಾಡಿದ್ದಾನೆ. ಪೊಲೀಸರು ಕೂಡ ಪ್ರಮುಖ ಫಲಾನುಭವಿಗಳಾಗಿರುವ ಕಾರಣ ಆತ ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳುತ್ತಿದ್ದಾನೆ ಎಂದು ಸ್ಥಳೀಯರು ಹೇಳುತ್ತಾರೆ.

ಹಲವು ದಶಕಗಳಿಂದಲೂ ದಂಧೆ ನಡೆಸುತ್ತಿರುವ ಚಂದ್ರಶೇಖರ್ ಸ್ಥಳೀಯವಾಗಿ ‘ಖೋಟಾನೋಟು ಚಂದ್ರು’ ಎಂದೇ ಪ್ರಸಿದ್ಧಿ ಪಡೆದಿದ್ದಾನೆ. 4ನೇ ವಾರ್ಡ್ನ ಕೋಟೆ, ಕಾಮನಬಾವಿ ಬಡಾವಣೆ, ದೊಡ್ಡಪೇಟೆ ಭಾಗದ ಜನರಿಗೆ ಅಪಾರ ಹಣ ಸಹಾಯ ಮಾಡಿರುವ ಕಾರಣ ಅಲ್ಲಿಯ ಜನರು ಅವನ ರಕ್ಷಣೆಗೆ ನಿಲ್ಲುತ್ತಾರೆ. ಪೊಲೀಸರು ತಪಾಸಣೆಗೆ ಬಂದಾಗ ಚಂದ್ರಶೇಖರ್ ಹಲವು ಮನೆಗಳಿಗೆ ಹೊಕ್ಕಿ ತಪ್ಪಿಸಿಕೊಳ್ಳುತ್ತಾನೆ. ಸ್ಥಳೀಯರು ಅವನ ಬಗ್ಗೆ ಸಣ್ಣ ಸುಳಿವನ್ನೂ ನೀಡುವುದಿಲ್ಲ ಎಂಬುದು ಕುತೂಹಲ ಮೂಡಿಸುತ್ತದೆ.

‘ದೇವರ ಭಕ್ತನಾಗಿರುವ ಆತ ಜಿಲ್ಲೆಯ ಹಲವು ದೇವಾಲಯಗಳಿಗೆ ದಾರಾಳವಾಗಿ ಸಹಾಯ ಮಾಡಿದ್ದಾನೆ. ಮಠಗಳ ಕಾರ್ಯಕ್ರಮ, ಸಂಘಟನೆಗಳ ಸಮಾರಂಭಗಳು, ಹಬ್ಬ, ಹರಿದಿನಗಳಲ್ಲಿ ಹಣ ಕೊಡುತ್ತಾನೆ. ನಗರಸಭೆ ಚುನಾವಣೆಗಳಲ್ಲಿ ಆತನ ವಿರುದ್ಧ ಸ್ಪರ್ಧೆ ಬಯಸುವ ಎಲ್ಲರನ್ನೂ ತಣ್ಣಗಾಗಿಸುತ್ತಾನೆ. ಜಿಲ್ಲೆಯಲ್ಲಿ ಜೆಡಿಎಸ್ ಮತಗಳು ಅಷ್ಟಾಗಿ ಇಲ್ಲದಿದ್ದರೂ ಚಂದ್ರಶೇಖರ್ ತನ್ನ ಪ್ರಭಾವದಿಂದಲೇ ಗೆದ್ದು ಬರುತ್ತಾನೆ’ ಎಂದು ಕಾಮನಬಾವಿ ಬಡಾವಣೆಯ ನಿವಾಸಿಯೊಬ್ಬರು ತಿಳಿಸಿದರು.

ಏಜೆಂಟರ ಮೂಲಕ ಕೆಲಸ: ಖೋಟಾನೋಟು ಮುದ್ರಣ ಮಾಡದೇ, ಚಲಾವಣೆ ಮಾಡದೇ ಖೋಟಾನೋಟು ಹೆಸರಿನಲ್ಲಿ ನಡೆಯುವ ಈ ದಂಧೆ ಏಜೆಂಟರ ಮೂಲಕ ನಡೆಯುತ್ತದೆ. ರಾಜ್ಯದ ಬೆಂಗಳೂರು, ಮಂಗಳೂರು, ತುಮಕೂರು, ಹಾವೇರಿ ಸೇರಿದಂತೆ ಉತ್ತರ ಕರ್ನಾಟಕ, ಆಂಧ್ರಪ್ರದೇಶ, ತೆಲಂಗಾಣ ಭಾಗದಲ್ಲಿ ಚಂದ್ರಶೇಖರ್ ಚಟುವಟಿಕೆ ವ್ಯಾಪಿಸಿದ್ದು ಅಲ್ಲಿ ತನ್ನದೇ ಏಜೆಂಟರನ್ನು ನೇಮಿಸಿಕೊಂಡು ದಂಧೆ ನಡೆಸುತ್ತಾನೆ ಎಂದು ಮೂಲಗಳು ತಿಳಿಸುತ್ತವೆ.

‘ಖೋಟಾನೋಟು ಚಂದ್ರುವಿನ ಚಟುವಟಿಕೆಗಳು ಪೊಲೀಸರಿಗೆ ಬಹಳ ಚೆನ್ನಾಗಿ ಗೊತ್ತಿವೆ. ನೆಪಮಾತ್ರಕ್ಕಷ್ಟೇ ಬಂಧಿಸುತ್ತಾರೆ, ಗಂಭೀರವಾದ ಕಲಮುಗಳನ್ನು ಹಾಕಿ ಪ್ರಕರಣ ದಾಖಲಿಸುವುದಿಲ್ಲ. ಹೀಗಾಗಿ ಬಹಳ ಬೇಗ ಜಾಮೀನು ಪಡೆದು ಹೊರಗೆ ಬರುತ್ತಾನೆ. ಪೊಲೀಸ್ ಠಾಣೆಗಳಲ್ಲಿ ಆತನಿಗೆ ಸಕಲ ಸೌಲಭ್ಯಗಳು ದೊರೆಯುತ್ತವೆ. ವಿನೋತ್ ಪ್ರಿಯಾ ಜಿಲ್ಲಾಧಿಕಾರಿಯಾಗಿದ್ದಾಗ ಗಡಿಪಾರು ಮಾಡಿದ್ದನ್ನು ಬಿಟ್ಟರೆ ಮತ್ತ್ಯಾವ ಕ್ರಮವೂ ಅವನ ವಿರುದ್ಧ ಆಗಿಲ್ಲ’ ಎಂದು ವಕೀಲ ಮಂಜುನಾಥ್ ಹೇಳಿದರು.

ಖೋಟನೋಟು ಚಂದ್ರಶೇಖರ್ ಈಚೆಗೆ ತನ್ನ ಅದ್ಧೂರಿ ಜನ್ಮದಿನ ಆಚರಿಸಿಕೊಂಡಿದ್ದಾನೆ. ಈ ಕುರಿತ ಚಿತ್ರಗಳು ಸಾಮಾಜಿಕ ಜಾಲತಾಣಗಳಲ್ಲೂ ಹರಿದಾಡುತ್ತಿವೆ. ಆತನ ಬೆಂಬಲಿಗರು ನಗರದ ವಿವಿಧೆಡೆ ಬೃಹತ್ ಕಟೌಟ್ ಹಾಕಿ ಶುಭಾಶಯ ಕೋರಿದ್ದರು. ಮಾಜಿ ಶಾಸಕರೊಬ್ಬರು ಸೇರಿದಂತೆ ಹಲವು ಗಣ್ಯರು, ಸ್ವಾಮೀಜಿಗಳು ಆತನ ಮನೆಗೆ ಭೇಟಿ ನೀಡಿ ಜನ್ಮದಿನದ ಶುಭಾಶಯ ಕೋರಿದ್ದನ್ನು ಸ್ಥಳೀಯರು ನೆನೆಯುತ್ತಾರೆ.

‘ಪ್ರತಿ ಚುನಾವಣೆಗಳಲ್ಲಿ ಚಂದ್ರಶೇಖರ್ ಅಭ್ಯರ್ಥಿಗಳಿಗೆ ಹಣ ಕೊಡುತ್ತಾನೆ. ಹೀಗಾಗಿ ವಿವಿಧ ರಾಜಕೀಯ ಪಕ್ಷಗಳ ಮುಖಂಡರು ಆತನಿಗೆ ಆಪ್ತರಾಗಿದ್ದಾರೆ. ಆತ ಜೆಡಿಎಸ್ನಲ್ಲಿದ್ದರೂ ಬಿಜೆಪಿ, ಕಾಂಗ್ರೆಸ್ ಮುಖಂಡರು ಆತನೊಂದಿಗೆ ಸ್ನೇಹದಿಂದ ಇದ್ದಾರೆ’ ಎಂದು ಕಾಮನಬಾವಿ ಬಡಾವಣೆ ನಿವಾಸಿಗಳು ಹೇಳಿದರು.

ಅಕ್ರಮವಾಗಿ ಹಣ ಸಂಗ್ರಹ ಮಾಡಲಾದ ಪ್ರಕರಣದಲ್ಲಿ ಚಂದ್ರಶೇಖರ್ನನ್ನು ಬಂಧಿಸಲಾಗಿದೆ. ಪ್ರಕರಣದ ವಿಚಾರಣೆ ನಡೆಯುತ್ತಿದ್ದು ಶೀಘ್ರ ಎಲ್ಲಾ ವಿವರ ನೀಡಲಾಗುವುದು
ರಂಜಿತ್ ಕುಮಾರ್ ಬಂಡಾರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

ಕಾನೂನು ವ್ಯವಸ್ಥೆಯ ಅಣಕ

‘ಖೋಟಾನೋಟು ಚಂದ್ರಶೇಖರ್ ಡಬ್ಲಿಂಗ್ ತ್ರಿಬ್ಲಿಂಗ್ ಪ್ರಕರಣಗಳಲ್ಲಿ ಪ್ರಮುಖ ಆರೋಪಿಯಾಗಿದ್ದಾನೆ ಎಂದು ಪೊಲೀಸರಿಗೆ ಗೊತ್ತಿದೆ. ಇದು ಕೋಟೆಜಿಲ್ಲೆಯ ಎಲ್ಲರಿಗೂ ತಿಳಿದಿರುವ ವಿಚಾರವಾಗಿದೆ. ಸಾಕಷ್ಟು ಸಲ ಜೈಲಿಗೂ ಹೋಗಿ ಬಂದಿದ್ದಾನೆ. ಆದರೂ ಆತನ ವಂಚನೆ ವಿರುದ್ಧ ಕ್ರಮ ಜರುಗಿಸಲು ಸಾಧ್ಯವಾಗಿಲ್ಲ ಎಂಬುದು ನಮ್ಮ ಪೊಲೀಸ್ ಕಾನೂನು ವ್ಯವಸ್ಥೆಯ ಅಣಕವಾಗಿದೆ’ ಎಂದು ಸ್ಥಳೀಯ ಮುಖಂಡರೊಬ್ಬರು ಹೆಸರು ಬರೆಯದ ಷರತ್ತಿನೊಂದಿಗೆ ಹೇಳಿದರು.

ಜಿಲ್ಲೆಯಲ್ಲೇ 32 ಪ್ರಕರಣ
‘ಆರೋಪಿ ಚಂದ್ರಶೇಖರ್ ವಿರುದ್ಧ ಚಿತ್ರದುರ್ಗ ಜಿಲ್ಲೆಯಲ್ಲೇ 32 ಪ್ರಕರಣಗಳಿವೆ. ಜೊತೆಗೆ ರಾಜ್ಯದ ವಿವಿಧ ಠಾಣೆಗಳಲ್ಲಿ ಹಲವು ಪ್ರಕರಣ ದಾಖಲಾಗಿವೆ. ಆರೋಪಿಯನ್ನು ಪೊಲೀಸ್ ವಶಕ್ಕೆ ಪಡೆದು ವಿಚಾರಣೆ ನಡೆಸಲಾಗುತ್ತಿದೆ. ಹೆಚ್ಚಿನ ಹಣದಾಸೆಗೆ ಮೋಸ ಹೋದವರು ಪೊಲೀಸರನ್ನು ಸಂಪರ್ಕಿಸಬಹುದು’ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರಂಜಿತ್ ಕುಮಾರ್ ಬಂಡಾರು ತಿಳಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.