ನಾಯಕನಹಟ್ಟಿ: ಭದ್ರಾ ಮೇಲ್ದಂಡೆ ಯೋಜನೆಯ ತ್ವರಿತ ಅನುಷ್ಠಾನಕ್ಕಾಗಿ ಆಗ್ರಹಿಸಿ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದ ರೈತನಾಯಕ ತಿಪ್ಪೇಸ್ವಾಮಿ ಅವರ ಅನಾರೋಗ್ಯಕ್ಕೆ ಜಿಲ್ಲಾಡಳಿತವೇ ಕಾರಣ ಎಂದು ರೈತ ಸಂಘದ ರಾಜ್ಯ ಘಟಕದ ಕಾರ್ಯಧ್ಯಕ್ಷ ಬೇಡರೆಡ್ಡಿಹಳ್ಳಿ ಬಸವರೆಡ್ಡಿ ಆಕ್ರೋಶ ವ್ಯಕ್ತಪಡಿಸಿದರು.

ತಳಕು ಗ್ರಾಮದ ಹೊರವಲಯದ ರಾಷ್ಟ್ರೀಯ ಹೆದ್ದಾರಿ-150ರಲ್ಲಿ ರೈತಸಂಘ ಹಾಗೂ ಹಸಿರುಸೇನೆ ಪದಾಧಿಕಾರಿಗಳೊಂದಿಗೆ ಮಂಗಳವಾರ ರಸ್ತೆ ತಡೆ ನಡೆಸಿ ಮಾತನಾಡಿದರು.

ಸರ್ಕಾರಗಳಿಗೆ ಚಾಟಿಬೀಸುವ ಸಲುವಾಗಿ ಮಾರ್ಚ್ 2ರಂದು ಉಪವಾಸ ಸತ್ಯಾಗ್ರಹಕ್ಕೆ ಜಿಲ್ಲಾ ರೈತಸಂಘ ಮುಂದಾಗಿತ್ತು. ಪ್ರತಿದಿನ ವಿವಿಧ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿದ್ದವು. ರೈತಸಂಘದ ಪದಾಧಿಕಾರಿಗಳನ್ನು ಸೌಜನ್ಯಕ್ಕಾದರೂ ಜಿಲ್ಲಾಧಿಕಾರಿ ಸೇರಿದಂತೆ ಯಾವೊಬ್ಬ ಅಧಿಕಾರಿಯೂ ವಿಚಾರಿಸಲಿಲ್ಲ.

ಆದರೆ ತಿಪ್ಪೇಸ್ವಾಮಿ ಅವರು ಉಪವಾಸ ಸತ್ಯಾಗ್ರಹದಿಂದಾಗಿ ಆಸ್ಪತ್ರೆಗೆ ದಾಖಲಾಗಿದ್ದಾರೆ. ಶಸ್ತ್ರಚಿಕಿತ್ಸೆಗೆ ₹15 ಲಕ್ಷ ವೆಚ್ಚವಾಗಿದ್ದು, ಗಂಭೀರ ಸ್ಥಿತಿಯಲ್ಲಿರುವ ಅವರ ಆರೋಗ್ಯ ವಿಚಾರಿಸುವ ಮಾನವೀಯತೆಯನ್ನು ಜಿಲ್ಲಾಡಳಿತ, ಜನಪ್ರತಿನಿಧಿಗಳು ಮಾಡಿಲ್ಲ. ಇದು ಹೋರಾಟಗಾರರಿಗೆ ಮಾಡಿದ ಅಪಮಾನ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲಾ ಘಟಕದ ಅಧ್ಯಕ್ಷ ಮರ್ಲಹಳ್ಳಿ ರವಿಕುಮಾರ್, ಮಲ್ಲಸಮುದ್ರ ಗಂಗಾಧರ್, ಮುಖಂಡರಾದ ಸೂರಮ್ಮನಹಳ್ಳಿ ರಾಜಣ್ಣ, ಪ್ರಶಾಂತ್ರೆಡ್ಡಿ, ಮಿಠ್ಯಾನಾಯ್ಕ, ಓಬನಾಯ್ಕ, ಚಂದ್ರಶೇಖರ ನಾಯಕ, ಹೀರೇಹಳ್ಳಿ ತಿಪ್ಪೇಸ್ವಾಮಿ, ಎದ್ದಲು ತಿಪ್ಪೇಸ್ವಾಮಿ, ಪಾಪಯ್ಯ, ಬಸವರಾಜ್, ರಾಜಣ್ಣ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.