ಚಿರತೆ ಚರ್ಮ, ಜಿಂಕೆ ಕೊಂಬು ವಶ

7

ಚಿರತೆ ಚರ್ಮ, ಜಿಂಕೆ ಕೊಂಬು ವಶ

Published:
Updated:
ಅರಣ್ಯ ಇಲಾಖೆ ವಶಪಡಿಸಿಕೊಂಡ ಚಿರತೆ, ಕಡವೆ ಚರ್ಮ ಹಾಗೂ ಜಿಂಕೆ ಕೊಂಬುಗಳು

ಚಿತ್ರದುರ್ಗ: ನಗರದ ಜೋಗಿಮಟ್ಟಿ ರಸ್ತೆಯ ನಿವಾಸಿ ಗೌರಮ್ಮ ಎಂಬುವರ ಮನೆಯ ಮೇಲೆ ಸೋಮವಾರ ದಾಳಿ ನಡೆಸಿದ ಅರಣ್ಯ ಇಲಾಖೆಯ ಅಧಿಕಾರಿಗಳು ವನ್ಯಜೀವಿಗಳ ಚರ್ಮ ಹಾಗೂ ಕೊಂಬುಗಳನ್ನು ವಶಕ್ಕೆ ಪಡೆದಿದ್ದಾರೆ.

ಕಡವೆ ಮತ್ತು ಚಿರತೆಯ ಚರ್ಮ, ಎರಡು ಜಿಂಕೆಗಳ ಮುಖ, ಕೊಂಬು ಪತ್ತೆಯಾಗಿವೆ. ಇವು 45 ವರ್ಷಗಳಷ್ಟು ಹಳೆಯವು ಎನ್ನಲಾಗಿದೆ.  ‘ಮನೆಯನ್ನು ಶುಚಿಗೊಳಿಸುವ ಸಂದರ್ಭದಲ್ಲಿ ಇವು ಸಾರ್ವಜನಿಕರ ಕಣ್ಣಿಗೆ ಬಿದ್ದಿದ್ದವು. ನಿಖರ ಮಾಹಿತಿಯ ಆಧಾರದ ಮೇರೆಗೆ ದಾಳಿ ನಡೆಸಿದ್ದೇವೆ. ಮನೆಯ ಮೊದಲ ಮಹಡಿಯಲ್ಲಿ ವನ್ಯಜೀವಿ ಚರ್ಮ, ಕೊಂಬು ಪತ್ತೆಯಾಗಿದ್ದು, ವಿಚಾರಣೆ ನಡೆಸುತ್ತಿದ್ದೇವೆ’ ಎಂದು ಆರ್‌ಎಫ್‌ಒ ಸಂದೀಪ್‌ ನಾಯಕ್‌ ತಿಳಿಸಿದ್ದಾರೆ.

‘ಮನೆಯನ್ನು ಬೇರೊಬ್ಬರು ಬಾಡಿಗೆ ಪಡೆದಿದ್ದರು ಎಂದು ಮನೆ ಮಾಲೀಕರು ಹೇಳಿಕೆ ನೀಡಿದ್ದಾರೆ. ಇವುಗಳ ನೈಜತೆ ಪರೀಕ್ಷಿಸಲಾಗುತ್ತಿದೆ. ಅಕ್ರಮವಾಗಿ ಸಂಗ್ರಹಿಸಿಟ್ಟುಕೊಂಡಿರುವುದು ಖಚಿತವಾದರೆ ಪ್ರಕರಣ ದಾಖಲಿಸಿಕೊಳ್ಳಲಾಗುವುದು’ ಎಂದು ತಿಳಿಸಿದ್ದಾರೆ.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !