ಭಾನುವಾರ, ಸೆಪ್ಟೆಂಬರ್ 25, 2022
29 °C
ಗಮನ ಸೆಳೆದ ಕಲಾತಂಡ, ಟ್ರಾಕ್ಟರ್ ಚಲಾಯಿಸಿದ ಶ್ರೀರಾಮುಲು

ಮೊಳಕಾಲ್ಮುರು: ಮಹಾ ಗಣಪತಿ ವೈಭವದ ಶೋಭಾಯಾತ್ರೆ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೊಳಕಾಲ್ಮುರು: ಪಟ್ಟಣದ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಆವರಣದಲ್ಲಿ ಪ್ರತಿಷ್ಠಾಪಿಸಿದ್ದ ಮಹಾಗಣಪತಿ ಶೋಭಾಯಾತ್ರೆ ಮತ್ತು ವಿಸರ್ಜನೆ ಭಾನುವಾರ ವೈಭವದಿಂದ ನಡೆಯಿತು.

ಸ್ಥಳೀಯ ಮಹಾ ಗಣಪತಿ ಸೇವಾ ಸಮಿತಿ ಗಣಪತಿ ಪ್ರತಿಷ್ಠಾಪಿಸಿದ್ದು, 54ನೇ ವರ್ಷದ ಆಚರಣೆಯಾಗಿದೆ. ಮಧ್ಯಾಹ್ನ ಮಹಾ ಮಂಗಳಾರತಿ ನಂತರ ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ಮುಂಭಾಗದಲ್ಲಿ ಪಟ್ಟಣ ಪಂಚಾಯಿತಿ ಅಧ್ಯಕ್ಷ ಟಿ.ಟಿ. ರವಿಕುಮಾರ್ ಶೋಭಾಯಾತ್ರೆಗೆ ಚಾಲನೆ ನೀಡಿದರು.

ನಂತರ ಯಾತ್ರೆ ಮುಖ್ಯರಸ್ತೆಯಲ್ಲಿ ಸಾಗಿತು. ಮೆರವಣಿಗೆ ನಂತರ ರಾತ್ರಿ ದೊಡ್ಡಪೇಟೆಯಲ್ಲಿರುವ ವೆಂಕಣ್ಣಯ್ಯ ಬಾವಿಯಲ್ಲಿ ಗಣಪತಿ
ವಿಸರ್ಜಿಸಲಾಯಿತು.

ಶೋಭಾಯಾತ್ರೆ ಅಂಗವಾಗಿ ಪ್ರಮುಖ ರಸ್ತೆಗಳನ್ನು ಕೇಸರಿ ಧ್ವಜಗಳಿಂದ ಅಲಂಕರಿಸಲಾಗಿತ್ತು. ಮಂಗಳೂರಿನ ಚಂಡೆ ವಾದ್ಯ, ಡೊಳ್ಳು ಕುಣಿತ, ವಿವಿಧ ವೇಷಧಾರಿಗಳು, ಡಿಜೆ ಸದ್ದಿಗೆ ಯುವಕ, ಯುವತಿಯರ ಕುಣಿದರು. ಭಾಗವಹಿಸಿದ್ದವರಿಗೆ ಅಲ್ಲಲ್ಲಿ ತಿಂಡಿ ವ್ಯವಸ್ಥೆ ಮಾಡಲಾಗಿತ್ತು.

ಸಚಿವ ಬಿ. ಶ್ರೀರಾಮುಲು ಶೋಭಾಯಾತ್ರೆಯಲ್ಲಿ ಭಾಗವಹಿಸಿ ಕೆಲಕಾಲ ಮೂರ್ತಿ ಹೊತ್ತಿದ್ದ ಟ್ಯಾಕ್ಟರ್ ಅನ್ನು ಚಲಾಯಿಸಿದರು. ಮಹಾ ಗಣಪತಿ ಜತೆ ತಿಲಕ್ ನಗರ, ಪಿ.ಟಿ. ಹಟ್ಟಿ ಮತ್ತು ಹುಲ್ಲುಮಾರನ ತಿಪ್ಪೆಯಲ್ಲಿ ಪ್ರತಿಷ್ಠಾಪಿಸಿದ್ದ ಗಣಪತಿ ವಿಗ್ರಹಗಳ ಮೆರವಣಿಗೆ ಮತ್ತು ವಿಸರ್ಜನೆ ನಡೆಯಿತು.

ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಪಿ. ಮಂಜಣ್ಣ, ಮಾಜಿ ಅಧ್ಯಕ್ಷ ಪಿ. ಲಕ್ಷ್ಮಣ್, ಬಿಜೆಪಿ ಮಂಡಲ ಅಧ್ಯಕ್ಷ ಡಾ.ಪಿ.ಎಂ. ಮಂಜುನಾಥ್, ಚಂದ್ರಶೇಖರ ಗೌಡ, ಡಿಶ್ ರಾಜು, ಕಿರಣ್ ಗಾಯಕ್ ವಾಡ್, ಪಾಪೇಶ್ ನಾಯಕ, ಹರೀಶ್ ಪಾಳೆಗಾರ್, ವಿನಯ್ ಕುಮಾರ್ ಮತ್ತು ಮಹಾ ಗಣಪತಿ ಸಮಿತಿ ಸದಸ್ಯರು ಇದ್ದರು.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.