ಮಾಜಿ ಸಚಿವ ಮಂಜುನಾಥ ಭೇಟಿ ಮಾಡಿದ ದೊಡ್ಡ ಗಣೇಶ್

7

ಮಾಜಿ ಸಚಿವ ಮಂಜುನಾಥ ಭೇಟಿ ಮಾಡಿದ ದೊಡ್ಡ ಗಣೇಶ್

Published:
Updated:
Prajavani

ಹಿರಿಯೂರು: ನಗರದ ಹೊರವಲಯದಲ್ಲಿರುವ ತೋಟದ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿರುವ ಮಾಜಿ ಸಚಿವ ಡಿ. ಮಂಜುನಾಥರ ಯೋಗಕ್ಷೇಮವನ್ನು ಭಾನುವಾರ ಕ್ರಿಕೆಟ್ ಪಟು ದೊಡ್ಡ ಗಣೇಶ್ ವಿಚಾರಿಸಿದರು.

ಎರಡು ವರ್ಷದ ಹಿಂದೆ ಐಮಂಗಲ ಸಮೀಪ ಸಂಭವಿಸಿದ ಅಪಘಾತದಲ್ಲಿ 90 ವರ್ಷದ ಹಿರಿಯ ರಾಜಕಾರಣಿ ಮಂಜುನಾಥರು ಗಾಯಗೊಂಡಿದ್ದರು. ನಂತರ ಮನೆಯ ಸ್ನಾನಗೃಹದಲ್ಲಿ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆದಿರುವ ಅವರು ಸದ್ಯ ತೋಟದ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿದ್ದಾರೆ. ಈಗಲೂ ಅವರ ನೆನಪಿನ ಶಕ್ತಿ ನೋಡಲು ಹೋದವರಲ್ಲಿ ಅಚ್ಚರಿ ಹುಟ್ಟಿಸುವಂತಿದೆ. ದೊಡ್ಡಗಣೇಶ್ ಜತೆ ಹಳೆಯ ಘಟನೆಗಳನ್ನೆಲ್ಲ ಮೆಲುಕು ಹಾಕಿದರು.

ಕ್ರಿಕೆಟ್ ಬದುಕಿನಿಂದ ನಿವೃತ್ತಿಯಾದಾಗ ಹಲವು ಮುಖಂಡರು ನನ್ನನ್ನು ತಮ್ಮ ಪಕ್ಷಗಳಿಗೆ ಆಹ್ವಾನಿಸಿದ್ದರು. ಡಿ. ಮಂಜುನಾಥ್, ಅಂದಿನ ಜೆಡಿಎಸ್ ಅಧ್ಯಕ್ಷ ಮಿರಾಜುದ್ದೀನ್ ಪಟೇಲ್, ದೇವೇಗೌಡರು, ಬಸವರಾಜ ಹೊರಟ್ಟಿ, ವೈ.ಎಸ್.ವಿ. ದತ್ತ ಅವರಂತಹ ಸರಳ ಜೀವಿಗಳನ್ನು ಕಂಡು ಆ ಪಕ್ಷವನ್ನು ಸೇರಿದ್ದೆ. ಬೆಂಗಳೂರಿನಿಂದ ವಿಧಾನಸಭೆಗೆ ಸ್ಪರ್ಧಿಸುವಂತೆ ಸಲಹೆಯೂ ಬಂದಿತ್ತು. ಆದರೆ ಆ ವೇಳೆಗೆ ಹಣವಂತರು ಪ್ರವೇಶ ಮಾಡಿಯಾಗಿತ್ತು. ಹೀಗಾಗಿ ಶಾಸಕನಾಗಬೇಕೆಂಬ ಆಸೆ ಇದ್ದರೂ ಹಣಕೊಟ್ಟು ಗೆಲ್ಲವುದು ಬೇಡ ಎಂದುವಾಮ ಮಾರ್ಗದಲ್ಲಿ ಅಧಿಕಾರ ಹಿಡಿಯಲು ನಿರಾಕರಿಸಿದೆ ಎಂದು ಗಣೇಶ್‌ ಸುದ್ದಿಗಾರರಿಗೆ ತಿಳಿಸಿದರು.

ಸಾಮಾನ್ಯರ ಮಕ್ಕಳು ದುಡ್ಡಿನ ಕಾರಣಕ್ಕೆ ಕ್ರಿಕೆಟ್ ನಿಂದ ದೂರ ಉಳಿಯಬಾರದು ಎಂದು ‘ದೊಡ್ಡ ಗಣೇಶ್ ಕ್ರಿಕೆಟ್ ಅಕಾಡೆಮಿ’ ಆರಂಭಿಸಿ ಬಡಮಕ್ಕಳಿಗೆ ತರಬೇತಿ ಕೊಡುತ್ತಿದ್ದೇನೆ. ಅಲ್ಲಿ ಸಿಗುವ ತೃಪ್ತಿ ಬೇರೆಲ್ಲೂ ಸಿಗದು ಎಂದು ಸಂತಸದಿಂದ ಹೇಳಿದರು.

‘ಕ್ರಿಕೆಟ್‌ನಲ್ಲಿ ಎದುರಾಳಿಗಳ ಬಗ್ಗೆ ಯೋಚಿಸಿ ಆಡುತ್ತಿದ್ದಂತೆ ರಾಜಕೀಯದಲ್ಲೂ ಮುಂದಾಲೋಚನೆ ಅಗತ್ಯ. ಸಭ್ಯ ರಾಜಕಾರಣ ಮಂಜುನಾಥರ ಕಾಲಕ್ಕೆ ಮುಗಿಯಿತು ಅನಿಸುತ್ತಿದೆ. ಅವರ ಆಶೀರ್ವಾದ ಪಡೆಯೋಣ ಎಂದು ಬಂದಿದ್ದೇನೆ’ ಎಂದು ಹೇಳಿದರು.

ಬರಹ ಇಷ್ಟವಾಯಿತೆ?

 • 0

  Happy
 • 0

  Amused
 • 0

  Sad
 • 0

  Frustrated
 • 0

  Angry

Comments:

0 comments

Write the first review for this !