ಚಿತ್ರದುರ್ಗ: ‘ಮನುಷ್ಯನಿಗೆ ಸಂಸ್ಕಾರ ನೀಡಿದರೆ ಅವನು ಮಹಾದೇವನಾಗುತ್ತಾನೆ. ನಿಮ್ಮ ಸ್ವಭಾವಗಳು ಪರಿವರ್ತನೆಯಾದಾಗ ಉತ್ತಮ ವ್ಯಕ್ತಿಗಳಾಗಲು ಸಾಧ್ಯ’ ಎಂದು ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಹೇಳಿದರು.

ನಗರದ ಕಬೀರಾನಂದಾಶ್ರಮದಲ್ಲಿ ಶಿವನಾಮ ಸಪ್ತಾಹದ ಅಂಗವಾಗಿ ಆಯೋಜಿಸಿರುವ 93ನೇ ಮಹಾ ಶಿವರಾತ್ರಿ ಮಹೋತ್ಸವದಲ್ಲಿ ಗುರುವಾರದ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

‘ಮಾನವ ಶಾಂತಿ, ಸಹನೆ, ತಾಳ್ಮೆಯಿಂದ ಬದುಕು ನಡೆಸಬೇಕು. ಭಗವಂತ ಬಾಹ್ಯ ಮೂರ್ತಿಗಳಲ್ಲಿ ಇಲ್ಲ. ಆತನು ನಮ್ಮ ಅಂತರಂಗದಲ್ಲಿಯೇ ಇದ್ದಾನೆ. ಮನುಷ್ಯ ಕೇವಲ ಬಾಹ್ಯದಿಂದ ಶುದ್ಧಿಯಾಗಿರದೆ ಅಂತರಂಗದಲ್ಲೂ ಶುದ್ಧಿಯಾಗಿರಬೇಕು. ಇದರಿಂದ ಉತ್ತಮ ಸಂಸ್ಕಾರ ಪಡೆಯಲು ಸಾಧ್ಯವಾಗುತ್ತದೆ. ಭಗವಂತ ಜಡವಾದ ವಸ್ತುವಲ್ಲ ಆತನಿಗ ಚೈತನ್ಯವಿದೆ. ಆದರೆ ನೀವು ನೋಡುವ ಯಾವುದೇ ದೇವರಿಗೆ ಅರಿವು, ಚೈತನ್ಯ, ಆನಂದ ಇಲ್ಲವಾಗಿದೆ. ಸ್ವಭಾವ ಪರಿವರ್ತನೆ ಮಾಡಿಕೊಳ್ಳುತ್ತ ನಿಮ್ಮೊಳಗಿನ ಮಹಾದೇವನನ್ನು ಕಾಣಬೇಕು’ ಎಂದು ಹೇಳಿದರು.

‘ಜೀವನದಲ್ಲಿ ವಿಘ್ನಗಳು ಬರುತ್ತವೆ. ಇದರಿಂದ ತಾಳ್ಮೆ ಕಳೆದುಕೊಳ್ಳಬಾರದು. ಒಳ್ಳೆಯರ ಒಡನಾಟ ಇಟ್ಟುಕೊಂಡರೆ ಉತ್ತಮ ಬದುಕು ನಡೆಸಲು ಸಾಧ್ಯವಿದೆ. ಶಿವರಾತ್ರಿ ಎಂದರೆ ಒಂದು ದಿನ ಮಾತ್ರ ಶಿವನಾಮ ಸ್ಮರಣೆ ಮಾಡುವುದಲ್ಲ. ಪ್ರತಿ ದಿನವೂ ಶಿವ ಸ್ಮರಣೆ ಮಾಡಬೇಕು. ಉಸಿರಾಟದಲ್ಲೂ ಸಹ ಸ್ಮರಣೆ ಇರಬೇಕು’ ಎಂದು ತಿಳಿಸಿದರು.

‘ಮಾನವನಿಗೆ ಭಗವಂತ ಹೃದಯ ನೀಡಿದ್ದಾನೆ. ಇದರಿಂದ ಪ್ರೀತಿ, ಪ್ರೇಮದಿಂದ ಇರಲು ಸಾಧ್ಯವಿದೆ. ಯಾವುದೇ ಸುಖ ಸಂತೋಷಗಳಿಗೆ ಭಗವಂತ ಒಲಿಯುವುದಿಲ್ಲ ಇದರ ಬದಲು ಸಾಮಾನ್ಯ ವ್ಯಕ್ತಿಯ ಭಕ್ತಿಗೆ ಒಲಿಯುತ್ತಾನೆ’ ಎಂದು ಸೊಲ್ಲಾಪುರದ ರಾಮಚಂದ್ರಣ್ಣ ಮೇತ್ರೆ ಹೇಳಿದರು.

‘ಶಿವರಾತ್ರಿ, ನವರಾತ್ರಿ ಮಾನವನಿಗೆ ಪವಿತ್ರವಾದವು. ಗುರುವಿಲ್ಲದ ಜೀವನ ವ್ಯರ್ಥವಾಗುತ್ತದೆ. ಬದುಕಿಗೆ ಮುಕ್ತಿ ಕರುಣಿಸುವುದು ಗುರುವಿನ ಕೆಲಸವಾಗಿದೆ. ನಮಗೆ ಸಿಕ್ಕಿರುವ ಜೀವನವನ್ನು ಸಂಸ್ಕಾರದ ಮೂಲಕ ಉತ್ತಮ ಪಡಿಸಿಕೊಳ್ಳಬೇಕಿದೆ’ ಎಂದು ಸೊಲ್ಲಾಪುರದ ಗುರುನಾಥ್ ಮಹಾರಾಜ್ ತಿಳಿಸಿದರು.

ಚಳ್ಳಕೆರೆಯ ಸದ್ಗುರು ನರಹರಿ ಪೀಠದ ಸದ್ಗುರು ರಾಜಾರಾಮ ಸ್ವಾಮೀಜಿ, ಬಾಗಲಕೋಟೆಯ ಕೌದೀಶ್ವರ ಮಠದ ಮಾಧವಾನಂದ ಸ್ವಾಮೀಜಿ, ಕಬೀರಾನಂದಾಶ್ರಮದ ಶಿವಲಿಂಗಾನಂದ ಸ್ವಾಮೀಜಿ, ಮಾಜಿ ಸಂಸದ ಜನಾರ್ದನ ಸ್ವಾಮಿ, ನಗರಸಭೆ ಸದಸ್ಯ ಶಶಿಧರ್, ಕಾಂಗ್ರೆಸ್ ಜಿಲ್ಲಾ ಘಟಕದ ಅಧ್ಯಕ್ಷ ತಾಜ್ಪೀರ್, ಮದಕರಿ ನಾಯಕ ವಿದ್ಯಾ ಸಂಸ್ಥೆ ಅಧ್ಯಕ್ಷ ಸಂದೀಪ್, ಮಹೋತ್ಸವ ಸಮಿತಿ ಅಧ್ಯಕ್ಷ ಅನಿತ್ ಕುಮಾರ್ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.