ಹೊಸದುರ್ಗ: ತಾಲ್ಲೂಕಿನ ಗೂಳಿಹಟ್ಟಿ ಗ್ರಾಮದಲ್ಲಿ ಕರಿಯಮ್ಮ ದೇವಿಯ ರಥೋತ್ಸವ ಶನಿವಾರ ನೂರಾರು ಭಕ್ತರ ಸಮ್ಮುಖದಲ್ಲಿ ರಥದ ಬೀದಿಯಲ್ಲಿ ವೈಭವದಿಂದ ನೆರವೇರಿತು.

ಶುಕ್ರವಾರ ರಾತ್ರಿ ಎನ್.ಜಿ. ಹಳ್ಳಿ ಗ್ರಾಮದ ಮುತ್ತಿನ ಮುಡಿಯಮ್ಮ ಮತ್ತು ಗೂಳಿಹಟ್ಟಿ ಕರಿಯಮ್ಮ ದೇವಿಯ ಕೂಡು ಭೇಟಿ ನಡೆಯಿತು. ಬಳಿಕ ಗರ್ಭಗುಡಿಯಲ್ಲಿದ್ದ ದೇವಿಗೆ ಶನಿವಾರ ಮುಂಜಾನೆ ವಿಶೇಷ ಪೂಜೆ, ಹವನ, ಕಾರ್ಯಗಳನ್ನು ಸಲ್ಲಿಸಿದ ನಂತರ ಹೂವಿನ ಪಲ್ಲಕ್ಕಿಯಲ್ಲಿ ದೇವಿಯನ್ನು ಕರೆತಂದು ರಥದಲ್ಲಿ ಪ್ರತಿಷ್ಠಾಪಿಸಲಾಯಿತು.

ಭಕ್ತರು ರಥ ಎಳೆಯುವ ಮೂಲಕ ಭಕ್ತಿ ಭಾವ ಮೆರೆದರು. ರಥವನ್ನು ಹೂವು, ಬೃಹತ್ ಹಾರ ಮತ್ತು ವಿವಿಧ ಬಗೆಯ ಬಣ್ಣ ಬಣ್ಣದ ಬಟ್ಟೆಗಳಿಂದ ಸಿಂಗಾರಗೊಂಡಿದ್ದು ನೋಡುಗರ ಕಣ್ಮನ ಸೆಳೆಯುವಂತಿತ್ತು.

ಗೂಳಿಹಟ್ಟಿ ಭೋವಿಹಟ್ಟಿ, ಹುಲಿಕೆರೆ, ದೊಡ್ಡಘಟ್ಟ, ದುಗ್ಗಾವರ, ಪಾಪೇನಹಳ್ಳಿ ಸೇರಿ ಅಕ್ಕ ಪಕ್ಕದ ಗ್ರಾಮದ ಭಕ್ತರು ಆಗಮಿಸಿದ್ದರು.

ರಥೋತ್ಸವ ನಡೆಯುವ ವೇಳೆ ಗ್ರಾಮದ ಭಕ್ತರು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಪೂಜೆ ಸಲ್ಲಿಸಿದರು. ಅಮ್ಮನವರ ದರ್ಶನಕ್ಕಾಗಿ ಆಗಮಿಸಿದ ಭಕ್ತರಿಗಾಗಿ ತಂಪಾದ ಮಜ್ಜಿಗೆ, ಪಾನಕ ವ್ಯವಸ್ಥೆ ಮಾಡಲಾಗಿತ್ತು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260413-44-123173801

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.