ಶುಕ್ರವಾರ, ಮೇ 27, 2022
30 °C
ಗಮನ ಸೆಳೆದ ಬುಡಕಟ್ಟು ಸಂಸ್ಕೃತಿಯ ಆಚರಣೆ

ವೈಭವದ ನುಂಕಮಲೆ ರಥೋತ್ಸವ

ಪ್ರಜಾವಾಣಿ ವಾರ್ತೆ Updated:

ಅಕ್ಷರ ಗಾತ್ರ : | |

Prajavani

ಮೊಳಕಾಲ್ಮುರು: ಜಿಲ್ಲೆಯ ಪ್ರಸಿದ್ಧ ರಥೋತ್ಸವಗಳಲ್ಲಿ ಒಂದಾದ ತಾಲ್ಲೂಕಿನ ನುಂಕಿಮಲೆ ಸಿದ್ದೇಶ್ವರ ಬೆಟ್ಟದಲ್ಲಿ ಗುರುವಾರ ಸಂಜೆ ನುಂಕಪ್ಪಸ್ವಾಮಿ ರಥೋತ್ಸವ ವೈಭವದಿಂದ ನಡೆಯಿತು.

ಕೋವಿಡ್ ಕಾರಣ ಎರಡು ವರ್ಷಗಳಿಂದ ಜಾತ್ರೆಯನ್ನು ನಡೆಸಿರಲಿಲ್ಲ. ಜತೆಗೆ ಈ ಬಾರಿ ನೂತನ ರಥವನ್ನು ಮಾಡಿಸಿರುವ ಕಾರಣ ನಿರೀಕ್ಷೆಗೂ ಮೀರಿ ಭಕ್ತರು ಭಾಗವಹಿಸಿದ್ದರು. ಇದರ ಅಂಗವಾಗಿ ಮೇ 6ರಂದು ಕಂಕಣ ಕಟ್ಟುವ ಮೂಲಕ ಜಾತ್ರೆಗೆ ಚಾಲನೆ ನೀಡಲಾಗಿತ್ತು. ಅಲ್ಲಿಂದ ಪ್ರತಿದಿನ ದೇವಸ್ಥಾನದಲ್ಲಿ ವಿಶೇಷ ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಿಕೊಂಡು ಬರಲಾಗಿತ್ತು.

‘ನಾಥ್’ ಪಂಥಕ್ಕೆ ಒಳಪಟ್ಟಿರುವ ಈ ದೇವಸ್ಥಾನವು ರಾಜ್ಯದಲ್ಲಿರುವ ಪಂಥದ ಪ್ರಮುಖ ದೇವಸ್ಥಾನವಾಗಿದೆ.

ರಥೋತ್ಸವ ಅಂಗವಾಗಿ ಗುರುವಾರ ನುಂಕಿಮಲೆ ಪೀಠದ 113 ನೇ ಪಟ್ಟಾಧ್ಯಕ್ಷ  ಮಂಗಲನಾಥ್ ಸ್ವಾಮೀಜಿ ನೇತೃತ್ವದಲ್ಲಿ ದೇವಸ್ಥಾನದಲ್ಲಿ ಹಲವು ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು. ನಂತರ ರಥಕ್ಕೆ ಅಲಂಕಾರ, ಪೂಜೆ, ಹೋಮ ನಡೆಯಿತು. ಸಂಜೆ 5ಕ್ಕೆ ರಥೋತ್ಸವಕ್ಕೆ ಚಾಲನೆ ನೀಡಲಾಯಿತು.

ದೇವಸ್ಥಾನ ಮುಂಭಾಗದಿಂದ ಆರಂಭವಾದ ರಥೋತ್ಸವ ಪಾದಗಟ್ಟೆ ವರೆಗೆ ಸಾಗಿ ಮರಳಿ ದೇವಸ್ಥಾನ ಮುಂಭಾಗಕ್ಕೆ ಬಂದಿತು. ಚಿತ್ರದುರ್ಗ, ದಾವಣಗೆರೆ, ಬಳ್ಳಾರಿ, ವಿಜಯನಗರ ಮತ್ತು ನೆರೆಯ ಸೀಮಾಂಧ್ರದ ಅನಂತಪುರ ಜಿಲ್ಲೆಗಳಿಂದ ಭಕ್ತರು ಭಾಗವಹಿಸಿದ್ದರು. ಶುಕ್ರವಾರ ಸಂಜೆ ಪ್ರಸಿದ್ಧ ಸಿಡಿ ಮಹೋತ್ಸವ ನಡೆಯಲಿದ್ದು, ಶನಿವಾರ ತೆರೆಬೀಳಲಿದೆ.

ತಾಜಾ ಮಾಹಿತಿ ಪಡೆಯಲು ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ

ತಾಜಾ ಸುದ್ದಿಗಳಿಗಾಗಿ ಪ್ರಜಾವಾಣಿ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಿ: ಆಂಡ್ರಾಯ್ಡ್ ಆ್ಯಪ್ | ಐಒಎಸ್ ಆ್ಯಪ್

ಪ್ರಜಾವಾಣಿ ಫೇಸ್‌ಬುಕ್ ಪುಟವನ್ನುಫಾಲೋ ಮಾಡಿ.

ಈ ವಿಭಾಗದಿಂದ ಇನ್ನಷ್ಟು