ಬುಧವಾರ, 11 ಸೆಪ್ಟೆಂಬರ್ 2024
×
ADVERTISEMENT
ಈ ಕ್ಷಣ :
ADVERTISEMENT

ಹಿರಿಯೂರು | ಮುಂದುವರಿದ ಮಳೆಯ ಅಬ್ಬರ: ಎಂಟು ಮನೆಗಳಿಗೆ ಹಾನಿ

Published 20 ಆಗಸ್ಟ್ 2024, 15:18 IST
Last Updated 20 ಆಗಸ್ಟ್ 2024, 15:18 IST
ಅಕ್ಷರ ಗಾತ್ರ

ಹಿರಿಯೂರು: ತಾಲ್ಲೂಕಿನಲ್ಲಿ ಮೂರನೇ ದಿನವಾದ ಸೋಮವಾರ ರಾತ್ರಿಯೂ ಮಳೆ ಅಬ್ಬರ ಮುಂದುವರಿದಿದ್ದು, ಎಂಟು ಮನೆಗಳಿಗೆ ಹಾನಿಯಾಗಿದೆ. 1.61 ಹೆಕ್ಟೇರ್ ಪ್ರದೇಶದಲ್ಲಿ ಮಳೆಯ ನೀರು ನಿಂತಿದ್ದು, ಬೆಳೆಗೆ ಹಾನಿಯಾಗಿದೆ ಎಂದು ತಹಶೀಲ್ದಾರ್ ರಾಜೇಶ್ ಕುಮಾರ್ ತಿಳಿಸಿದರು.

ಐಮಂಗಲ ಹೋಬಳಿಯ ಗುಳಗೊಂಡನಹಳ್ಳಿಯ ತಿಮ್ಮಣ್ಣ ಅವರ ಮನೆ, ಜವನಗೊಂಡನಹಳ್ಳಿ ಹೋಬಳಿಯ ಕಿಲ್ಲಾರದಹಳ್ಳಿಯ ಕರಿಯಮ್ಮ, ಪಿಲ್ಲಾಲಿ ಗ್ರಾಮದ ನಾಗರಾಜಪ್ಪ, ಕಸಬಾ ಹೋಬಳಿ ಆಲೂರು ಪಾರ್ವತಮ್ಮ ಮತ್ತು ರವಿಕುಮಾರ್, ವಸಂತನಗರದ ಹನುಮಂತಪ್ಪ, ಪಿ.ಡಿ. ಕೋಟೆ ಗ್ರಾಮದ ಕಮಲಮ್ಮ, ಗೂಳ್ಯ ಗ್ರಾಮದ ದ್ಯಾವರಣ್ಣ ಅವರ ಮನೆಗಳಿಗೆ ಹಾನಿಯಾಗಿದೆ. ಸಕ್ಕರ ಗ್ರಾಮದ ಶಿವರಾಜ್ ಪಟೇಲ್ ಅವರ ಹೊಲದಲ್ಲಿನ ಮೆಕ್ಕೆಜೋಳ, ಹರ್ತಿಕೋಟೆ ಗ್ರಾಮದ ರಾಮಕೃಷ್ಣಪ್ಪ ಎಂಬ ರೈತರ ಈರುಳ್ಳಿ ಬೆಳೆ ಮಳೆಯ ನೀರಿನಲ್ಲಿ ಮುಳುಗಿ ಹಾಳಾಗಿದೆ ಎಂದು ಹೇಳಿದ್ದಾರೆ.

ತಾಲ್ಲೂಕಿನ ಇಕ್ಕನೂರಿನಲ್ಲಿ ಸೋಮವಾರ ರಾತ್ರಿ 48.2 ಮಿ.ಮೀ.ಮಳೆಯಾಗಿದ್ದರೆ, ಬಬ್ಬೂರಿನಲ್ಲಿ 34.0, ಈಶ್ವರಗೆರೆಯಲ್ಲಿ 30.2, ಹಿರಿಯೂರಿನಲ್ಲಿ 25.6 ಹಾಗೂ ಸೂಗೂರಿನಲ್ಲಿ 17.1 ಮಿ.ಮೀ.ಮಳೆಯಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT