ಹೊಸದುರ್ಗ: ಪಟ್ಟಣ ಸೇರಿದಂತೆ ತಾಲ್ಲೂಕಿನ ವಿವಿಧೆಡೆ ಸೋಮವಾರ ಒಂದು ಗಂಟೆ ಕಾಲ ಗುಡುಗು ಸಹಿತ ಬಿರುಸಿನ ಮಳೆಯಾಗಿದೆ.

ಸೋಮವಾರ ರಾತ್ರಿ 8 ಗಂಟೆಗೆ ಆರಂಭವಾದ ಮಳೆ ಸತತ ಒಂದು ಗಂಟೆ ಒಂದೇ ಸಮನೆ ಸುರಿಯಿತು. ಪಟ್ಟಣ ಸೇರಿದಂತೆ ವಿವಿಧೆಡೆಯೂ ವರುಣನ ಆರ್ಭಟ ಬಲು ಜೋರಾಗಿಯೇ ಇತ್ತು. ಬಿಸಿಲಿನ ಪ್ರಖರತೆಯಿಂದ ಕಾದಿದ್ದ ಧರೆಗೆ ವರುಣನ ಮೊದಲ ಸಿಂಚನ ಒಂದಿಷ್ಟು ತಂಪನೆರೆಯಿತು.ಇದರಿಂದ ರಾತ್ರಿ ವಾತಾವರಣ ಸ್ವಲ್ಪ ತಂಪಾಗಿತ್ತು.

ಪಟ್ಟಣದಲ್ಲಿ ಚರಂಡಿ ಸೇರಿದಂತೆ ಗುಂಡಿಗಳು ತುಂಬಿವೆ. ಖಾಲಿ ನಿವೇಶನದಲ್ಲಿಯೂ ಸಹ ಅಲ್ಲಲ್ಲಿ ನೀರು ನಿಂತಿದೆ.

ಚಿಕ್ಕಜಾಜೂರಿನಲ್ಲಿಯೂ ಗಾಳಿ ಮಿಂಚು ಸಹಿತ ಆಲಿಕಲ್ಲು ಮಳೆ ಮಳೆ ಯಾಗಿದೆ.

ನಾಯಕನಹಟ್ಟಿ ಸುತ್ತಮುತ್ತ ಗುಡುಗು, ಮಿಂಚು ಸಹಿತ ಹದ ಮಳೆಯಾಯಿತು.

ಮೊಳಕಾಲ್ಮುರು: ಈ ವರ್ಷದ ಪ್ರಥಮ ಮಳೆ ಸೋಮವಾರ ಸಂಜೆ ತಾಲ್ಲೂಕಿನ ಕೆಲ ಗ್ರಾಮಗಳಲ್ಲಿ ಬಿದ್ದಿದೆ.

ಬಿ.ಜಿ.ಕೆರೆ, ಕೊಂಡ್ಲಹಳ್ಳಿ, ಕೋನಸಾಗರ, ಮೊಳಕಾಲ್ಮುರು, ಮೊಗಲಹಳ್ಳಿ, ಹಾನಗಲ್, ರಾಯಾಪುರ ಸೇರಿದಂತೆ ಕಸಬಾ ಹೋಬಳಿಯ ಅನೇಕ ಕಡೆ ಸಂಜೆ 6 ಗಂಟೆ ಸುಮಾರಿನಲ್ಲಿ ಗುಡುಗು, ಸಿಡಿಲಿನ ಅರ್ಭಟ ಕೇಳಿ ಬಂದಿತು. ಐದು ನಿಮಿಷಗಳ ಕಾಲ ತುಂತುರು ಮಳೆಯ ಸಿಂಚನವಾಗಿದ್ದು ಯುಗಾದಿ ಮುನ್ನ ಮಳೆ ಲಕ್ಷಣ ರೈತರ ಸಂತಸಕ್ಕೆ ಎಡೆ ಮಾಡಿಕೊಟ್ಟಿದೆ.

ಯುಗಾದಿ ವೇಳೆ ತಾಲ್ಲೂಕಿನ ಕೆಲವೆಡೆ ರೈತರು ವಿಶೇಷ ಆಚರಣೆ ಮಾಡುವುದು ವಾಡಿಕೆಯಾಗಿದ್ದು, ಇದಕ್ಕೆ ಮಳೆ ಸಿಂಚನ ಪುಷ್ಠಿ ನೀಡಿದೆ.

ಸಿರಿಗೆರೆ: ಪಟ್ಟಣದಲ್ಲಿ ರಾತ್ರಿ 9.45ರ ಸುಮಾರಿಗೆ ಗುಡುಗು ಸಹಿತ ಮಳೆ ಬಂದಿದೆ. ರಸ್ತೆಗಳಲ್ಲಿ ನೀರು ಹರಿಯಿತು.

ಮಧ್ಯಾಹ್ನ ನಾಲ್ಕಾರು ಹನಿ ಬಿದ್ದು ಹೋಗಿದ್ದ ಮಳೆ ರಾತ್ರಿ ಜೋರಾಗಿತ್ತು.

ಗರಿಷ್ಠ ಪ್ರಮಾಣದ ಬಿಸಿಲು ಅನುಭವಿಸುತ್ತಿದ್ದ ಜನರು ಮಳೆಯ ತಂಪನ್ನು ಅನುಭವಿಸುವಂತಾಯಿತು.

ಬೇಸಿಗೆಯಲ್ಲಿ ಹೀಗೆ ಅಕಾಲಿಕವಾಗಿ ಬರುವ ಮಳೆಯಿಂದ ಅಡಿಕೆಯ ಹೊಂಬಾಳೆಯಲ್ಲಿ ಈಗ ತಾನೆ ಗಟ್ಟಿಯಾಗುವ ಕಾಯಿಗಳು ನೆಲಕ್ಕೆ ಬಿದ್ದು ಇಳುವರಿ ಕಡಿಮೆ ಆಗುವುದೆಂಬ ಆತಂಕ ರೈತರದ್ದಾಗಿದೆ.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260317-44-557555288

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.