ಬುಧವಾರ, 24 ಏಪ್ರಿಲ್ 2024
×
ADVERTISEMENT
ಈ ಕ್ಷಣ :
ADVERTISEMENT
ADVERTISEMENT

ಮೊದಲ ದಿನವೇ ‘ಪುನರ್ವಸು’ ಅಬ್ಬರ

ಮುಂಜಾನೆಯಿಂದಲೇ ಬಿರುಸಾದ ಮಳೆ
Last Updated 7 ಜುಲೈ 2022, 4:37 IST
ಅಕ್ಷರ ಗಾತ್ರ

ಚಿತ್ರದುರ್ಗ: ಎರಡು ದಿನಗಳಿಂದ ಮಂದಗತಿಯಲ್ಲಿದ್ದ ಮಳೆ ಬುಧವಾರ ಬಿರುಸು ಪಡೆಯಿತು. ಆರಂಭವಾದ ಮೊದಲ ದಿನವೇ ಪುನರ್ವಸು ಮಳೆಬಿರುಸಾಯಿತು.

ಮಂಗಳವಾರ ತಡರಾತ್ರಿಯಿಂದ ಮುಂಜಾನೆವರೆಗೂ ಸೋನೆಯಂತೆ ಸುರಿದ ಮಳೆ ಬುಧವಾರ ಮಧ್ಯಾಹ್ನದ ವೇಳೆಗೆ ಜೋರಾಯಿತು.

ಬೆಳಿಗ್ಗೆ ಜಿಟಿ ಜಿಟಿ ಮಳೆಯಲ್ಲೇ ವಿದ್ಯಾರ್ಥಿಗಳು, ಶಿಕ್ಷಕರು ಶಾಲಾ, ಕಾಲೇಜುಗಳಿಗೆ ಹಾಗೂ ಅಧಿಕಾರಿಗಳು ಕಚೇರಿಗೆ ತೆರಳಿದರು. ಮಳೆ ಕೊಂಚ ಜೋರಾದ ಕಾರಣ ತಗ್ಗು ಪ್ರದೇಶಕ್ಕೆ ನೀರು ನುಗ್ಗಿ ಜನರು ಸಂಕಷ್ಟಕ್ಕೆ ಸಿಲುಕಿದರು. ಮಧ್ಯಾಹ್ನ 2ರ ವೇಳೆಗೆ ಮಳೆ ಅಬ್ಬರಿಸಿದ ಕಾರಣ ತುರುವನೂರು ರಸ್ತೆ ಹಾಗೂ ಮೇದೆಹಳ್ಳಿ ರಸ್ತೆ ಅಂಡರ್‌ಪಾಸ್‌ಗಳು ಜಲಾವೃತಗೊಂಡವು. ಇದರಿಂದ ಜನರು ತೊಂದರೆ ಅನುಭವಿಸಿದರು.

ನಗರದ ಬಹುತೇಕ ಕಡೆ ರಸ್ತೆ ವಿಸ್ತರಣೆ ಕಾಮಗಾರಿ ನಡೆಯುತ್ತಿರುವ ಕಾರಣ ರಸ್ತೆಗಳು ಕೆರೆಗಳಂತಾದವು. ಜೋಗಿಮಟ್ಟಿ ರಸ್ತೆ, ಗಾಯತ್ರಿ ಸರ್ಕಲ್‌, ಹೊಳಲ್ಕೆರೆ ರಸ್ತೆಯಲ್ಲಿ ವಾಹನ ಸವಾರರು ತೀವ್ರ ಸಮಸ್ಯೆ ಅನುಭವಿಸಿದರು. ಚರಂಡಿಗಳಲ್ಲಿ ಕಸ ತುಂಬಿರುವ ಕಾರಣ ಸ್ಟೇಡಿಯಂ ರಸ್ತೆ, ಕೆಎಸ್‌ಆರ್‌ಟಿಸಿ ಡಿಪೊ ಮುಂಭಾಗ, ಎಸ್‌ಬಿಐ ವೃತ್ತ ಸೇರಿ ವಿವಿಧೆಡೆ ರಸ್ತೆಗಳ ಮೇಲೆ ನೀರು ಹರಿಯುತ್ತಿತ್ತು.

ಮೊಳಕಾಲ್ಮುರಿನಲ್ಲಿ ಮಂಗಳವಾರ ರಾತ್ರಿ 26 ಮಿ.ಮೀ., ರಾಂಪುರದಲ್ಲಿ 20 ಮಿ.ಮೀ., ದೇವಸಮುದ್ರ 13 ಮಿ.ಮೀ. ರಾಯಾಪುರ 18 ಮಿ.ಮೀ., ಹೊಳಲ್ಕೆರೆ 14 ಮಿ.ಮೀ., ಬಿ.ದುರ್ಗ 13 ಮಿ.ಮೀ., ಎಚ್‌.ಡಿ.ಪುರ 10 ಮಿ.ಮೀ., ಹೊಸದುರ್ಗ 10 ಮಿ.ಮೀ., ಬಾಗೂರು 12 ಮಿ.ಮೀ ಮಳೆಯಾಗಿದೆ. ಚಿತ್ರದುರ್ಗದಲ್ಲಿ 12 ಮಿ.ಮೀ., ಭರಮಸಾಗರ 11 ಮಿ.ಮೀ., ಸಿರಿಗೆರೆ 16 ಮಿ.ಮೀ., ಚಳ್ಳಕೆರೆಯಲ್ಲಿ 8 ಮಿ.ಮೀ., ನಾಯಕನಹಟ್ಟಿ 10 ಮಿ.ಮೀ. ಹಾಗೂ ಹಿರಿಯೂರಿನಲ್ಲಿ 8 ಮಿ.ಮೀ. ಮಳೆಯಾಗಿದೆ ಎಂದು ಜಿಲ್ಲಾಧಿಕಾರಿ ಕಚೇರಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT
ADVERTISEMENT
ADVERTISEMENT
ADVERTISEMENT
ADVERTISEMENT