ಹಿರಿಯೂರು: ‘ಡಿ.ಸುಧಾಕರ್ ನಿಧನದಿಂದಾಗಿ ನಡೆಯಲಿರುವ ಹಿರಿಯೂರು ವಿಧಾನಸಭಾ ಕ್ಷೇತ್ರದ ಉಪ ಚುನಾವಣೆಯಲ್ಲಿ ಹೊರಗಿನವರ ಬದಲು ಸ್ಥಳೀಯರಿಗೇ ಟಿಕೆಟ್ ನೀಡಬೇಕು’ ಎಂದು ತಾಲ್ಲೂಕು ಸ್ಥಳೀಯರ ಸ್ವಾಭಿಮಾನ ವೇದಿಕೆ ನೇತೃತ್ವದಲ್ಲಿ ಏರ್ಪಡಿಸಿದ್ದ ಜನಾಭಿಪ್ರಾಯ ಸಭೆಯಲ್ಲಿ ಒಕ್ಕೊರಲ ಹಕ್ಕೊತ್ತಾಯ ಕೇಳಿಬಂದಿತು.

ನಗರದ ಮಾರಿಕಣಿವೆ ವೃತ್ತದಲ್ಲಿ ಮಂಗಳವಾರ ಹಮ್ಮಿಕೊಂಡಿದ್ದ ಸಭೆಯಲ್ಲಿ ಮಾತನಾಡಿದ ಕಾರ್ಯಕ್ರಮದ ಸಂಘಟಕ ಬೇತೂರು ಪಾಳ್ಯ ರಾಜು, ‘ಬಹುತೇಕ ಚುನಾವಣೆಗಳಲ್ಲಿ ಹೊರಗಿನಿಂದ ಬಂದವರೇ ನಮ್ಮ ತಾಲ್ಲೂಕನ್ನು ಪ್ರತಿನಿಧಿಸಿ ಬರಡು ಮಾಡಿದ್ದಾರೆ. ಇನ್ನಾದರೂ ಕ್ಷೇತ್ರದ ಮತದಾರರು ಎಚ್ಚೆತ್ತುಕೊಳ್ಳಬೇಕು. ಸ್ಥಳೀಯ ವ್ಯಕ್ತಿಗೆ ರಾಜಕೀಯ ಪಕ್ಷಗಳು ಟಿಕೆಟ್ ಕೊಡುವಂತೆ ಒತ್ತಡ ಹೇರಬೇಕು’ ಎಂದರು.

‘ಬಯಲುಸೀಮೆಯ ಜನರ ನೀರಿನ ಬವಣೆ ಅರಿತು ಮೈಸೂರು ಒಡೆಯರು ತಾಲ್ಲೂಕಿನಲ್ಲಿ ಅಣೆಕಟ್ಟೆ ನಿರ್ಮಿಸುವ ಮೂಲಕ ಜನಪರ ಕಾಳಜಿ ತೋರಿಸಿದ್ದಾರೆ. ನಾಲೆಗಳನ್ನು ದುರಸ್ತಿ ಮಾಡಿಸಲು, ಕೆರೆಗಳಿಗೆ ಅಣೆಕಟ್ಟೆಯ ನೀರು ತುಂಬಿಸಲು ನಾವು ಆಯ್ಕೆ ಮಾಡಿದ ಜನಪ್ರತಿನಿಧಿಗಳಿಂದ ಸಾಧ್ಯವಾಗಿಲ್ಲ. ಕ್ಷೇತ್ರದ ಮೂಲ ಸಮಸ್ಯೆಗಳ ಪರಿಹಾರ ಸ್ಥಳೀಯರಿಂದ ಮಾತ್ರ ಸಾಧ್ಯ ಎಂಬ ಸತ್ಯವನ್ನು ಎಲ್ಲರೂ ಅರ್ಥಮಾಡಿಕೊಳ್ಳಬೇಕು’ ಎಂದು ವಿವರಿಸಿದರು.

‘ಹೊರಗಿನವರಿಗೆ ಟಿಕೆಟ್ ಕೊಟ್ಟರೆ ಹಣ ಹಂಚಿ ಗೆದ್ದು, ನಂತರ ಜನರ ಕೈಗೆ ಸಿಗುವುದೇ ಕಷ್ಟವಾಗುತ್ತದೆ’ ಎಂದು ನಿವೃತ್ತ ಪ್ರಾಂಶುಪಾಲ ಕೆ. ರುದ್ರಪ್ಪ ಎಚ್ಚರಿಸಿದರು.

‘ಹೊರಗಡೆಯವರು ಬಂದು ಅವರಿಗೆ ಬೇಕಿದ್ದುದನ್ನು ಸಾಧಿಸಿಕೊಂಡು ಹೋಗುತ್ತಾರೆ. ಆಗ ಸ್ಥಳೀಯ ಸಮಸ್ಯೆಗಳು ಗೌಣವಾಗುತ್ತವೆ’ ಎಂದು ಕಾರ್ಮಿಕ ಪರಿಷತ್ ಅಧ್ಯಕ್ಷ ಪರಮೇಶ್ ಬೇಸರ ವ್ಯಕ್ತಪಡಿಸಿದರು.

‘ಚುನಾವಣೆ ಸಂದರ್ಭದಲ್ಲಿ ಹಣಕ್ಕೆ ನಮ್ಮನ್ನು ಮಾರಿಕೊಂಡರೆ ನಂತರ ಪರಿತಪಿಸಬೇಕಾಗುತ್ತದೆ’ ಎಂದು ಕಾಡುಗೊಲ್ಲ ಸಂಘದ ತಾಲ್ಲೂಕು ಘಟಕದ ಅಧ್ಯಕ್ಷ ಪಿ.ಆರ್.ದಾಸ್ ಎಚ್ಚರಿಸಿದರು.

‘ಜಾತಿ, ವರ್ಗ, ಧರ್ಮ ಬೆರೆಸದೆ ಕ್ಷೇತ್ರದ ಸಮಸ್ಯೆಗಳ ಪರಿಹಾರಕ್ಕೆ ಸ್ಥಳೀಯರನ್ನು ಗೆಲ್ಲಿಸೋಣ’ ಎಂದು ನಿವೃತ್ತ ಪ್ರಾಂಶುಪಾಲ ಎಚ್.ಟಿ. ಚಂದ್ರಶೇಖರ್ ಮನವಿ ಮಾಡಿದರು.

‘ಮತದಾರರು ಹಣ ನೋಡುತ್ತಾರೆಯೇ ಹೊರತು ಸ್ಥಳೀಯರು ಯಾರು, ಒಳ್ಳೆಯವರು ಯಾರು ಎಂಬುದನ್ನು ನೋಡದಿರುವುದು ನಮ್ಮ ಕ್ಷೇತ್ರಕ್ಕೆ ಅಂಟಿರುವ ಕಳಂಕ’ ಎಂದು ದೇವರಕೊಟ್ಟ ನಾಗರಾಜ್ ವಿಷಾದಿಸಿದರು.

‘ವಾಣಿವಿಲಾಸದಂತಹ ಅಣೆಕಟ್ಟೆ ಇದ್ದೂ ತಾಲ್ಲೂಕಿನಲ್ಲಿ ಕುಡಿಯುವ ನೀರಿಗಾಗಿ ಜನರು ಹೋರಾಟ ನಡೆಸುತ್ತಿರುವುದು ವಿಪರ್ಯಾಸ. ಸ್ಥಳೀಯ ನಾಯಕತ್ವದಿಂದ ಮಾತ್ರ ನೀರಾವರಿ, ವಿದ್ಯುತ್, ಶಿಕ್ಷಣ, ಆರೋಗ್ಯ, ಸಾರಿಗೆ ಅಭಿವೃದ್ಧಿ ಸಾಧ್ಯ ಎಂಬುದನ್ನು ಮತದಾರರು ಅರಿಯಬೇಕು’ ಎಂದು ಉದ್ಯಮಿ ಬಾಬುಲಾಲ್ ಬಲಾರ್ ತಿಳಿಸಿದರು.

ನಿವೃತ್ತ ಪ್ರಾಂಶುಪಾಲ ಜಯಣ್ಣ, ಜಾನ್ ಮೈಕಲ್, ಧರ್ಮಪುರ ಕೃಷ್ಣಮೂರ್ತಿ, ಸರ್ವಮಂಗಳ ರಮೇಶ್ ಮಾತನಾಡಿದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260603-44-1169571519

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.