ಹಿರಿಯೂರು: ನಗರದ ಹರಿಶ್ಚಂದ್ರ ಘಾಟ್ ರುದ್ರಭೂಮಿಯಲ್ಲಿ ಶನಿವಾರ ಬಾಬಾಸಾಹೇಬ್ ಅಂಬೇಡ್ಕರ್ ಅವರ ಪುಣ್ಯಸ್ಮರಣೆ ಕಾರ್ಯಕ್ರಮವನ್ನು ಮಾನವ ಬಂಧುತ್ವ ವೇದಿಕೆ ಹಾಗೂ ದಲಿತಪರ ಸಂಘಟನೆಗಳ ಒಕ್ಕೂಟದ ನೇತೃತ್ವದಲ್ಲಿ ಆಚರಿಸಲಾಯಿತು.

‘ಜೈಭೀಮ್, ಜೈ ಅಂಬೇಡ್ಕರ್ ಎಂದು ಘೋಷಣೆ ಹಾಕಿದರೆ ಸಾಲದು, ನಮ್ಮ ಮಕ್ಕಳು ಐಎಎಸ್, ಐಪಿಎಸ್, ಐಎಫ್ಎಸ್ ಪರೀಕ್ಷೆ ಪಾಸು ಮಾಡಬೇಕು. ವೈದ್ಯ, ಎಂಜಿನಿಯರ್ ಆಗಬೇಕು. ಆಗ ಮಾತ್ರ ಸಮಾಜದ ಮುಖ್ಯವಾಹಿನಿಗೆ ನಾವು ಬರಲು ಸಾಧ್ಯ’ ಎಂದು ದಲಿತ ಮುಖಂಡ ಘಾಟ್ ರವಿ ಹೇಳಿದರು.

‘ಹರಿಶ್ಚಂದ್ರಘಾಟ್ ರುದ್ರಭೂಮಿಯಲ್ಲಿ ಕಾರ್ಯಕ್ರಮ ಮಾಡಲು ಅವಕಾಶ ಸಿಕ್ಕಿರುವುದಕ್ಕೆ ನಮ್ಮ ಹೋರಾಟವೇ ಕಾರಣ. ನಗರದಲ್ಲಿ ನಮಗೆ ಶವಸಂಸ್ಕಾರಕ್ಕೆ ಜಾಗವೇ ಇರಲಿಲ್ಲ. ಸತತ ಹೋರಾಟದಿಂದ ರುದ್ರಭೂಮಿ ಪಡೆದು ಗೌರವಯುತವಾಗಿ ಅಂತ್ಯಕ್ರಿಯೆ ಮಾಡಲು ಸಾಧ್ಯವಾಗಿದೆ’ ಎಂದು ಅವರು ತಿಳಿಸಿದರು.

ದಲಿತ ಒಕ್ಕೂಟದ ಅಧ್ಯಕ್ಷ ತಿಮ್ಮರಾಜು ಮಾತನಾಡಿ, ಶಿಕ್ಷಣ, ಸಂಘಟನೆ, ಹೋರಾಟಗಳ ಮೂಲಕ ನಾವು ನಮ್ಮ ಹಕ್ಕುಗಳನ್ನು ಪಡೆಯಬೇಕು. ಶಿಕ್ಷಣ ಪಡೆದಾಗ ಸಂಘಟನೆಗೆ ಬಹುದೊಡ್ಡ ಶಕ್ತಿ ಬರುತ್ತದೆ. ಮೌಢ್ಯ ನಿವಾರಿಸುವ ನಿಟ್ಟಿನಲ್ಲಿ ಮಾನವ ಬಂಧುತ್ವ ವೇದಿಕೆ ನಡೆಸುವ ಎಲ್ಲಾ ಕಾರ್ಯಕ್ರಮಗಳಿಗೆ ದಲಿತಪರ ಸಂಘಟನೆಗಳು ಪೂರ್ಣ ಸಹಕಾರ ನೀಡಲಿವೆ ಎಂದು ಭರವಸೆ ನೀಡಿದರು.

‘ಮೌಢ್ಯ ಆಚರಣೆ ನಮ್ಮನ್ನು ಶತಮಾನದಷ್ಟು ಹಿಂದಕ್ಕೆ ಕರೆದೊಯ್ಯುತ್ತದೆ. ದೆವ್ವ, ಭೂತ, ಪ್ರೇತ, ಪಿಶಾಚಿ ಎಲ್ಲೂ ಇಲ್ಲ. ನಮ್ಮ ಮನಸಿನ ಭಾವನೆಗಳನ್ನು ಬದಲಾಯಿಸಿಕೊಳ್ಳಬೇಕಿದೆ’ ಎಂದು ರೈತ ಸಂಘದ ಮುಖಂಡ ಹೊರಕೇರಪ್ಪ ಅಭಿಪ್ರಾಯಪಟ್ಟರು.

ರುದ್ರಭೂಮಿಯಲ್ಲಿ ಸಾಮೂಹಿಕ ಭೋಜನದ ವ್ಯವಸ್ಥೆ ಮಾಡಲಾಗಿತ್ತು. ಕಾರ್ಯಕ್ರಮದಲ್ಲಿ ಗಾಂಧಿನಗರ ಮಹಾಂತೇಶ್, ಶ್ರೀಧರ್ ಘಾಟ್, ಮಂಜುನಾಥ್ ಘಾಟ್, ಸಿದ್ಧಾರ್ಥ, ಧರ್ಮಪುರ ರಂಗಸ್ವಾಮಿ, ಪುಟ್ಟಪ್ಪ ಕೂನಿಕೆರೆ, ಹುಚ್ಚವನಹಳ್ಳಿ ರಂಗಸ್ವಾಮಿ, ಶಹಜಾನ್, ಕಣಜನಹಳ್ಳಿ ದುಶ್ಯಂತ್, ರಮೇಶ್ ಬೆಳ್ಳಿ, ರಂಗನಾಥ್ ಸೋಮೇರಹಳ್ಳಿ, ಲಕ್ಕೇನಹಳ್ಳಿ ಮಂಜುನಾಥ್ ಪಾಲ್ಗೊಂಡಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.