ಹಿರಿಯೂರು: ‘ತಂಬಾಕು ಮೊದಲಾದ ಮಾದಕ ವಸ್ತುಗಳ ಸೇವನೆಯಿಂದ ಅನಾರೋಗ್ಯ ಖಚಿತ. ದುಶ್ಚಟಗಳಿಂದ ದೂರವಿದ್ದು, ಆರೋಗ್ಯವಂತ ಬದುಕು ರೂಪಿಸಿಕೊಳ್ಳಿ’ ಎಂದು ನಿವೃತ್ತ ಪ್ರಾಂಶುಪಾಲ ಎಚ್.ಟಿ. ಚಂದ್ರಶೇಖರಯ್ಯ ಸಲಹೆ ನೀಡಿದರು.

ನಗರದ ಮಿರ್ಜಾ ಬಡಾವಣೆಯಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ವತಿಯಿಂದ ಈಚೆಗೆ ಏರ್ಪಡಿಸಿದ್ದ ವಿಶ್ವ ತಂಬಾಕು ವಿರೋಧಿ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

‘ತಂಬಾಕು ಸೇವನೆಯಿಂದ ಕ್ಯಾನ್ಸರ್ ಬರುತ್ತದೆ. ಇದು ಇಡೀ ಕುಟುಂಬವನ್ನು ಆರ್ಥಿಕವಾಗಿ ಆಪೋಷನ ತೆಗೆದುಕೊಳ್ಳುತ್ತದೆ’ ಎಂದು ಎಚ್ಚರಿಸಿದರು.

‘ಮಾದಕ ದ್ರವ್ಯ ಸೇವನೆಯಿಂದ ಸಿಗುವ ಖುಷಿ ಕ್ಷಣಿಕ. ದಿನಕಳೆದಂತೆ ದೇಹದ ಇಂಚಿಂಚೂ ಕೃಷವಾಗುತ್ತದೆ. ಪೌಷ್ಠಿಕ ಆಹಾರ ಸೇವಿಸಿ ಒಳ್ಳೆಯ ಹವ್ಯಾಸ ರೂಢಿಸಿಕೊಳ್ಳಬೇಕು’ ಎಂದು ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ತ್ರಿಯಂಭಕಮೂರ್ತಿ ಸಲಹೆ ನೀಡಿದರು.

‘ಮದ್ಯವರ್ಜನ ಶಿಬಿರ ಆಯೋಜಿಸುವ ಮೂಲಕ 30 ಜನ ಮದ್ಯ ತ್ಯಜಿಸಿ ಉತ್ತಮ ಬದುಕು ನಡೆಸುವಂತೆ ಮಾಡಲಾಗಿದೆ’ ಎಂದು ಯೋಜನಾಧಿಕಾರಿ ರವಿ ಹಿತ್ತಲಮನಿ ತಿಳಿಸಿದರು.

ಒಕ್ಕೂಟದ ಅಧ್ಯಕ್ಷೆ ಹಸೀನಾ, ವಲಯ ಮೇಲ್ವಿಚಾರಕ ಆರ್.ಸಂತೋಷ್, ಸೇವಾ ಪ್ರತಿನಿಧಿ ಶಾಂತಕುಮಾರಿ, ಮಿರ್ಜಾ ಬಡಾವಣೆ ಒಕ್ಕೂಟದ ಅಧ್ಯಕ್ಷೆ ಸರಸ್ವತಿ ಭಾಗವಹಿಸಿದ್ದರು.

ಮೂಲತಃ ಪ್ರಜಾವಾಣಿ ಮುದ್ರಣ ಆವೃತ್ತಿಯಿಂದ ಇದನ್ನು ಪಡೆಯಲಾಗಿದೆ. ಎಐ ನೆರವಿನ ವರ್ಗೀಕರಣದಿಂದಾಗಿ ವಿಭಾಗ ಮತ್ತು ಬಳಸಿರುವ ಪ್ರಾತಿನಿಧಿಕ ಚಿತ್ರ ತಪ್ಪಾಗಿರಬಹುದು. ಸುದ್ದಿಯ ವಿಷಯದಲ್ಲಿ ಯಾವುದೇ ಬದಲಾವಣೆ ಇಲ್ಲ
260604-44-1771992515

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.